ಲೇಖನಗಳು

21ನೆಯ ಶತಮಾನದಲ್ಲಿ ಮಹಿಳೆ

21ನೆಯ ಶತಮಾನದಲ್ಲಿ ಮಹಿಳೆ

“ಪಿತಾ ರಕ್ಷಿತ ಕೌಮಾರ್ಯೇ ಬರ್ತಾ ರಕ್ಷಕಿ ಯೌವನೇ ವಾರ್ದಕೆ ಪುತ್ರ ಪಾತ್ರಶ್ಚನ ಸ್ತ್ರೀ ಸ್ವಾತಂತ್ರ ಮರ್ಹತಿ” 

                                                                                                                             -ಮನುಸ್ಮೃತಿ 

ಹೆಣ್ಣು ಬಾಲ್ಯದಲ್ಲಿ ತಂದೆಯಿಂದ, ಯೌವನದಲ್ಲಿ ಗಂಡನಿಂದ, ವೃದ್ಯಾಪ್ಯದಲ್ಲಿ ಪುತ್ರನಿಂದ ರಕ್ಷಣೆ ಪಡೆಯುವಳು ಅದಕ್ಕಾಗಿಯೇ ಮನು ಸ್ತ್ರೀಯರು ಪರರ ಆಧೀನರು ಸ್ವಾತಂತ್ರ್ಯಕ್ಕೆ ಅರ್ಹರಿಲ್ಲ ಎಂದು ಕಟುವಾಗಿ ಹೇಳಿದ್ದಾನೆ. ಮನು ಒಂದರ್ಥದಲ್ಲಿ ಸ್ತ್ರೀಯ ದ್ವೇಷಿಯಾಗಿರಲಿಲ್ಲವೆಂದು ಹೇಳಬಹುದು. ಮನು ಸ್ತ್ರೀಪರರ ಆಧೀನರು ಎಂದು ಒಪ್ಪಿಕೊಂಡ ಸ್ವಲ್ಪ ಕಾಲದ ನಂತರ “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರರಮಂತಿ ದೇವತಾಃ” ಯಾವ ನಾಡಿನಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೆಯೋ ಅಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂದು ಹೇಳಿದ. ಅಂದಿನಿಂದ ಮಹಿಳೆಯರನ್ನು ಎಲ್ಲರೂ ಪೂಜ್ಯ ಭಾವನೆಯಿಂದ ನೋಡಹತ್ತಿರದರು. ಕುರಾನಿನಲ್ಲಿ ಹೀಗಿದೆ “God could not be everywhere there pore he created mothers”ದೇವರಿಗೆ ಎಲ್ಲಾ ಕಡೆಗೂ ಇರಲಿಕ್ಕೆ ಸಾಧ್ಯವಾಗಲಿಲ್ಲವಂತೆ ಅದಕ್ಕೆ  ತಾಯಿಯನ್ನು ಸೃಷ್ಟಿಸಿದ್ದಾನೆಂದು ಹೇಳಲಾಗಿದ್ದೇನೆ.  

ವೇದ ಕಾಲದಲ್ಲಿ ಮಹಿಳೆಯರು ಉಪನಯನಕ್ಕೆ ಅರ್ಹಳಾಗುತ್ತಿದ್ದಳು. ಬೌಧ್ಧ ಕಾಲದಲ್ಲಿ ಮಹಿಳೆಯರು ಬೌದ್ಧ ಸಂಘಗಳಲ್ಲಿ ಬೌದ್ಧ ಭಿಕ್ಷಾಣಿಯಾಗಿದ್ದರು. ರಾಜ ಮಹಾರಾಜರ ಕಾಲದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ ಮುಂತಾದ ವೀರ ಮಹಿಳೆಯರು ಹೋರಾಟಕ್ಕೆ ಹೆಸರಾಗಿ ಹೋಗಿದ್ದಾರೆ. ಕೈಗಾರಿಕಾ ಕ್ರಾಂತಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹಿಳೆಯರು ಪಾಲ್ಗೊಂಡಿದ್ದಾರೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದಲ್ಲಿ ಅನೇಕ ಮಹಿಳೆಯರು ಭಾಗವಹಿಸಿ ಕೀರ್ತಿಯನ್ನು ಮೆರೆದಿದ್ದಾರೆ.ಕೌಟುಂಬಿಕ ಜೀವನದಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಸ್ತ್ರೀಯು ತಾಯಿ, ತಂಗಿ, ಸಹೋದರಿ, ಮಗಳು, ಹೆಂಡತಿ, ಅತ್ತೆ, ಸೊಸೆಯಾಗಿ ಪುರುಷನೊಂದಿಗೆ ಇಂದು ಸಹಕರಿಸುತ್ತಿದ್ದಾಳೆ. ಮನೆಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾಳೆ. ಬ್ರಿಟನ್ನಿನ ಪ್ರಾನ್ಸಿಸ್ ಬೇಕನ್ ಸ್ತ್ರೀಯು ಯುವಕನ ಪ್ರೇಮಿ ಪ್ರೌಢನ ಹೆಂಡತಿ, ವೃದ್ಧನ ಸೇವಕಿ ಎಂದು ಹೇಳಿದ್ದಾನೆ. ಪುರುಷರಂತೆ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾಳೆ. ಉದ್ಯೋಗಸ್ಥ ಮಹಿಳೆ ಉದ್ಯೋಗಸ್ಥ ಪುರುಷನಿಗೆ ಆತನ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಿದ್ದಾಳೆ. ಸ್ತ್ರೀಯು ಇಂದು ಕಾರ್ಯಾಲಯಗಳಲ್ಲಿ, ಕ್ರೀಡೆಗಳಲ್ಲಿ, ರಾಜಕೀಯದಲಿ,್ಲ ಚಾಲಕಿಯಾಗಿ, ವಿಜ್ಞಾನಿಯಾಗಿ ಪ್ರತಿ ರಂಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಆಸ್ತಾನವನ್ನು ಪೆಡೆದುಕೊಂಡಿದ್ದಾಳೆ. ಪುರುಷನಿಗೆ ಸರಿಸಮಾನಳಾಗಿ ದುಡಿಯುತ್ತಿದ್ದಾಳೆ. ಮನೆಯ ಒಳಗೆ ಹೊರಗೆ ದುಡಿದು ಮನೆಯ ಶಾಂತಿಯನ್ನು ಕಾಪಾಡಬಲ್ಲಳು. 

ಇಂದು ಸಮಾಜದಲ್ಲಿ ಮಹಿಳೆ ಇರದ ಸ್ಥಳವೇ ಇಲ್ಲ ಅಸಾಧ್ಯವೆಂದು ತೋರಿದ ಕೆಲಸವನ್ನು ಸಾಧ್ಯಮಾಡಿಹಳು. ಹೆಣ್ಣು ಹೇಗೆ ಅನೇಕ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾಳೆ ವೈದ್ಯ ಪತ್ತಾದಾರಿನಿ, ಸಂಶೋಧಕಿ, ಇಂಜನೀಯರ, ಪೈಲೆಟ್, ಚಿತ್ರಕಲೆ, ಕಸೂತಿ, ಕ್ರೀಡೆಗಳು, ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಬಿತ್ತಿದ್ದಾಳೆ. ನಾನು ಪುರುಷನಂತೆ ಎಲ್ಲಾ ಕೆಲಸಗಳನ್ನು ಮಾಡಬಲ್ಲೆ ಎಂದುಸಾಧಿಸಿ ತೋರಿಸಿದ್ದಾಳೆ. 

ಜೈ. ಹಿಂದ್ 

- ಶ್ರೀಮತಿ ಸುವರ್ಣಾ ಜಿ. ಚವಡಿ,  

ಗದಗ 

- * * * - 


ಸುದ್ದಿ ಓದಿ