ಮಹಿಳೆಯರು ದುಡಿಮೆ ಕಾಯಕ ಸ್ವಾವಲಂಬನೆ ಅಗತ್ಯ
ಲೋಕದರ್ಶನ ವರದಿ
ಹೂವಿನ ಹಡಗಲಿ 16: ಮಹಿಳೆಯರು ದುಡಿಮೆ ಕಾಯಕ ಸ್ವಾವಲಂಬನೆ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಗೀತ ಶಿಕ್ಷಕಿ ಗೀತಾಂಜಲಿ ಹೇಳಿದರು.ಪಟ್ಟಣದ ಗವಿಮಠದ ಸಭಾಂಗಣದಲ್ಲಿ ರವಿವಾರ ಬಣಜಿಗ ಸಮಾಜದ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಹಿಳಾ ದಿನಾಚರಣೆ ಬೆಳೆದುಬಂದ ಬಗೆ, ಮಹಿಳಾ ಸಬಲೀಕರಣದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.ಕುಟುಂಬದ ಬಾಂಧವ್ಯ ಕಾಯ್ದುಕೊಳ್ಳವುದು ಮುಖ್ಯ ಎಂದು ಧರ್ಮಸ್ಥಳ ಸಂಘದ ಸಂಯೋಜನಾಧಿಕಾರಿ ರೇಷ್ಮಾ ತಿಳಿಸಿದರು.
ಗಿರಿಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ಅಧ್ಯಕ್ಷೆ ಸವಿತಾ ಅಂಗಡಿ ಸೌಹಾರ್ದ ಸಹಕಾರಿಯಲ್ಲಿ ಆರ್ಥಿಕ ವಹಿವಾಟು ನಡೆಸುವ ಮೂಲಕ ಅಭಿವೃದ್ಧಿ ಹೊಂದಲು ಮಾಹಿತಿ ಹಂಚಿಕೊಂಡರು.ತಾಲೂಕು ಬಣಜಿಗ ಸಮಾಜದ ಅಧ್ಯಕ್ಷರಾದ ಮುಂಡವಾಡ ಉಮೇಶ,ಶಿಕ್ಷಕ ಕಲಾವಿದ ಅಕ್ಕಸಾಲಿ ಚಂದ್ರ್ಪ ಉಪಸ್ಥಿತರಿದ್ದರು.ನೂರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ನಂದಿಹಳ್ಳಿ ಯಮುನಮ್ಮ, ರೇಷ್ಮಾ, ಗೀತಾಂಜಲಿಯವರಿಗೆ ಗೌರವ ಸನ್ಮಾನ ನೆರೆವೇರಿಸಲಾಯಿತು.ಮಹಿಳಾ ಸಮಾಜದ ಅಧ್ಯಕ್ಷೆ ವಿದ್ಯಾ ಯಳಮಲಿ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷರಾದ ಸೌಮ್ಯ ತುರಕಾಣಿ ಇದ್ದರು.ಡಾ.ಶೈಲಜ ಪವಾಡಶೆಟ್ರ ನಿರೂಪಿಸಿದರು. ನಾಗರತ್ನ ಕುಂಚೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿ ಹೇಳಿದರು. ವಿಜಯ ಕಡ್ಲಿ ವಂದನಾರೆ್ಣ ಮಾಡಿದರು.ಸಮಾಜದ ಮಹಿಳೆಯರು ಭಾಗವಹಿಸಿದ್ದರು.