ಮಹಿಳೆಯರು ತರಬೇತಿಯಲ್ಲಿ ಪಡೆದ ಶಿಕ್ಷಣ ಮುಂದುವರಿಸಿಕೊಂಡು ಹೋಗಬೇಕು: ಹಿರೇಮಠ
ಮುಂಡಗೋಡ 08: ತರಬೇತಿ ಪಡೆದ ಮಹಿಳೆಯರು ತರಬೇತಿಯಲ್ಲಿ ಪಡೆದ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಧಾರವಾಡದ ಟಾಟಾ ಮೋಟಾರ್ಸ್ ಪ್ರೈವೇಟ್ ಲಿ.ನ ಮಾರ್ಕೆಟಿಂಗ್ ಆಫೀಸರ್ ಗುಡಲೇಶ ಹಿರೇಮಠ ಹೇಳಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಾಗೂ ಟಾಟಾ ಮೋಟಾರ್ಸ್ ಪ್ರೈವೇಟ್ ಲಿ. ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ನಡೆದ 1 ತಿಂಗಳ ಉಚಿತ ಹೊಲಿಗೆ ತರಬೇತಿ ಶಿಬಿರದ ಶಿಬಿರಾರ್ಥಿಗಳಿಗೆ ಮಂಗಳವಾರ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮನೋಜ ನಾಯ್ಕ ಇನ್ಸುರನ್ಸ್ ಪಾಲಿಸಿಗಳು ಮತ್ತು ಸ್ವ-ಉದ್ಯೋಗ ಸಾಲಗಳ ಕುರಿತು ಮಾಹಿತಿ ನೀಡಿದರು. ಸಿಬಿಡಿಆರ್ಸೆಟಿ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ ಸಂಸ್ಥೆಯ ತರಬೇತಿಗಳ ಕುರಿತು ತಿಳಿಸಿದರು. ನಿರ್ದೇಶಕ ಪ್ರಶಾಂತ ಬಡ್ಡಿ ಮಾತನಾಡಿ ಮಹಿಳೆಯರು ತರಬೇತಿಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಲೋಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾ.ಅನಿಲ, ಜೆನಿಫರ್, ಗುಂಜಾವತಿ ಗ್ರಾ.ಪಂ. ಅಧ್ಯಕ್ಷೆ ಭಾಗೀರಥಿ ಪಟಗಾರೆ, ಪೆದ್ರು ಸಿದ್ದಿ, ಬಾಬು ಪಟಗಾರೆ, ತರಬೇತುಗಾರ್ತಿ ಜಯಶ್ರೀ ಗೌಳಿ, ಶಾಂತಕುಮಾರ ಕೀರ್ತಪ್ಪನವರ, ಈರಯ್ಯಾ ಚಿಕ್ಕಮಠ, ಈಶ್ವರ, ನಜ್ಮಾ ಹಾಗೂ ಮುಂತಾದವರು ಉಪಸ್ಥಿತರಿದ್ದರು. ನೀಲಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಮಶಾದ್ ಹುಲಕೊಪ್ಪ ಸ್ವಾಗತಿಸಿದರು. ಫಾತಿಮಾ ಮುಜಾವರ್ ನಿರೂಪಿಸಿದರು. ಹೀನಾ ವಂದಿಸಿದರು.