ಮಹಿಳೆಯರಲ್ಲಿ ಸ್ವಾವಲಂಬನೆಯ ಜೊತೆಗೆ ಆತ್ಮಸ್ಥೈರ್ಯ ಇರಬೇಕು
ಶಿಗ್ಗಾವಿ 09: ಮಹಿಳಾ ದಿನಾಚರಣೆ ಮಾರ್ಚ 8 ಕ್ಕೆ ಸೀಮಿತವಾಗದೇ ದಿನನಿತ್ಯ ಮಹಿಳಾ ದಿನಾಚರಣೆಯನ್ನು ಆಚರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಹಿರೇಮಠ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವ-2021 ಸಂಗನಬಸವ ಮಹಾಸ್ವಾಮಿಗಳ ಪುಣ್ಯಾರಾಧನೆಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಶೇ.50 ರಷ್ಟು ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಬಗ್ಗೆ ಗೊತ್ತೆ ಇಲ್ಲದಿರುವುದು ಬೇಸರದ ಸಂಗತಿ ಜೊತೆಗೆ ಮಹಿಳೆಯರಲ್ಲಿ ಸ್ವಾವಲಂಬನೆಯ ಜೊತೆಗೆ ಆತ್ಮಸ್ತೈರ್ಯ ಬೇಕು ಏಕೆಂದರೆ ಹೆಣ್ಣು ಬೋಗದ ವಸ್ತು ಅಲ್ಲ ಮನೆಯಲ್ಲಿ ಗಂಡು ಹೆಣ್ಣು ಹೊಂದಾಣಿಕೆಯಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಿರ್ವಹಣೆ ಮಾಡಿದರೇ ಯಾವುದೇ ಸಮಸ್ಯೆಗಳು ಬರುವುದಿಲ್ಲ ಹಾಗೂ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮಂದೆ ಬರಬೇಕು ಎಂದರು.
ತಾಲೂಕಿನ ಮಾದರಿ ಮಹಿಳಾ ಸಂಘ ಎಂದು ಪ್ರಖ್ಯಾತಿ ಪಡೆದ ವಚನ ನಿಧಿ ವನಿತಾ ಸಂಘದ ಅಧ್ಯಕ್ಷೆ ಡಾ. ಲತಾ ನಿಡಗುಂದಿ, ಸದಸ್ಯರಾದ ಶಿಕ್ಷಕಿ ಪ್ರತಿಭಾ ನಿಜಗುಳಿ, ಗಿರಿಜಾ ಹೆಸರೂರ, ಶಕುಂತಲಾ ಕೋಣನವರ, ವಿಜಯಲಕ್ಷ್ಮೀ ಗೋಟಗೋಡಿ, ಸುಜಾತಾ ಬಳಿಗಾರ, ಸ್ನೇಹಾ ಬುಳ್ಳಕ್ಕನವರ, ಅನ್ನಪೂರ್ಣಾ ಬುಳ್ಳಕ್ಕನವರ, ಶೋಭಾ ಡಾಂಗೆ ಎಲ್ಲರೂ ಸೇರಿ ಕೊರೋನಾ ತುರ್ತು ಸಂದರ್ಭದಲ್ಲಿ ಅನೇಕ ಜನರು ಸಾವನ್ನು ಅಪ್ಪುತ್ತಾರೆ ಆ ನಿಟ್ಟಿನಲ್ಲಿ ಹೂವು ಮಾರುವವಳ ಮಗ ಕೊರೋನಾ ಸಂದರ್ಭದಲ್ಲಿ ಮರಣವನ್ನು ಹೊಂದುತ್ತಾನೆ ಅದರ ಅಣುಕು ನೋಟವನ್ನು ಅದರಲ್ಲಿ ತಾಯಿಯ ಪಾತ್ರವನ್ನು ವೈದ್ಯೆ ಲತಾ ನಿಡಗುಂದಿ ನಿರ್ವಹಿಸಿದರೇ, ಉಳಿದವರು ನೆಂಟರು, ಹಿತೈಷಿಗಳು, ಸಂಬಂದಿಕರು, ಪರಿಚಯಸ್ತರಾಗಿ ಅಭಿನಯಿಸಿ ಸಾರ್ವಜನಿಕರ ಜಾಗೃತಿಗಾಗಿ ಪ್ರದರ್ಶಿಸಿ ಶರಣ ಶರಣೆಯರ ಪ್ರೀತಿಗೆ ಪಾತ್ರರಾದರು.
ಈ ಸಂದರ್ಭದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮತ್ತು ಬಸವ ದೇವರು, ಧರ್ಮಕಾರ್ಯದ ದಾನಿಗಳಾದ ಸುಧಾಕರ ದೈವಜ್ಞ, ಯಲ್ಲಪ್ಪ ಸೊಳಂಕೆ, ಬಸಣ್ಣಾ ವಾಲಿಶೆಟ್ಟರ, ಪ್ರಸಾದ ಸೇವೆಯನ್ನು ದಿ. ಸಿದ್ರಾಮಪ್ಪ ಫ ಹುಬ್ಬಳ್ಳಿ ಸ್ಮರಣಾರ್ಥ ಕುಟುಂಬ ವರ್ಗದವರಿಂದ ನೇರವೇರಿತು, ಶಕುಂತಲಾ ಕೋಣನವರ ಕಾರ್ಯಕ್ರಮ ನಿರ್ವಹಿಸಿದರು.