ಮನರಂಜನೆ

ಮಹಿಳೆಯರು ತಮಗೆ ಬೇಕಾಗಿರುವ ಬಟ್ಟೆ ಧರಿಸುವುದು ಅವರ ಹಕ್ಕು: ನಟಿ ಉರ್ಫಿ ಜಾವೇದ್

ಮಹಿಳೆಯರು ತಮಗೆ ಬೇಕಾಗಿರುವ ಬಟ್ಟೆ ಧರಿಸುವುದು ಅವರ ಹಕ್ಕು: ನಟಿ ಉರ್ಫಿ ಜಾವೇದ್

ಮುಂಬೈ: ಫೆಬ್ರವರಿ 19: ಯಾವಾಗಲು ತಮ್ಮ ಬೋಲ್ಡ್ ಲುಕ್ ನಿಂದ ಹೆಸರುವಾಸಿಯಾಗಿರುವ ನಟಿ ಉರ್ಫಿ ಜಾವೇದ್ ಕರ್ನಾಟಕದ ಉಡುಪಿಯಲ್ಲಿ ಹುಟ್ಟಿಕೊಂಡ ಹಿಜಾಬ್ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ಕಾಲೇಜುಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಆಯ್ಕೆ ಮಾಡಿದರೆ ಅದು ದೊಡ್ಡ ವಿಚಾರವಾಗಲಾರದು. ಏಕೆಂದರೆ ಮಹಿಳೆಯರು ತಾವು ಏನು ಧರಿಸಬೇಕು ಎಂಬುದರ ಬಗ್ಗೆ ಮಾತನಾಡಬೇಕು ಎಂದು ಬಿಗ್ ಬಾಸ್ ಒಟಿಟಿ ಖ್ಯಾತಿಯ ನಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳೆಯರು ತಮಗೆ ಬೇಕಾಗಿರುವ ಬಟ್ಟೆ ಧರಿಸುವುದು ಅವರ ಹಕ್ಕು ಎಂದು ನಾನು ಹೇಳುತ್ತೇನೆ. ಮಹಿಳೆಯರು ತಮಗೆ ಬೇಕಾದುದನ್ನು ಧರಿಸಬಹುದು. ಅವರು ಶಾಲೆಯಲ್ಲಿ ಹಿಜಾಬ್ ಧರಿಸಿದ್ದರೂ, ಅದರಲ್ಲಿ ದೊಡ್ಡ ವಿಚಾರವೇನು? ಸಂಸತ್ತಿನಲ್ಲಿ ಅಥವಾ ಎಲ್ಲಿ ಬೇಕಾದರೂ ನಿಮಗೆ ಬೇಕಾದುದನ್ನು ನೀವು ಧರಿಸಬಹುದಾದರೆ, ಅದರಲ್ಲಿ ಏನಿದೆ? ಎಂದು ಪ್ರಶ್ನಿಸಿದ್ದಾರೆ.

ತಮ್ಮ ನೇರ, ನಡೆ ನುಡಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉರ್ಫಿ, ನಾನು ಮುಸ್ಲಿಂ ಹುಡುಗಿಯಾಗಿದ್ದರೂ ನಾನು ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ; ನಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ನಾನು ಮುಸ್ಲಿಂ ಆಗಿದ್ದರೂ ನಾನು ಭಗವದ್ಗೀತೆ ಓದುತ್ತೇನೆ ಎಂದು ಹೇಳಿದ್ದರು.

ಸುದ್ದಿ ಓದಿ