ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು : ಶಿವರಾಮ ಹೆಬ್ಬಾರ್
ಮುಂಡಗೋಡ,01 ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕೆಂದು ಶಾಸಕ ಶಿವರಾಮ ಹೆಬ್ಬಾರ ಸೂಚನೆ ನೀಡಿದರು.
ತಾಲೂಕು ಮಟ್ಟದ ಜನಸ್ಪಂದನಾ ಸಭೆ ಕಾರ್ಯಕ್ರಮದಲಿ ಇಂದು ಪಟ್ಟಣ ಪಂಚಾಯತ ಸಭಾಂಗಣದಲ್ಲಿ ತಾಲೂಕಾ ಮಟ್ಟದ ಜನಸ್ಪಂದನ ಸಭೆ ನಡೆಸಿದರು ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿದ
ಪಟ್ಟಣ ಪಂಚಾಯತ ವತಿಯಿಂದ 6 ಜನರಿಗೆ ಖಈಅ ಅಡಿಯಲ್ಲಿ ಸಹಾಯಧನ ಚೆಕ್ ವಿತರಣೆ 32 ಜನರಿಗೆ 94ಛಿ ಹಕ್ಕುಪತ್ರ ವಿತರಣೆ,ಕಂದಾಯ ಇಲಾಖೆ ಅಆಕಓ 5 ಜನರಿಗೆ ಭಾಗ್ಯಲಕ್ಷ್ಮಿ ಪಾಸ್ ಬುಕ್ ವಿತರಣೆ ಮತ್ತು ಮನೆ ಹಾನಿ ಆದ 12 ಜನರಿಗೆ ತಲಾ 1 ಲಕ್ಷ 20 ಸಾವಿರ ರೂಪಾಯಿಗಳ ಆದೇಶ ಪತ್ರ ವಿತರಣೆ ಕಂದಾಯ ಇಲಾಖೆಯಿಂದ 3 ಜನರಿಗೆ ವಿವಿಧ ಮಾಸಿಕ ಪಿಂಚಣಿ ಆದೇಶ ಪತ್ರಗಳ ವಿತರಣೆಕಜಾನುವಾರು ಸಾವು ಆದವರಿಗೆ ಇಬ್ಬರಿಗೆ ಪರಿಹಾರ ಧನ ವಿತರಣೆ.
ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ 5 ಜನರಿಗೆ ಯೋಜನೆಗಳ ಕಾರ್ಯಾದೇಶ ವಿತರಣೆ ಹಾಗೂ ಪಶುಸಂಗೋಪನೆ ಇಲಾಖೆ ಖಅಕ, ಖಿಖಕ ಅಡಿಯಲ್ಲಿ 5 ಫಲಾನುಭವಿಗಳು ಪರಿಹಾರ ಧನ ವಿತರಣೆ ಮತ್ತು ಕಾರ್ಮಿಕ ಇಲಾಖೆಯಿಂದ ಇಬ್ಬರು ಫಲಾನುಭವಿಗೆ ಸುರಕ್ಷಾ ಕಿಟ್ ವಿತರಣೆ ಮಾಡಿದ್ದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಶಂಕರ್ ಗೌಡಿ ತಾಲೂಕುಪಂಚಾಯತ್ ಇಓಟಿವಾಯ್ ದಾಸನಕೊಪ್ಪ ಪಿಎಸ್ ಐ ಪರಶುರಾಮ್ ಮಿಜರ್ಗಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಟ್ಟಣ ಪಂಚಾಯತ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.