ಹೂವಿನ ಹಡಗಲಿ

ವೋಟರ್ ಐಡಿ ಇಲ್ಲದಿದ್ದರೆ ವ್ಯಕ್ತಿಯ ಅಸ್ತಿತ್ವ ಇಲ್ಲ - ಮಾಜಿ ಸಚಿವ ಪರಮೇಶ್ವರ ನಾಯ್ಕ

ವೋಟರ್ ಐಡಿ ಇಲ್ಲದಿದ್ದರೆ ವ್ಯಕ್ತಿಯ ಅಸ್ತಿತ್ವ ಇಲ್ಲ  - ಮಾಜಿ ಸಚಿವ ಪರಮೇಶ್ವರ ನಾಯ್ಕ

 ಲೋಕದರ್ಶನ ವರದಿ  

ಹೂವಿನಹಡಗಲಿ  18:  ’ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜೂನ್ 30ರಿಂದ ಕಾರ್ಯ ಆರಂಭವಾಗಲಿದ್ದು  ಪ್ರತಿಯೊಂದು ಮತವೂ ಅಮೂಲ್ಯ ವಾಗಿದ್ದು, ಪಕ್ಷದ ಬೂತ ಮಟ್ಟದ  ಕಾರ್ಯಕರ್ತರು  ಎಚ್ಚರಿಕೆ ವಹಿಸಬೇಕಿದೆ’ ಎಂದು ಮಾಜಿ ಸಚಿವ ಪಿಟಿ.ಪರಮೇಶ್ವರನಾಯಕ ಹೇಳಿದರು. ಪಟ್ಟಣದ ದ್ರಾಕ್ಷಿಯಣಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ವಿಶೇಷ  ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಡೆದ ಬಿಎಲ್‌ಎ- 2 ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ ’ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ’ಮತದಾರರ ಪರಿಷ್ಕರಣೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಿದೆ. ಅಂದು ಇಲ್ಲದಿದ್ದರೆ ವ್ಯಕ್ತಿಯ ಅಸ್ತಿತ್ವವೇ ಕಳೆದುಕೊಂಡಂತಾ ಗುತ್ತದೆ. ಆದ್ದರಿಂದ ಅರ್ಹ ಮತದಾರರ ಹೆಸರನ್ನು ಉಳಿಸುವ ಜವಾಬ್ದಾರಿ  

ನಮ್ಮೆಲ್ಲರ ಮೇಲಿದೆ’ ಎಂದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಗೌಸ್ ಮೊಹಿದ್ದೀನ್, ಪಂಚ ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್‌.ಶಾಂತನಗೌಡ, ಸದಸ್ಯ ಗುರುವಿನ ರಾಜಣ್ಣ, ಪ್ರಚಾರ ಸಮಿತಿ ಅದ್ಯಕ್ಷ ಹಾಲೇಶ ಸೋಗಿ,  ಮುಖಂಡರಾದ ಬಸವನಗೌಡ ಪಾಟೀಲ್,ಜ್ಯೊತಿ ಮಲ್ಲಣ್ಣ, ಚಂದ್ರನಾಯ್ಕ, ವಸಂತ, ದೂದನಾಯ್ಕ, ಸೊನ್ನದ ಮಹೇಶ್, ಯುವ. ಕಾಂಗ್ರೆಸ್ ಅದ್ಯಕ್ಷ ಮಂಜುನಾಥ ದೇಸಾಯಿ, ಶಿವಕುಮಾರ್, ಹಕ್ಕಂಡಿ ಮಂಜುನಾಥ ಸೇರಿದಂತೆ ತಾಲ್ಲೂಕಿನ ಪಕ್ಷದ ಕಾರ್ಯಕರ್ತರು ತರಬೇತಿ ಯಲ್ಲಿ ಭಾಗವಹಿದ್ದರು. ಇದೇ ವೇಳೆ ಬಿಜೆಪಿ ಯ ಗಡಿಗಿ ಕೃಷ್ಣ ಕಾಂಗ್ರೆಸ್ ಸೇರೆ​‍್ಡ ಯಾದರು. 


ಸುದ್ದಿ ಓದಿ