ಮುಂಡರಗಿ

ನನ್ನ ಮಣ್ಣು-ನನ್ನ ಜೀವ ಕುರಿತು ಕಾರ್ಯಾಗಾರ

ನನ್ನ ಮಣ್ಣು-ನನ್ನ ಜೀವ ಕುರಿತು ಕಾರ್ಯಾಗಾರ

ಮುಂಡರಗಿ :ಸಾವಯವ ಗೊಬ್ಬರವು ಮಣ್ಣಿಗೆ ಪೋಷಕಾಂಶಗಳನ್ನು ಸೇರಿಸುವುದರ ಜೊತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ವಿಜಯನಗರ ಸಕ್ಕರೆ ಕಾರ್ಖಾನೆ ಕಂಪನಿಯ ಉದ್ಯಮದಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದು, ತನ್ನ ಉತ್ಪನ್ನಗಳಾದ ಸಕ್ಕರೆಯ ವಿವಿಧ ಪ್ರಕಾರಗಳು ಗಾಹೂ ಇದಕ್ಕೆ ಸಂಬಂದಿಸಿದ ಇತರೆ ಉತ್ಪನ್ನಗಳನ್ನು ಒಳಗೊಂಡಿದೆ. ಗುಣಮಟ್ಟ ಮತ್ತು ನಿರಂತರ ನವೀನತೆಗೆ ನಮ್ಮ ವಿಭಿನ್ನತೆಗಳಾಗಿವೆ ಎಂದು ಕಾರ್ಖಾನೆಯ ಜನರಲ್ ಮ್ಯಾನೇಜರ್ ಟಿ.ಎಸ್‌.ಜಯಚಂದ್ರನ್ ಹೇಳಿದರು. 

  ಪಟ್ಟಣದ ಶ್ರೀ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ವಿಜಯನಗರ ಸುಗರ‌್ಸ ಪ್ರೈ.ಲಿ ಮತ್ತು ಸುದಿನಿ ಪೌಂಡೇಶನ್ ಹೈದ್ರಾಬಾದ್ ಇವುಗಳ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ಹಮ್ಮಿಕೊಂಡಿರುವ ಸಮಗ್ರ ಮಣ್ಣಿನ ಆರೋಗ್ಯ ನಿರ್ವಹಣೆ ನನ್ನ ಮಣ್ಣು-ನನ್ನ ಜೀವ ಕುರಿತಾದ ಕಾರ್ಯಾಗಾರದ ಉದ್ಘಾಟನೆ ಮಾಡಿ ಮಾತನಾಡಿದರು.ಸಾವಯವ ಗೊಬ್ಬರವು ಮಣ್ಣಿನಲ್ಲಿರುವ ಇಂಗಾಲವನ್ನು ಹೆಚ್ಚಿಸುತ್ತದೆ ಮತ್ತು ವಾತಾವರಣದಲ್ಲಿರುವ ಇಂಗಾಲವನ್ನು ಕಡಿಮೆ ಮಾಡುತ್ತದೆ. ಇದು ಪರಿಸರ ಸ್ನೇಹಿ ಗೊಬ್ಬರವಾಗಿದೆ ಎಂದರು. 

  ಬೆಳಗಾವಿಯ ನಿಜಲಿಂಗಪ್ಪ ಸಂಕ್ಕರೆ ಸಂಸ್ಥೆಯ ವಿಜ್ಞಾನಿ ಡಾ.ಎನ್‌.ಆರ್‌.ಯಕ್ಕಾಲಿ ಮಾತನಾಡಿ, ಕಬ್ಬಿನಲ್ಲಿ ರಾಸಾಯನಿಕ ಗೊಬ್ಬರಗಳ ನಿರ್ವಹಣೆ ಕುರಿತು ಹೇಳುತ್ತಾ ಕಬ್ಬು ನಾಟಿ ಮಾಡುವಾಗ ಸಾಲಿನಲ್ಲಿ ಎಕರೆಗೆ ಒಂದು ಚೀಲ ಡಿಎಪಿ ಗೊಬ್ಬರವನ್ನು ಕೊಡಬೇಕು. ಕಬ್ಬು ಸಂಪೂರ್ಣವಾಗಿ ಆರೋಗ್ಯವಾಗಿ ಬೆಳೆಬೆಕಾರದೆ ಬೆಳೆಗೆ ಸಾರಜನಿಕ, ರಂಜಕ,ಪೋಟ್ಯಾಸ ಮುಂತಾದ ಪೋಷಕಾಂಶಗಳು ಅವಶ್ಯವಾಗಿ ಬೇಕಾಗುತ್ತದೆ. ಇವುಗಳನ್ನು ವೇಳೆಗೆ ಸರಿಯಾಗಿ ಕಬ್ಬಿನ ಬೆಳೆಗೆ ಒದಗಿಸುವುದರಿಂದ ಭೂಮಿಯೂ ಆರೋಗ್ಯಪೂರ್ಣವಾಗಿ ಫಲವತ್ತತೆಯನ್ನು ಹೊಂದಿ ಹೆಚ್ಚಿನ ಇಳುವರಿ ಬರಲು ಸಾದ್ಯವಾಗುತ್ತದೆ ಎಂದು ಹೇಳಿದರು. 

 ಕೀಟ ತಜ್ಞ ಮಂಜುನಾಥ ಚೌರೆಡ್ಡಿ ಮಾತನಾಡಿ, ಕೀಟಗಳು ನಿಶಾಚರಿಗಳಾಗಿಜಮೀನಿನ ಆಳದಲ್ಲಿ ವಾಸಿಸುವುದರಿಂದ ಒಂದೇ ರೀತಿಯಿಂದ ಈ ಕೀಟಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.ಆದ್ದರಿಂದ ಆಳವಾಗಿ ಉಳುಮೆಮಾಡುವುದು, 24 ಗಂಟೆಗಳ ಕಾಲ ಜಮೀನಿನಲ್ಲಿ ನೀರು ನಿಲ್ಲಿಸುವುದು,ಓಡಲ ಬೀಜದ ದ್ರಾವಣ ತಯಾರಿಸಿ ಬಳಸಸುವದರಿಂದ ಕೀಟಗಳ ಸಂತಾನಾಭಿವೃದ್ಧಿ ಕುಂಠಿತಗೊಳಿಸಬಹುದು ಎಂದು ತಿಳಿಸಿದರು. 

ಕಾರ್ಯಕ್ರಮವನ್ನು ವಿಜಯನಗರ ಸಕ್ಕರೆ ಕಾರ್ಖಾನೆಯ ಮಂಜುನಾಥ ಸ್ವಾಗತಿಸಿದರು. ವೀರಯ್ಯ ಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

  ಈ ವೇಳೆ ಡಾ.ಡಿ.ಆಯ್‌.ಹೆಗಡೆ, ಗಣೇಶಗೌಡ ಗದಗ, ರಾಮಚಂದ್ರ ಬೆಳಿಗೇರ, ದೇವೀರ‌್ಪಪ ಮುಂತಾದವರು ಮಾತನಾಡಿದರು. ರೈತರಾದ ಶಿವಾನಂದ ಇಟಗಿ, ವಿಠಲ ಗಣಾಚಾರಿ, ವೀರನಗೌಡ ಪಾಟೀಲ ಮುಂತಾದವರಿದ್ದರು. 


ಸುದ್ದಿ ಓದಿ