ತಾಳಿಕೋಟಿ

ಸಂಘದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿ: ಗುರುಲಿಂಗ ಶ್ರೀ

ಸಂಘದ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಕೆಲಸ ಮಾಡಿ: ಗುರುಲಿಂಗ ಶ್ರೀ


ತಾಳಿಕೋಟಿ 22 : ಜನರ ನಂಬಿಕೆಯೇ ಸಂಘದ ನಿಜವಾದ ಬಂಡವಾಳ, ಸದಸ್ಯರ ವಿಶ್ವಾಸವಿದ್ದರೆ ಯಾವುದೇ ಸಂಘ ಬೆಳವಣಿಗೆ ಆಗಲು ಸಾಧ್ಯವಿದೆ ಎನ್ನುವುದಕ್ಕೆ ಈ ಸಂಘದ ಇಂದಿನ ಪ್ರಗತಿ ಹಾಗೂ ಇದರ ಹಿಂದೆ ನಿಂತಿರುವ ನೂರಾರು ಸದಸ್ಯರ ವಿಶ್ವಾಸವೇ ಸಾಕ್ಷಿ ಎಂದು ಗುಂಡಕನಾಳ ಬ್ರಹನ್ಮಠದ ಪರಮ ಪೂಜ್ಯ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಗುಂಡಕನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಂಘದಿಂದ ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಬೇಕು ಇದು ಸಂಘದ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದ ಅವರು ನಿಮ್ಮೆಲ್ಲರ ಸಹಕಾರದಿಂದ ಸಂಘವು ಪ್ರಗತಿ ಕಡೆಗೆ ಸಾಗುತ್ತಿದೆ ಮುಂದೆಯೂ ಇದೇ ರೀತಿಯ ಸಹಕಾರ ಇರಲಿ ಎಂದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್‌.ಬಿ. ರಾಮಗಿರಿಮಠ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಗುರಣ್ಣಗೌಡ ಬಿರಾದಾರ, ನಿರ್ದೇಶಕರಾದ ಬಸನಗೌಡ ಹಳ್ಳಿ ಪಾಟೀಲ,ಪ್ರಭುಗೌಡ ಪಾಟೀಲ, ಬಸವರಾಜ ಬಿರಾದಾರ, ಅಲ್ಲಿಸಾ ಪಿಂಜಾರ, ಉಸ್ಮಾನಸಾ ಮುಲ್ಲಾ, ಮಲ್ಲಣ್ಣ ಅಸ್ಕಿ, ಹಣಮಂತ ಕೊಡಗಾನೂರ, ನಿರ್ದೇಶಕೀಯರಾದ ಕಸ್ತೂರಿಬಾಯಿ ಭೀ.ಪಾಟೀಲ, ನಿರ್ಮಲಾ ಚ.ಪಾಟೀಲ, ಶಾಂತಮ್ಮ ಬ.ಗಬಸಾವಳಗಿ, ಗ್ರಾಮದ ಗಣ್ಯರು, ಹಿರಿಯರು, ಸಂಘದ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ