ತಾಳಿಕೋಟಿ

ಸಮಾಜದಲ್ಲಿ ಮಹಿಳೆಯರ ಸ್ಥಾನ ಮಹತ್ವದ್ದಾಗಿದೆ: ಶಾಸಕ ಸೋಮನಗೌಡ

ಸಮಾಜದಲ್ಲಿ ಮಹಿಳೆಯರ ಸ್ಥಾನ ಮಹತ್ವದ್ದಾಗಿದೆ: ಶಾಸಕ ಸೋಮನಗೌಡ

ತಾಳಿಕೋಟಿ: ಒಂದು ಉತ್ತಮ ಸಮಾಜ ಹಾಗೂ ಸಂಸ್ಕಾರದಿಂದ ಕೂಡಿದ ಕುಟುಂಬದ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ. ತಾಯಿಂದಿರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಈ ಸತ್ಕಾರ್ಯವು ಮುತ್ತೈದೆ ಹೆಣ್ಣುಮಕ್ಕಳಿಗೆ ಉಡಿ ತುಂಬುವ ಮೂಲಕ ಇಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ದೇ. ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.

ತಾಲೂಕಿನ ಗೊಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ಮಹಾದೇವಿಯವರ ಜಾತ್ರೋತ್ಸವ ಹಾಗೂ 501 ಮುತ್ತೈದೆ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮತನಾಡಿದರು.

ನಾನು ಶಾಸಕನಾದ ಮೇಲೆ ಈ ಗ್ರಾಮದ ಅಭಿವೃದ್ಧಿಗೆ ಹಾಗೂ ಇಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಲು ಸಾಕಷ್ಟು ಅನುದಾನವನ್ನು ಕೊಟ್ಟಿದ್ದೇನೆ. ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿಗಾಗಿ ಮನೆ-ಮನೆಗೆ ನಳ ಜೊಡಣೆ ಕಾಮಗಾರಿ ಮುಗಿದಿದೆ, ಇಲ್ಲಿಯ ರಸ್ತೆಗಳ ದುರಸ್ಥಿ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಸುಮಾರು ರೂ. 23 ಕೋಟಿ ವೆಚ್ಚದ ವಸತಿ ಶಾಲೆಯ ಕೆಲಸ ಅಂತಿಮ ಹಂತದಲ್ಲಿದೆ. ಇಲ್ಲಿಯ ದೇವಸ್ಥಾನಗಳ ಸಮುಧಾಯ ಭವನಗಳಿಗೂ ಅನುದಾನ ಕೊಟ್ಟಿದ್ದೆನೆ ಮುಂದಿನದಿನಗಳಲ್ಲಿ ಇನ್ನೂ ರೂ. 50 ಲಕ್ಷ ಅನುದಾನ ಕೊಡಲಿದ್ದೇನೆ. ಈ ಎಲ್ಲ ಕಾರ್ಯಗಳಲ್ಲಿ ನನಗೆ ನಿಮ್ಮೇಲ್ಲರ ಸಹಕಾರ ಬೇಕು ಎಂದರು. 

ಶಾಸಕರ ಪುತ್ರಿ ಸ್ಫೂರ್ತಿ  ಪಾಟೀಲ ಮಾತನಾಡಿ ಈ ಜಾತ್ರೆ ನಾಡಿನಲ್ಲಿಯೇ ಒಂದು ವೈಸಿಷ್ಟ್ಯೆಪೂರ್ಣವಾದ ಜಾತ್ರೆಯಾಗಿದೆ ಇಲ್ಲಿಯ ರಥವನ್ನು ಮುತ್ತೈದೆ ಹೆಣ್ಣು ಮಕ್ಕಳೆ ಎಳೆಯುತ್ತಾರೆ. ಮುತ್ತೈದೆಯರಿಗೆ ಉಡಿ ತುಂಬುವುದು ನಮ್ಮ ಭವ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು. 

ನಾವದಗಿ ಬ್ರಹನ್ಮಠದ .ಷ.ಬ್ರ.ರಾಜೇಂದ್ರ ಒಡೆಯರು ತಮ್ಮ ಆಶಿರ್ವಚನದಲ್ಲಿ ಧರ್ಮದಿಂದಲೇ ವಿಶ್ವ ಶಾಂತಿಯನ್ನು ಸ್ಥಾಪಿಸಲು ಸಾಧ್ಯವಿದೆ. ಎಲ್ಲರೂ ಧರ್ಮದ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಬದುಕಲು ಪ್ರಯತ್ನಿಸಿ ಎಂದರು. 

ಚಳಕಾಪೂರ ಸಿದ್ಧಾರೂಡ ಮಠದ ಪರಮಪೂಜ್ಯ ಶಂಕರಾನಂದ ಮಹಾಸ್ವಾಮಿಗಳು, ಕೊಡಗಾನೂರದ ವಿರುಪಾಕ್ಷ ಸ್ವಾಮಿಜಿ ಶರಣಸೋಮನಾಳದ ಪ.ಪೂ.  ಡಾ. ಶಿವಪುತ್ರ ಸ್ವಾಮಿಗಳು, ಅಗತಿರ್ಥ ಹಾಲುಮತ ಗುರುಪೀಠದ ಪ.ಪೂ. ರೇವಣಶಿದ್ದೇಶ್ವರ ಶಾಂತಮಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಸಾಸನೂರಿನ ಲಿಂಗಣ್ಣ ಶರಣರು ಪ್ರವಚನಕಾರ ಈರಣ್ಣ ಶಾಸ್ತ್ರೀಜಿ, ರುದ್ರಯ್ಯ ಸ್ವಾಮಿಜಿ, ಜೆಡಿಎಸ್ ಧುರಿಣ ರಾಜುಗೌಡ ಪಾಟೀಲ(ಕು. ಸಾಲವಾಡಗಿ), ಶಾಸಕರ ಧರ್ಮ ಪತ್ನಿ ಸುಷ್ಮಾ ಪಾಟೀಲ, ಕುಟುಂಬದ ಸದಸ್ಯರಾದ  ವಿಜಯಲಕ್ಷ್ಮೀ ಪಾಟೀಲ, ಭಾಗ್ಯಶ್ರೀ ಪಾಟೀಲ, ಎಬಿಡಿ ಫೌಂಡೇಶನ್ದ ಸಂತೋಷ ದೊಡಮನಿ, ಸಂಗನಗೌಡ ಹೆಗರಡ್ಡಿ, ಪ್ರಶಾಂತ ಹಾವರಗಿ,  ಭೈರಿ ಫೌಂಡೇಶನ್ದ ಚೇತನಕುಮಾರ ಭೈರಿ, ಶಿವನಗೌಡ ಪಾಟೀಲ, ಶರಣಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಬಿ. ಎಚ್. ಬಿರಾದಾರ, ಪ್ರಭುಗೌಡ ಬಿರಾದಾರ(ಅಸ್ಕಿ), ಬಸನಗೌಡ ಬಿರಾದಾರ(ಪೀರಾಪೂರ), ರಾಯಪ್ಪಗೌಡ ನೀರಲಗಿ, ಕಾಶಿರಾಯಗೌಡ ಪೀರಾಪೂರ ಇದ್ದರು 

ಸುದ್ದಿ ಓದಿ