ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು: ಎಚ್.ಆರ್. ಲವಕುಮಾರ
ಲೋಕದರ್ಶನ ವರದಿ
ಯರಗಟ್ಟಿ 14 : ಪ್ರತಿಯೊಬ್ಬ ಮಹಿಳೆಯರು ಸ್ವಾವಲಂಬನೆ ಬದುಕು ನಡೆಸಬೇಕು. ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ಬದುಕು ನಡೆಸಲು ಧರ್ಮಸ್ಥಳ ಸಂಸ್ಥೆಯೂ ಸ್ವಸಹಾಯ ಸಂಘ ಕಟ್ಟಿ ಬೆಳೆಸಿ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಹೇಳಿದರು.
ತಾಲೂಕಿನ ಮಬನೂರ ಗ್ರಾಮದಲ್ಲಿ ರವಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿಗೆಗೆ ಚಾಲನೆ ನೀಡಿ ಮಾತನಡಿ, ಮಹಿಳೆಯರಿಗೆ ತರಬೇತಿ ನೀಡಿ ಸ್ವಂತ ಉದ್ಯೋಗ ಆರಂಭಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಎಲ್ಲಾ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖಂಡ ರವೀಂದ್ರ ಯಲಿಗಾರ ಮಾತನಾಡಿ, ಸುಕ್ಷೇತ್ರ ಶ್ರೀ ಧರ್ಮಸ್ಥಳ ಸಂಸ್ಥೆ ರಾಜ್ಯದ ಅಭಿವೃದ್ಧಿಯಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದೆ. ಬಡವರ ಜೀವನಕ್ಕೆ ಬೆಳಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ತಾಲೂಕಾ ಯೋಜನಾಧಿಕಾರಿ ಶ್ರೀಕಾಂತ ಎಂ, ಜ್ಞಾನ ವಿಕಾಸ ಸಂಘದ ಅಧ್ಯಕ್ಷೆ ಮಿನಾಕ್ಷಿ ಪಟಾತ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಿಶಾ ನಯ್ಕ, ಯಲ್ಲಪ್ಪ ನರಿ, ಶಿವಪ್ಪ ಅಗಸಿಮನಿ, ರೇಣುಕಾ ಪಟಾತ, ಲಕ್ಷ್ಮೀ ಈಟಿ, ಶ್ರೀದೇವಿ ನಾಗೋಜಿ, ದಾನಮ್ಮ ಹಟ್ಟಿ, ಅನಿತಾ ಪಟಾತ, ಮಂಜುಳಾ ನರಗಟ್ಟಿ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.