ರೈತರಿಗೆ ಪ್ರಥಮ ಚಿಕಿತ್ಸೆ ಕುರಿತು ಕಾರ್ಯಗಾರ
ಬಳ್ಳಾರಿ ಫೆ. 23 : ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ ಮತ್ತು ಗ್ರೀಫ್ಟ್ ಫುಡ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರ ಸಂಯುಕ್ತಾಶ್ರಯದಲಿ ಬಳ್ಳಾರಿ ತಾಲೂಕಿನ ರೈತರಿಗೆ ತಮ್ಮ ವ್ಯವಸಾಯದ ಸ್ಥಳದಲ್ಲಿ ಆಗಬಹುದಾದ ಅನಾಹುತಗಳು ಮತ್ತು ಪ್ರಥಮ ಚಿಕಿತ್ಸೆ ಬಗ್ಗೆ ಒಂದು ದಿನದ ವಿಷೇಶ ಕಾರ್ಯಗಾರವನ್ನ ಸೋಮುವಾರ ತಾಲೂಕಿನ ಪಾಲ್ತೂರು ಗ್ರಾಮ ಮತ್ತು ಶಹನವಾಸ್ ಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ತರಬೇತುದಾರರಾದ ರೆಡ್ ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಎಂ.ಎ.ಷಕೀಬ್ ಇವರು ರೈತರ ವಲದಲ್ಲಿ ಹಾಗೂ ತೋಟದಲ್ಲಿ ಹಾವು, ಚೇಳು ಕಚ್ಚಿದರೆ ಯಾವ ರೀತಿಯಿಂದ ಪ್ರಥಮ ಚಿಕಿತ್ಸೆ ಮಾಡಿ ಪ್ರಾಣವನ್ನು ಉಳಿಸಬಹುದು ವೆಂದು ತಿಳಿಸಿಕೊಟ್ಟು. ಕೀಡ ನಾಷಕಗಳಿಂದ ಆಗುವ ಅನಾಹುತಗಳು ಮತ್ತು ಪ್ರವಾಹದಿಂದ ಉಂಟಾಗುವ ಪರಿಣಾಮಗಳನ್ನು ಹೇಗೆ ತಡೆಗಟ್ಟುವುದು ವೆಂದು ವಿವರವಾಗಿ ತಿಳಿಸಿಕೊಟ್ಟರು.
ಇದೇ ಸಂದರ್ಭದಲ್ಲಿ ಶ್ರೀ.ಬೇಪಾರ್ ಮಹಮ್ಮದ್ ಇಜಾಜ್ ಇವರು ಉಪಸ್ಥಿತರಿದ್ದರು. ಉರಿನ ಮುಖಂಡರು ಮತ್ತು ಸುಮಾರು 50 ಜನ ಗ್ರಾಮಸ್ತರು ಭಾಗವಹಿಸಿದ್ದರು.