ಕಾರ್ಮಿಕ ವರ್ಗದವರ ಮಕ್ಕಳು ವಿದ್ಯಾವಂತರಾಗಬೇಕು:ಹೆಬ್ಬಾರ
ಮುಂಡಗೋಡ:ಪಟ್ಟಣದ ಇನ್ನೂ 500 ಜನರಿಗೆ ಮನೆಗಳನ್ನು ಬರುವ ದಿನಗಳಲ್ಲಿ ಮಂಜೂರು ಮಾಡಿ ಕೊಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕು ಪಂಚಾಯತ ಮತ್ತು ತಾಲೂಕಿನ 16 ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಬುಧವಾರ ಕಾಮಗಾರಿ ಆದೇಶ ವಿತರಣೆ ಮಾಡಿ ಅವರು ಮಾತನಾಡಿದರು. ಇದಲ್ಲದೆ ಪಕ್ಕದಲ್ಲೇ 985 ಜಿ+2 ಮಾದರಿ ಮನೆಗಳನ್ನು ನಿರ್ಮಾಣ ಮಾಡಿ ಕೊಡಲಾಗುವುದು. ಕಾರ್ಮಿಕ ವರ್ಗದವರ ಮಕ್ಕಳು ವಿದ್ಯಾವಂತರಾಗಬೇಕು. ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ ಸರ್ಕಾರ ಅನೇಕ ಸವಲತ್ತುಗಳನ್ನು ನೀಡಿದೆ ಎಂದರು.
ಈ ವೇಳೆ ಪ.ಪಂ.ಅಧ್ಯಕ್ಷೆ ರೇಣುಕಾ ರವಿ ಹಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶಕುಂತಲಾ ನಾಯಕ, ಉಪಾಧ್ಯಕ್ಷ ಮಂಜುನಾಥ ಹರಮಲಕರ, ರವಿಗೌಡ ಪಾಟೀಲ, ಎಲ್.ಟಿ.ಪಾಟೀಲ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಶೇಖರ ಲಮಾಣಿ, ಅಶೋಕ ಚಲವಾದಿ, ಶ್ರೀಕಾಂತ ಸಾನು, ಗುರುರಾಜ ಕಾಮತ, ವಿಶ್ವನಾಥ ಪವಾಡಶೆಟ್ಟರ, ವೈ.ಪಿ.ಪಾಟೀಲ, ಇಒ ಪ್ರವೀಣ ಕಟ್ಟಿ, ಪ.ಪಂ.ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಹಾಗೂ ಮುಂತಾದವರು ಉಪಸ್ಥಿತರಿದ್ದರು.