ಮುಂದಗೋಡ

ಸಾವಯವ ಗೊಬ್ಬರ ಬಳಕೆ ಕುರಿತು ಕಾರ್ಯಾಗಾರ

ಸಾವಯವ ಗೊಬ್ಬರ ಬಳಕೆ ಕುರಿತು ಕಾರ್ಯಾಗಾರ

ಲೋಕದರ್ಶನ ವರದಿ

ಮುಂಡಗೋಡ: ತಾಲೂಕಿನ ಕಾವಲಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಚಿಗಳ್ಳಿ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ ಹಾಗೂ ಉಪಯೋಗಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಗುರುವಾರ ಆಯೋಜಿಸಲಾಗಿತ್ತು.  

             ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್. ಕುಲಕರ್ಣಿ  ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ಬಸವರಾಜ ನಡುವಿನಮನಿ ಸಾವಯವ ಕೃಷಿ ಮತ್ತು ಸಮಗ್ರ ಕೃಷಿ ಪದ್ಧತಿ ಕುರಿತು ಮಾಹಿತಿ ನೀಡಿ ಆಸಕ್ತ ಕೃಷಿಕರು ಪ್ರಾತ್ಯಕ್ಷಿಕೆಗಾಗಿ ತಾವು ಮಾಡುತ್ತಿರುವ ಸಾವಯವ ಕೃಷಿ ಹೊಲಗದ್ದೆಗಳಿಗೆ  ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ತಿಳಿಸಿದರು. 

ವಲಯ ಮೇಲ್ವಿಚಾರಕ ಗಿರೀಶ ಹೆಗಡೆ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕಿಟನಾಶಕ ಬಳಕೆಯಿಂದ  ಆಗುವ ದುಷ್ಪರಿಣಾಮಗಳು ಮತ್ತು ಸಾವಯವ ಕೃಷಿ ಪದ್ಧತಿಯಿಂದಾಗುವ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಿದರು.    

  ಈ ವೇಳೆ ತಾಲೂಕು ಎನ್.ಆರ್.ಎಲ್.ಎಮ್. ವಲಯ ಮೇಲ್ವಿಚಾರಕಿ ಶ್ಯಾಮಲಾ ನಾಯ್ಕ, ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ, ಆರೋಗ್ಯ ಸಹಾಯಕಿಯರು,  ಆಶಾ ಕಾರ್ಯಕರ್ತೆಯರು , ಒಕ್ಕೂಟದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ,ಸ್ವ ಸಹಾಯ ಸಂಘದ ಸದಸ್ಯರು, ಚಿಗಳ್ಳಿ ಎಸ್.ಜಿ.ಪಿ.ಎಲ್.ಎಫ್.ನ ಎಮ್.ಬಿ.ಕೆ.ರುಕ್ಮಿಣಿ ಹುಲ್ಮನಿ, ಎಲ್.ಸಿ.ಆರ್ಪಿ. ರಂಜಿತಾ, ನಿರ್ಮಲಾ, ಕೆ.ಎಸ್. ಮತ್ತು ಪಿ.ಎಸ್. ಸಖಿಯರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಗುಡ್ಡಪ್ಪ ಕಾರ್ಯಕ್ರಮ ನಿರೂಪಿಸಿದರು.ರುಕ್ಮಿಣಿ ಹುಲ್ಮನಿ ವಂದಿಸಿದರು.

 

ಸುದ್ದಿ ಓದಿ