ಬಳ್ಳಾರಿ

ಸರ್ಕಾರಿ ಯೋಜನೆಗಳು ಜನರಿಗೆ ತಲುಪಿಸಲು ಅತ್ಯಂತ ಕಾಳಜಿಯಿಂದ ಶ್ರಮಿಸುವೆ: ಮಡಗಿನ ಬಸಪ್ಪ

ಸರ್ಕಾರಿ ಯೋಜನೆಗಳು ಜನರಿಗೆ ತಲುಪಿಸಲು ಅತ್ಯಂತ ಕಾಳಜಿಯಿಂದ  ಶ್ರಮಿಸುವೆ: ಮಡಗಿನ ಬಸಪ್ಪ

ಬಳ್ಳಾರಿ 11: ನಗರದಲ್ಲಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಪ್ರತಿಯೊಂದು ಯೋಜನೆಯು ಎಲ್ಲಾ ಮಟ್ಟದ ಜನರಿಗೆ ತಲುಪಲು ಶಕ್ತಿಗೆ ಮೀರಿ ಶ್ರಮಿಸಿವೆ ಎಂದು ಬಳ್ಳಾರಿ ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಹೇಳಿದರು. ಇತ್ತೀಚೆಗೆ ಸಿರುಗುಪ್ಪ ತಾಲೂಕದಿಂದ ವರ್ಗಾವಣೆ ಆಗಿ ಈಗ  ಬಳ್ಳಾರಿ ತಾಲೂಕ ಪಂಚಾಯತಿ ಕಾರ್ಯನಿರ್ವಹಣ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಆಯಾ  ಗ್ರಾಮಗಳ ಪಂಚಾಯತಿ ವ್ಯಾಪ್ತಿಗೆ ಬರುವಂತಹ  ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸುತ್ತಿರುವದಾಗಿ ತಿಳಿಸಿದರು. 

ಗ್ರಾಮೀಣ ಪ್ರಾಂತಗಳ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವುದಾಗಿ, ಬಡ ಕುಟುಂಬಗಳಿಗೆ ತಲುಪಿಸಲು ನನ್ನ  ಜವಾಬ್ದಾರಿ ಎಂದರು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ತಮ್ಮ ತಾಲೂಕ ವ್ಯಾಪ್ತಿಯಲ್ಲಿ ಬರುವ ಹೊಸ ಯರಗುಡಿ ಗ್ರಾಮ ಪಂಚಾಯಿತಿ ಹೊಸ ಬಿಲ್ಡಿಂಗ್ ಕಾಮಗಾರಿಯನ್ನು  ಮಾಡಿರುವುದಾಗಿ, ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಇದೇ ಸೆ. 16ರಂದು ಸಚಿವರು ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಅವರು ಉದ್ಘಾಟನಾ ಮಾಡಲಿದ್ದಾರೆ ಎಂದರು.  

ತರುವಾಯ  ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಮಗಾರಿ ಆಯೋಜಿಸಿದ್ದು 29 ಲಕ್ಷ ರೂಪಾಯಿಗಳು ಹೊಸ ಪಂಚಾಯತಿ ಕಟ್ಟಡ ನಿರ್ಮಾಣಕ್ಕಾಗಿ  ಈ ಯೋಜನೆಗಾಗಿ ಖರ್ಚು ಮಾಡಲಾಗಿದೆ ಎಂದು ಮಾತನಾಡಿದರು. ಈ ಹೊಸ ಕಟ್ಟಡ ನಿರ್ಮಾಣದಲ್ಲಿ  ಗ್ರಾಮ ಪಂಚಾಯತಿ ಸಿಬ್ಬಂದಿಗೆ ಬೇಕಾದ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷ, ಉಪಾಧ್ಯಕ್ಷರ ಪ್ರತ್ಯೇಕ ಕೊಠಡಿ ಹಾಸನಗಳನ್ನು ನಿರ್ಮಿಸಲಾಗುವುದು  ಎಂದು ತಿಳಿಸಿದರು.  ಹೊಸ ಯರಗುಡಿ ಗ್ರಾಮ ಪಂಚಾಯಿತಿಯ   ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರೀಶೀಲಿಸಲು  ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಮಡಿಗಿನ ಬಸಪ್ಪ  ಆರ್ ಡಿ ಸಹಾಯಕ ನಿರ್ದೇಶಕ  ಸದಾನಂದ, ಹೊಸ ಯರಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಬೆಣಕಲ್ಲು, ಗ್ರಾಮ ಪಂಚಾಯತಿಯ  ಅಭಿವೃದ್ಧಿ ಅಧಿಕಾರಿ  ಮರಿಸ್ವಾಮಿ, ತಾಂತ್ರಿಕ ಸಹಾಯಕಿ  ಶೃತಿ, ಹೊಸ ಕಟ್ಟಡ ನಿರ್ಮಾಣ  ಕಾಮಗಾರಿಯನ್ನು ಪರೀಶೀಲನೆ ಮಾಡಿರುವುದಾಗಿ ಕಟ್ಟಡಕ್ಕೆ ಪೇಂಟಿಂಗ್ ಕೆಲಸ ಮಾತ್ರ ಮುಗಿಸಬೇಕಾಗಿದೆ. ಅತ್ಯಂತ ತ್ವರಿತಗತಿಯಲ್ಲಿ  ಉಳಿದ ಕಾಮಗಾರಿ ಕಾರ್ಯವನ್ನು ಪೂರ್ಣಗೊಳಿಸಬೇಕೆಂದು ಮಾಹಿತಿ ನೀಡಿದರು. ಸಚಿವರಿಗೆ ಈಗಾಗಲೇ ತಾವು ಭೇಟಿಯಾಗಿ ಮಾಹಿತಿಯನ್ನು ನೀಡಿರುವುದಾಗಿ ತಿಳಿಸಿದರು. ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮದ ಅಭಿವೃದ್ಧಿಗೆ ನಾನು ಶ್ರಮಿಸುವುದಾಗಿ ಗ್ರಾಮದ ಚುನಾಯಿತ ಪ್ರತಿನಿಧಿಗಳು, ಪಿಡಿಒ, ಇತರ ಸಿಬ್ಬಂದಿ, ಸಹಕಾರದಿಂದ ಮಾತ್ರ ತಾನು ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಮಾತನಾಡಿದರು. ಹಾಗೂ ತಮ್ಮ ತಾಲೂಕು ಮಟ್ಟದ ವ್ಯಾಪ್ತಿಯಲ್ಲಿ ಬರುವಂತಹ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಗಳ ವಿವಿಧ ಜನರು ಪಂಚಾಯಿತಿಗೆ ಸಂಬಂಧಪಟ್ಟ  ಯಾವುದೇ ಕಾರ್ಯವು  ಪೂರ್ಣಗೊಂಡಿಲ್ಲ  ಅಥವಾ ಆಗಿಲ್ಲ ಅಂದರೆ ನೇರವಾಗಿ ತಮ್ಮ ಕಚೇರಿಗೆ ಬಂದು ನಮ್ಮ ಗಮನಕ್ಕೆ ತಂದರೆ ಅದನ್ನು ಆ ಸಮಸ್ಯೆಯ ಕುರಿತು ನಿರ್ದಾಕ್ಷಣವಾಗಿ  ಕ್ರಮ ಕೈಗೊಳ್ಳಲಾಗುವುದು. ನಾವು ಇರುವದೇ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಾಗೂ ಗ್ರಾಮಗಳ ಜನರ ಸಮಸ್ಯೆಗಳನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ಪ್ರಮುಖ ಕರ್ತವ್ಯ ಹಾಗೂ ಆದ್ಯತೆಯಾಗಿದೆ ಎಂದು ಹೇಳಿದರು. 


ಸುದ್ದಿ ಓದಿ