ಹಗರಿಬೊಮ್ಮನಹಳ್ಳಿ

ಶೀಘ್ರವೇ ಕಾರ್ಮಿಕರ ಭವನ ನಿರ್ಮಾಣ : ಶಾಸಕ ಎಸ್‌.ಭೀಮಾನಾಯ್ಕ್‌ ;ಕಟ್ಟಡ ಕಾರ್ಮಿಕರ ಪಿಂಚಣಿ ಹೆಚ್ಚಳದ ಕೂಗಿಗೆ ಧ್ವನಿಯಾಗುವೆ ಶಾಸಕ ಭೀಮಾನಾಯ್ಕ್‌ ಭರವಸೆ

ಶೀಘ್ರವೇ ಕಾರ್ಮಿಕರ ಭವನ ನಿರ್ಮಾಣ : ಶಾಸಕ ಎಸ್‌.ಭೀಮಾನಾಯ್ಕ್‌  ;ಕಟ್ಟಡ ಕಾರ್ಮಿಕರ ಪಿಂಚಣಿ ಹೆಚ್ಚಳದ ಕೂಗಿಗೆ ಧ್ವನಿಯಾಗುವೆ ಶಾಸಕ ಭೀಮಾನಾಯ್ಕ್‌ ಭರವಸೆ


ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ.ನ.08 : ಕಟ್ಟಡ ಕಾರ್ಮಿಕರು ಶ್ರಮ ಜೀವಿಗಳಾಗಿದ್ದಾರೆ, ಶೀಘ್ರವೇ ಪಟ್ಟಣದಲ್ಲೊಂದು ನಿವೇಶನ ಗುರುತಿಸಿ ನೊಂದಯಿತ ಕಟ್ಟಡ ಕಾರ್ಮಿಕರ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಸ್‌.ಭೀಮಾನಾಯ್ಕ್‌ ಹೇಳಿದರು. 

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಕಲ್ಯಾಣ ಮಂಡಳಿ ಬೆಂಗಳೂರು,ಜಿಲ್ಲಾ ಪಂಚಾಯತಿ ಹಾಗೂ ಕಾರ್ಮಿಕ ಇಲಾಖೆವಿಜಯ ನಗರ ಜಿಲ್ಲೆ ಸಹಯೋಗದೊಂದಿಗೆ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಟೋಲ್‌ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಟ್ಟಡ ಕಾರ್ಮಿಕರು ತುಂಬಾ ಶ್ರಮಿಕರಾಗಿದ್ದಾರೆ, ಉರಿ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸಿ ದಣಿವರಿಯದಂತೆ ಶ್ರಮ ಪಡುವ ಸಮುದಾಯ ಇದಾಗಿದೆ, ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸವನ್ನ ಅರಸಿ ಹತ್ತಾರು ಕಿಮಿ ದೂರ ಪ್ರಯಾಣ ಬೆಳೆಸಿ ಹಳಸಿದ ಅನ್ನ ತಿಂದು ಕಾರ್ಯ ನಿರ್ವಹಿಸಿದ್ದು ಸತ್ಯ ಸಂಗತಿಯಾಗಿದೆ, ಎಷ್ಟೇ ಹಣ ಸಂಪಾದನೆ ಮಾಡಿದ ವ್ಯೆಕ್ತಿಯಾಗಲೀ ಮನೆ ನಿರ್ಮಾಣ ತಾನೇ ಮಾಡಿಕೊಳ್ಳಲಾರ ಅದಕ್ಕೆ ಕಾರ್ಮಿಕರು ಬೇಕೇ ಬೆಕು,ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಮೂರು ಅಂತಸ್ತಿನ ಕಟ್ಟಡಕ್ಕೆ ಸೀಮಿತವಾಗಿರಬಹುದು ಆದರೆ ನಗರ ಪ್ರದೇಶಗಳಲ್ಲಿ ನಿರ್ಮಿಸುವ ಹತ್ತಾರು ಅಂತಸ್ತಿನ ಕಟ್ಟಡಗಳನ್ನು ನಿರ್ಮಿಸುತ್ತಿರುವಾಗ ಪ್ರಾಣ ಕಳೆದುಕೊಂಡರೆ ಯಾರು ಜವಾಬ್ದಾರರು ಅದಕ್ಕಾಗಿ ಅವರಿಗೆ ಸರಕಾರದ ಸೌಲಭ್ಯ ಸಮರ​‍್ಕವಾಗಿ ಸಿಗಬೇಕು, ಪ್ರಸ್ತುತ ಪಿಂಚಣಿಯನ್ನು 10ಸಾವಿರಕ್ಕೆ ಹೆಚ್ಚಿಸುವಂತೆ ಚಳಿಗಾಲದ ಅಧಿವೇಶನದಲ್ಲಿ ಅವರ ಪಿಂಚಣಿ ಹೆಚ್ಚಳದ ಕೂಗಿಗೆ ಧ್ವನಿಯಾಗುವೆ, 2017ರಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ ಇಲಾಖೆ ಸಚಿವರಾಗಿದ್ದಾಗ ಕಾರ್ಮಿಕರಿಗೆ ನೀಡಿದ ಸವಲತ್ತುಗಳು ಈಗ ದೊರೆಯುತ್ತಿವೆ ಈಗ ನೊಂದಾಯಿತ ಕಾರ್ಮಿಕರಿಗೆ 665 ಕಿಟ್‌ಗಳನ್ನು ನೀಡಲಾಗುತ್ತಿದೆ, ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಣೆ ತಪ್ಪಿದ್ದರೆ ಶೀಘ್ರವೇ ನೀಡಲಾಗುವುದು ಎಂದರು. 

ಇಲ್ಲದ ಆಸನ ; ನಿಂತ ಕಾರ್ಮಿಕರು : ಕಾರ್ಮಿಕ ಇಲಾಖೆಯು ಹಮ್ಮಿಕೊಂಡ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರಿಗೆ ಆಸನವಿಲ್ಲದ ಪರದಾಡುವಂತ ಪರಿಸ್ಥಿತಿ ಇತ್ತು, ಜೊತೆಗೆ ಇಕ್ಕಟ್ಟನ ಸ್ಥಳದಲ್ಲಿ ಕಾರ್ಯಕ್ರಮ ಮಾಡುವುದಕ್ಕಿಂತ ಬೇರೆ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು, ಕಾರ್ಮಿಕ ಇಲಾಖೆ ಅಧಿಕಾರಿ ಬೇಕು ಬೇಡವೆಂಬಂತೆ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಕೆಲ ಕಟ್ಟಡ ಕಾರ್ಮಿಕರು ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದರು. 

ಅನುದಾನದ ಕೊರತೆಯ ಉತ್ತರ ನೀಡಿದ ಕಾರ್ಮಿಕ ನೀರೀಕ್ಷಕ : ನಮಗೆ ಕಾರ್ಯಕ್ರಮ ಮಾಡಲು ಯಾವುದೇ ಅನುದಾನ ಬರುವುದಿಲ್ಲ, ಎನೇ ಕಾರ್ಯಕ್ರಮ ಮಾಡಿದರೂ ಸ್ವಂತ ಹಣ ಹಾಕಿಕೊಂಡು ಕಾರ್ಯಕ್ರಮ ಮಾಡಬೇಕು, ಸಿಬ್ಬಂದಿಯ ಕೊರತೆಯಿಂದ ಇಂದು ಅಕ್ಕ ಪಕ್ಕದ ಕಾರ್ಮಿಕ ಇಲಾಖೆಯ ಕಂಪ್ಯೂಟರ್ ಆಪರೇಟರ್‌ಗಳನ್ನು ಕರೆಸಿಕೊಳ್ಳಲಾಗಿದೆ ಎಂದು ಕಾರ್ಮಿಕ ನೀರೀಕ್ಷಕ ಅಶೊಕ್ ಪತ್ರಿಕೆಗೆ ತಿಳಿಸಿದರು.  

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಮಿಕ ಅಧ್ಯಕ್ಷ ಯು.ಬಾಬುವಲಿ, ಪುರಸಭೆ ಸದಸ್ಯ ಮರಿರಾಮಪ್ಪ, ಮುಖಮಡರಾದ ಅಕ್ಕಿ ತೋಟೇಶ್, ಹುಡಚಪ್ಪ, ಹುಡೇದ್ ಗುರುಬಸವರಾಜ, ದೇವೇಂದ್ರ​‍್ಪ, ಡಿಶ್ ಮಂಜುನಾಥ್ ಸೇರಿದಂತೆ ಇಲಾಖೆಯ ಸಿಬ್ಬಂದಿ ಇದ್ದರು. 


ಸುದ್ದಿ ಓದಿ