ಬಳ್ಳಾರಿ

ಮಹಿಳೆ ಕಾಣೆ: ಪ್ರಕರಣ ದಾಖಲು

ಮಹಿಳೆ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 08: ಬಂಡ್ರಿ ಗ್ರಾಮದ ನಿವಾಸಿ 20ವರ್ಷದ ಅಶ್ವಿನಿ ಎಂಬುವ ಯುವತಿ ಅ. 01ರಿಂದ ಕಾಣೆಯಾಗಿರುವ ಬಗ್ಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಿಳೆಯ ಚಹರೆ: ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆ ಗಂಪು ಮೈಬಣ್ಣ ಹಾಗೂ ಕೆಂಪು ಬಣ್ಣದ ಚೂಡಿದಾರ ತೊಟ್ಟಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. 

ಕಾಣೆಯಾದ ಯುವತಿಯ ಸುಳಿವು ಸಿಕ್ಕಲ್ಲಿ ಕೂಡ್ಲಿಗಿ ಪೊಲೀಸ್ ಠಾಣೆಯ ಪಿ.ಎಸ್‌.ಐ ದೂ.ಸಂ.08391-220223, 220033, 220326 ಮತ್ತು 08392-258100 ಗೆ ಸಂಪರ್ಕಿಸಲು ಕೋರಿದೆ. 


ಸುದ್ದಿ ಓದಿ