ಮಹಿಳೆ ಸ್ವಾವಲಂಬಿಯಾಗಬೇಕು: ಜ್ಯೋತಿ ಜೋಶಿ
ಶಿಗ್ಗಾವಿ 09: ಮಹಿಳೆಯರು ಶಿಕ್ಷಣ, ಅರ್ಥಿಕ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದರ ಜೊತೆಗೆ ಇತರೆ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯಬೇಕು ಎಂದು ಜ್ಯೋತಿ ಪ್ರಲ್ಹಾದ ಜೋಶಿ ಹೇಳಿದರು.
ಪಟ್ಟಣದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಮನೆ ಆವರಣದಲ್ಲಿ ಏರಿ್ಡಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪ್ರಸ್ತಾವನೆ ಮೇರೆಗೆೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಉನ್ನತ ಶಿಕ್ಷಣ ಕೋಡಿಸಬೇಕು ಶಿಕ್ಷಣ ಪಡೆದರೆ ಅವರು ದೈರ್ಯವಾಗಿ ಮುನ್ನಡೆಯಲು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗಲಿದೆ ಎಂದರಲ್ಲದೇ, ವಿಶಿಷ್ಟ ಶಕ್ತಿಗಳ ಸಂಗಮವಾಗಿರುವ ಮಹಿಳೆ ಪಾತ್ರ ಪ್ರತಿಯೊಂದು ರಂಗದಲ್ಲಿ ಛಾಪು ಒತ್ತಿದೆ. ಇಂದು ಮಹಿಳೆ ಅಬಲೆಯಲ್ಲ ಎಲ್ಲ ರಂಗಗಳಲ್ಲಿಯೂ ಸಬಲೆಯಾಗಿದ್ದಾಳೆ ಎಂದರು. ಕೆಲ ಹಿಂದುಳಿದ ಮಹಿಳೆಯರು ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿಯುವಲ್ಲಿ ಎಡವಿದ್ದಾರೆ. ಅಂತಹವರನ್ನು ಗುರುತಿಸಿ ಅವರಿಗೆ ಗೌವಯುತವಾದ ಬದುಕು ಕಟ್ಟಿ ಕೊಡಬೇಕು ಅವರಲ್ಲಿ ಆತ್ಮಸ್ತೈರ್ಯ ತುಂಬಬೇಕು ಜೀವನವನ್ನು ಸವಾಲಾಗಿ ಸ್ವೀಕರಿಸುವಂತೆ ಪ್ರೇಪಿಸಬೇಕು ಎಂದರಲ್ಲದೇ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವ ಹಾಗೆಯೇ, ಯಶಸ್ವಿ ಮಹಿಳೆಯರಿಂದೆ ಪುರುಷರಿದ್ದಾರೆ ಎಂದರು.
ಬಿಜೆಪಿ ಮಂಡಲ ಅದ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು, ಡಾ. ಶೋಭಾ ನಿಸ್ಸೀಮಗೌಡ, ಶ್ರೀಕಾಂತ ದುಂಡಿಗೌಡರ, ತಿಪ್ಪಣ ್ಣ ಸಾತಣ್ಣನವರ, ನರಹರಿ ಕಟ್ಟಿ, ಲಕ್ಷ್ಮೀ ತೋಟದ, ಉಷಾ ಬಿಳೆಕುದುರಿ, ಟ್ಯಾಲನ್ಟ್ರೀ ಇಂಡಿಯಾದ ಸಿಇಓ ಜಗದೀಶ ನಾಯಕ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.