ತಾಳಿಕೋಟಿ

ನಿಮ್ಮ ಜೀತದಾಳು ಚೆನ್ನಾಗಿ ದುಡಿಸಿಕೊಳ್ಳಿ: ಶಾಸಕ ಸೋಮನಗೌಡ

ನಿಮ್ಮ ಜೀತದಾಳು ಚೆನ್ನಾಗಿ ದುಡಿಸಿಕೊಳ್ಳಿ: ಶಾಸಕ ಸೋಮನಗೌಡ

ತಾಳಿಕೋಟಿ: ಐದು ವರ್ಷಗಳ ಅವಧಿಗಾಗಿ ನೀವು ನನಗೆ ಮತ ಕೊಟ್ಟು ಆಯ್ಕೆ ಮಾಡಿ ನನಗೆ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದ್ದೀರಿ, ನಾನು ನಿಮ್ಮ ಜೀತದಾಳದಂತೆ ಕೆಲಸ ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದ್ದೇನೆ. ನಾನು ನಿಮ್ಮ ಆಳಾಗಿ ಚೆನ್ನಾಗಿ ಕೆಲಸ ಮಾಡಿದ್ದರೆ ನನಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ದೇ.ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.

ತಾಲೂಕಿನ ಭಂಟನೂರ ಗ್ರಾಮದಲ್ಲಿ ರೂ. 50 ಲಕ್ಷ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಈ ಭಾಗದ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಲು ರೂ. 870 ಕೋಟಿಯ ಬೂದಿಹಾಳ-ಪೀರಾಪೂರ ನೀರಾವರಿ ಯೋಜನೆ ತಂದಿದ್ದೇನೆ. ಈ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಕೊಡಗಾನೂರ - ಲಕ್ಕುಂಡಿ, ಗಡಿಸೋಮನಾಳ  ಗೊಟಖಂಡ್ಕಿ, ಗೊಟಖಂಡ್ಕಿ - ಪೀರಾಪೂರ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಜೊತೆಗೆ, ಪ್ರತಿ ಗ್ರಾಮದಲ್ಲೂ ಮನೆ-ಮನೆಗೆ ನಳ ಜೋಡಣೆ ಹಾಗೂ ಸಿ.ಸಿ. ರಸ್ತೆಗಳು ನಡೆಯುತ್ತಿವೆ. ಇಲ್ಲಿಯ ಹಲವಾರು ದೇವಸ್ಥಾನಗಳ ಸಮುದಾಯ ಭವನಗಳಿಗೆ ಅನುದಾನ ಕೊಟ್ಟಿದ್ದೇನೆ. ನೀವು ಹೇಳಿದ ಎಲ್ಲ ಕೆಲಸಗಳನ್ನು ಪ್ರಮಾಣಿಕವಾಗಿ ಮಾಡಲು ಪ್ರಯತ್ನಿಸಿದ್ದೇನೆ. ಕೆಲಸ ಮಾಡುವಾಗ ಏನಾದರು ತಪ್ಪುಗಳಾಗಿದ್ದರೆ ನಾನು ತಿದ್ದಿಕೊಳ್ಳುತ್ತೇನೆ ನನಗೆ ಮುಂದೆಯೂ ನಿಮ್ಮೆಲ್ಲರ ಸಹಕಾರ ಬೇಕು.

ಈ ಸಮಯದಲ್ಲಿ ಬಿಜೆಪಿ ಮುಖಂಡರಾದ ಸಂಗನಗೌಡ ಹೆಗರಡ್ಡಿ, ಶರಣಗೌಡ ನಾಗರಡ್ಡಿ, ಸೋಮನಗೌಡ ಹಾದಿಮನಿ, ಸಾಹೇಬಣ್ಣ ಆಲ್ಯಾಳ, ಬಸನಗೌಡ ಬಿರಾದಾರ, ಶಿವನಗೌಡ ಗೊಟಖಂಡ್ಕಿ, ಮುತ್ತುಗೌಡ ಮಾಳಿ, ಸಾಹೇಬಗೌಡ ರಾರೆಡ್ಡಿ, ಬಸನಗೌಡ ಲಕ್ಕುಂಡಿ, ನಿಂಗನಗೌಡ ಬಿರಾದಾರ (ಸೋಮನಾಳ) ಇದ್ದರು.

ಸುದ್ದಿ ಓದಿ