ಆಂಬುಲೆನ್ಸ್ನಲ್ಲಿ ಮಹಿಳೆಗೆ ಹೆರಿಗೆ
ಲೋಕದರ್ಶನ ವರದಿ
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ಮಹಿಳೆಗೆ ಶುಕ್ರವಾರ 108 ಆಂಬುಲೆನ್ಸ್ನಲ್ಲಿ ಹೆರಿಗೆ ಆಗಿದೆ.
ಇಂದಿರಾ ಮಂಜುನಾಥ ಲಮಾಣಿ ಎಂಬುವರಿಗೆ 108 ಆಂಬುಲೆನ್ಸ್ನಲ್ಲಿ ಹೆರಿಗೆಯಾಗಿದ್ದು ಇವರನ್ನು ಗ್ರಾಮದಿಂದ ಕರೆ ತರುತ್ತಿದ್ದಾಗ ಮಾರ್ಗ ಮಧ್ಯೆ ಅಗಡಿ ಕ್ರಾಸ್ ಬಳಿ ಇವರಿಗೆ ಹೆರಿಗೆ ನೋವು ಜಾಸ್ತಿಯಾಗಿ ತಕ್ಷಣ ಆಂಬುಲೆನ್ಸ್ ಅನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರು, ಚಾಲಕ ಕೆಂಚೇಶ್ ಇ.ಎನ್. ಮತ್ತು ಆಶಾ ಕಾರ್ಯಕರ್ತೆ ನೀಲವ್ವ ಲಮಾಣಿ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ನಂತರ ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ.