ಬಳ್ಳಾರಿ

ಮಹಿಳೆೆ ಕಾಣೆ: ಪ್ರಕರಣ ದಾಖಲು

ಮಹಿಳೆೆ ಕಾಣೆ: ಪ್ರಕರಣ ದಾಖಲು

ಬಳ್ಳಾರಿ 03: ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯ ಸಂಡೂರಿನ ಆಶ್ರಯ ಕಾಲೋನಿಯ 28 ವರ್ಷದ ಪಿ.ಯಶೋಧ ಎಂಬ ಮಹಿಳೆ ಜ.28 ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಂಡೂರಿನ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಯುವತಿ ಜ. 28ರಂದು ಬೆಳ್ಳಿಗ್ಗೆ 9:30 ಕ್ಕೆ ತನ್ನ ಚಿಕ್ಕ ಮಗನಾದ ಗಣೇಶನನ್ನು ಸ್ಕೂಲಿಗೆ ಬಿಟ್ಟು ಬರಲು ಹೋದವಳು ಮನೆಗೆ ವಾಪಸ್ ಬರದೇ ಕಾಣೆಯಾಗಿದ್ದಾಳೆ ಎಂದು ಗಂಡ ಪರಶುರಾಮ ದೂರಿನಲ್ಲಿ ತಿಳಿಸಿದ್ದಾರೆ. 

ಕಾಣೆಯಾದ ಮಹಿಳೆಯ ಚಹರೆ ಗುರುತು: ತೆಳುವಾದ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ, ಎತ್ತರ 4.5 ಅಡಿ, ಕಪ್ಪು ಮತ್ತು ಬಿಳಿ ಬಣ್ಣದ ಚೂಡಿದಾರ ಬಟ್ಟೆ ಧರಿಸಿರುತ್ತಾರೆ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆೆ. 

ಈ ಮೇಲ್ಕಂಡ ಚಹರೆಯುಳ್ಳ ಮಹಿಳೆ ಬಗ್ಗೆ ಸುಳಿವು ಅಥವಾ ಮಾಹಿತಿ ಸಿಕ್ಕಲ್ಲಿ ಸಂಡೂರು ಪೊಲೀಸ್ ಠಾಣೆಯ ದೂ.08395-260249, ಮತ್ತು ಪೋಲಿಸ್ ಕಂಟ್ರೋಲ್ ರೂಂ ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. 


ಸುದ್ದಿ ಓದಿ