ಬಳ್ಳಾರಿ

ಮಹಿಳಾ ಪರಿಚಾರಕರನ್ನು ಗೌರವಿಸಿ ವಿಶಿಷ್ಟವಾಗಿ ಮಹಿಳಾ ದಿನಾಚರಣೆ

ಮಹಿಳಾ ಪರಿಚಾರಕರನ್ನು ಗೌರವಿಸಿ ವಿಶಿಷ್ಟವಾಗಿ ಮಹಿಳಾ ದಿನಾಚರಣೆ

ಬಳ್ಳಾರಿ  09: ನಗರದ ಮೊಹಮ್ಮದಿಯಾ  ಮಹಿಳಾ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಅದೇ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಪರಿಚಾರಕರಾದ ಖುರಿಷೀದ್, ರುದ್ರಮ್ಮ, ಭಾನು, ಶಾಂತ ಬಾಯಿ, ಲೀಲಾ ಮತ್ತು ಜುಬೇದರವರನ್ನು ಆಹ್ವಾನಿಸಲಾಗಿತ್ತು.  

ಈ ಸಂಧರ್ಭದಲ್ಲಿ ಉಪನ್ಯಾಸಕರಾದ ಕಸ್ತೂರಿ ಮಾತನಾಡಿ ಸ್ತ್ರೀಯು ತ್ಯಾಗಕ್ಕೆ ಮತ್ತೊಂದು ಹೆಸರು ಎಂದರು, ಉಪನ್ಯಾಸಕ ಜೀಲಾನ್ ಸರ್ವೇಸಾಮಾನ್ಯವಾಗಿ ಮನುಷ್ಯ 24 ಡೆಲ್ ನಷ್ಟು ನೋವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುತ್ತದೆ ಆದರೆ ಹೆರಿಗೆ ಸಂದರ್ಭದಲ್ಲಿ 40 ಕ್ಕಿಂತ ಹೆಚ್ಚು ಡೆಲ್ ನಷ್ಟು ನೋವನ್ನು ಅನುಭವಿಸಬೇಕಾಗ್ತುದೆ. ಆದರೂ ತನ್ನ ನೋವೆಲ್ಲಾ ತನ್ನ ಮಕ್ಕಳಿಗಾಗಿ ಸಹಿಸಿಕೊಳ್ಳುವ ಗುಣಕ್ಕೆ ಎಲ್ಲಾರು ಗೌರವಿಸಬೇಕಾಗಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಜಾಮಿಲ್ ಕೊನೆಗೆ ಮಾತನಾಡಿ ದೇವರು ಹೆಣ್ಣನ್ನು ಸೃಷ್ಠಿಸದಿದ್ದರೆ ನಾವಾರು ಇಂದು ಇಲ್ಲಿ ಇರುತ್ತಿರಲಿಲ್ಲ. ಎರಡು ಕೆ.ಜಿ ತೂಕದ ವಸ್ತುವನ್ನು ನಾವು ನಿರಂತರವಾಗಿ ಎರಡು ಗಂಟೆಗಳ ಕಾಲ ಹಿಡಿದುಕೊಳ್ಳಲು ಸಮರ್ಥರಾಗುವುದಿಲ್ಲ ಆದರೆ ಸ್ತ್ರೀಯೂ,  ಮಗುವನ್ನು ಒಂಬತ್ತು ತಿಂಗಳುಗಳ ಕಾಲ ಮಗುವನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ಸಂಯಮದಿಂದ ಸಲಹುತ್ತಾಳೆ. ಹೆಣ್ಣಿಗೆ ಸರಿಸಾಟಿ ಜಗತ್ತಿನಲ್ಲಿ ಮತ್ತಾರು ಇರಲು ಸಾಧ್ಯವಿಲ್ಲ. ತನ್ನ ಮಗನನ್ನು ಸಲುಹಲು ತನ್ನ ಇಡೀ ಜೀವನವನ್ನು ಮುಡಿಪಾಗಿಡುತ್ತಾಳೆ ಅಂತಹ ಹೆಣ್ಣಿಗೆ ನನ್ನ ಅಭಿನಂದನೆಗಳು ಎಂದರು.

ಭಾವುಕರಾದ ಪರಿಚಾರಕರು:   ಹಲವು ವರ್ಷಗಳಿಂದ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ  ಖುರಿಷೀದ್, ರುದ್ರಮ್ಮ, ಭಾನು, ಶಾಂತಬಾಯಿ, ಲೀಲಾ ಮತ್ತು ಜುಬೇದರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂದರ್ಭದಲ್ಲಿ ಅತ್ಯಂತ ಭಾವುಕರಾಗಿ ಕಣ್ಣಂಚಲ್ಲಿ ನೀರನ್ನೊಯ್ದರು. ಈ ಘಟನೆ ಅಲ್ಲಿದ್ದ ಬಾಲಕಿಯರೆಲ್ಲರ ಕಣ್ಣೊದ್ದೆಯಾದ ದೃಶ್ಯ ಸಾಮಾನ್ಯವಾಗಿತ್ತು.ಈ ಸಂದರ್ಭದಲ್ಲಿ ಉಪನ್ಯಾಸಕರಾದ , ಕರೀಮ, ಜೀಲಾನ್, ನಿಖಿಲ್, ಸುಮಯಾ, ಪ್ರಾಂಶುಪಾಲರಾದ ಮಧುಲತಾ, ಅದ್ಯಕ್ಷತೆ ಸ್ಥಾನವಹಿಸಿದ್ದ ಮುಜಾಮಿಲ್ ಹಾಗೂ ಪರಿಚಾರಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಸುದ್ದಿ ಓದಿ