ವಿಜಯಪುರ

ಖೇಲೋ ಇಂಡಿಯಾಗೆ ಮಹಿಳಾ ವಿವಿಯ ಸಮುದ್ರ ತೀರದ ಚಂಡಾಟ ತಂಡ ಆಯ್ಕೆ

ಖೇಲೋ ಇಂಡಿಯಾಗೆ ಮಹಿಳಾ ವಿವಿಯ ಸಮುದ್ರ ತೀರದ ಚಂಡಾಟ ತಂಡ ಆಯ್ಕೆ

ವಿಜಯಪುರ 25: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ “ಸಮುದ್ರ ತೀರದ ಚಂಡಾಟ” ಕ್ರೀಡಾಪಟುಗಳ ತಂಡವು  2025ಹಿ26 ನೇ ಸಾಲಿನ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಆಯ್ಕೆಯಾಗಿದ್ದು, ಇದೇ ನ, 28 ರಿಂದ ಡಿ, 02 ರವರೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 

ವಿಶ್ವವಿದ್ಯಾನಿಲಯದ ಸಮುದ್ರ ತೀರದ ಚಂಡಾಟ ಕ್ರೀಡಾಪಟುಗಳು ವಿವಿಧ ವಿಶ್ವವಿದ್ಯಾಲಯಗಳ ಪ್ರತಿನಿಧಿ ತಂಡಗಳೊಂದಿಗೆ ಪೈಪೋಟಿ ನಡೆಸಲಿದ್ದು, ತಂಡದ ತರಬೇತಿದಾರರಾಗಿ ಕುಮಾರಿ ಜಬಿನ್ ತಾಜ್ ಜಿಗಳೂರ ನೇತೃತ್ವ ವಹಿಸಲಿದ್ದಾರೆ. 

ಚಂಡಾಟ ತಂಡಕ್ಕೆ, ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್‌. ಲಕ್ಕಣ್ಣವರ, ಹಾಗೂ ಕ್ರೀಡಾ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರಿ, ಸಹಾಯಕ ನಿರ್ದೇಶಕ ಡಾ. ವಿಶ್ವನಾಥ ಎಮ್‌. ನಡಕಟ್ಟಿ, ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ