ಮಹಿಳೆ ಕಾಣೆ: ಪ್ರಕರಣ ದಾಖಲು
ಬಳ್ಳಾರಿ 17: ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯ 31 ವರ್ಷದ ಉಮಾ ಎಂಬ ಮಹಿಳೆ ಫೆ.19 ರಂದು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಅಪರಾಧ ವಿಭಾಗ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಕಾಣೆಯಾದ ಮಹಿಳೆಯ ಚಹರೆ ಗುರುತು: 4.10 ಅಡಿ ಎತ್ತರ, ಕೋಲು ಮುಖ, ಪೇರು ಮೈಬಣ್ಣ, ತೆಳ್ಳನೆಯ ಮೈಕಟ್ಟು, ತಲೆಯಲ್ಲಿ 14ಇಂಚು ಉದ್ದದ ಕಪ್ಪು ಕೂದಲು, ಕೊರಳಲ್ಲಿ ಮಾಂಗಲ್ಯ ಸರ, ಗಾಜಿನ ಬಳೆಗಳು, ಧರಿಸಿರುತ್ತಾಳೆ. ಹಿಂದಿ ನಾಗ್ಪುರಿ ಭಾಷೆ ಮಾತನಾಡುತ್ತಾಳೆ. ಕಾಣೆಯಾದ ಮಹಿಳೆಯ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೊ.ಸಂ.08395-250100, ಸಿ.ಪಿ.ಐ ಸಂಡೂರು 9480803062, ಡಿ.ವೈ.ಎಸ್.ಪಿ. ಕೂಡ್ಲಿಗಿ 08395-260100, 9580803036, ಎಸ್.ಪಿ ಬಳ್ಳಾರಿ 08391-220326, ಬಳ್ಳಾರಿ ಕಂಟ್ರೋಲ್ ರೂ. 08392-258300, 08392-279100. ಸಂಪರ್ಕಿಸಲು ಕೊರಿದೆ.*-*-*