ಲೇಖನಗಳು

ಮನಸ್ಸು ಏಕೆ ಇಷ್ಟೊಂದು ವಿಚಿತ್ರ

ಮನಸ್ಸು ಏಕೆ ಇಷ್ಟೊಂದು ವಿಚಿತ್ರ

ಈ ಮನಸ್ಸು ಕ್ಷಣಕ್ಷಣಕ್ಕೂ ಬದಲಾಗುತ್ತದೆ ಇರುತ್ತೆ ಒಮ್ಮೆಮ್ಮೆ ಖುಷಿ ಮತ್ತೊಮ್ಮೆ ದುಃಖ ಅದೇನೋ ಯೋಚನೆ ಮತ್ತೇನೂ ಆಲೋಚನೆ ಹೀಗೆ ದಿನವಿಡೀ ಒಂದಲ್ಲ ಒಂದು ಗೊಂದಲದಲ್ಲಿ ನಮ್ಮ ಮನಸ್ಸುಗಳು ಚಿತ್ರ ವಿಚಿತ್ರವಾಗಿ ವತರ್ಿಸುತ್ತದೆ ಈ ದೇಹ ತಾಯಿಯ ಸೃಷ್ಟಿ ಆತ್ಮ ದೇವರ ಸೃಷ್ಟಿ ಆದರೆ ಈ ಮನಸ್ಸು ಮಾತ್ರ ನಮ್ಮದೇ ಸೃಷ್ಟಿಯಾಗಿರುತ್ತದೆ ನಾವು ಈ ಮನಸ್ಸನ್ನು ಹೇಗೆ ಬೇಕಾದರೂ ಬದಲಾಯಿಸಬಹುದು ದಂಡಿಸಬಹುದು ಇಡೀ ನಮ್ಮ ಜೀವನವೆಲ್ಲ ನಮ್ಮ ಮನಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ ಹಾಗಾಗಿ ನಮ್ಮ ಮನಸ್ಸನ್ನು ನಾವೇ ನಿಯಂತ್ರಣದಲ್ಲಿಡಬೇಕು ಇಲ್ಲವಾದಲ್ಲಿ ಮನಸ್ಸಿನಲ್ಲಿ ಮೂಡುವ ನೂರಾರು ವಿಚಾರಗಳಿಗೆ ನಾವೇ ದುಃಖ ಅಥವಾ ಖುಷಿಯನ್ನು ಅನುಭವಿಸಬೇಕಾಗುತ್ತದೆ. 

ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೆ ಮನಸ್ಸು ತುಂಬಾನೇ ಮುಖ್ಯವಾಗಿರುತ್ತದೆ ಒಬ್ಬ ವ್ಯಕ್ತಿಯಲ್ಲಿ ತನ್ನ ಮನಸ್ಥಿತಿ ಚೆನ್ನಾಗಿದ್ದರೆ ಮಾತ್ರ ಆ ವ್ಯಕ್ತಿಯ ವ್ಯಕ್ತಿತ್ವ ಪ್ರಜ್ವಲಿಸುತ್ತದೆ ಇಲ್ಲದಿದ್ದರೆ ವ್ಯಕ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತದೆ ಈ ಹುಚ್ಚು ಮನಸ್ಸಿನಲ್ಲಿ ನೂರಾರು ಆಸೆಗಳು ಹುಟ್ಟಿಕೊಂಡು ಅದೆಷ್ಟು ನೋವು ಅನುಭವಿಸುವಂತೆ ಮಾಡುತ್ತೆ ಅದಕ್ಕಾಗಿ ನಮ್ಮ ಮನಸ್ಸಿಗೆ ನೋವುಂಟುಮಾಡುವ ಆಸೆಗಳನ್ನು ಕೈಬಿಟ್ಟು ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ಪಡುವಂತ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಈ ಮನಸ್ಸು ಕೋತಿಯಂತೆ ಮರದಿಂದ ಮರಕ್ಕೆ ಜಿಗಣೆ ಇರುತ್ತೆ ಕ್ಷಣಕ್ಷಣಕ್ಕೂ ಒಂದೊಂದು ಆಸೆಯನ್ನು ಹೊತ್ತು ಪಡಿಸುತ್ತೆ ಮನಸ್ಸಿನ ಆಸೆಗಳಿಗೆ ಮಿತಿಯಿಲ್ಲ ಯೋಜನೆಗೆ ತಕ್ಕಂತೆ ಮನಸ್ಸಿನ ಆಸೆಗಳು ಹೆಚ್ಚುತ್ತಾ ಹೋಗುತ್ತೆ ಅತಿಯಾದ ಆಸೆಗಳಿಗೆ ಕಡಿವಾಣ ಹಾಕಿದಾಗಲೇ  ಮನಸ್ಸುಗಳು ನಮ್ಮ ಮಿತಿಯಲ್ಲಿರುತ್ತದೆ. 

ಈ ಮನಸ್ಸು ಒಂದು ನೊಣ ವಿದ್ದಂತೆ ನೊಣಕ್ಕೆ ಎಷ್ಟೇ ಸಿಹಿ ಇದ್ದರೂ ಪಕ್ಕದಲ್ಲಿ ಹಾದುಹೋಗುವ ಕಸದ ತೊಟ್ಟಿಯ ಗಾಡಿಯಲ್ಲಿನ ಕಸಕ್ಕೆ ಚಂಗನೆ ನೆಗೆದು ಬಿಡುತ್ತದೆ ಈ ನೊಣದ ಹಾಗೆ ನಮ್ಮ ಮನಸ್ಸುಗಳು ಕೂಡ ಎಷ್ಟೇ ಒಳ್ಳೆಯ ವಿಷಯಗಳನ್ನು ಅಳವಡಿಸಿಕೊಂಡರು ಕೆಲವೊಮ್ಮೆ ಕೆಟ್ಟ ವಿಷಯಗಳ ಕಡೆ ಮನಸು ಅತಿಯಾಗಿ ಒಲವು ತೋರಿಸುತ್ತದೆ ಮನಸ್ಸಿಗೆ ಒಮ್ಮೆ ಮದವೇರಿದಾಗ ಅದು ಕೆಟ್ಟದ್ದು ಒಳ್ಳೇದು ಎನ್ನುವ ಆಲೋಚನೆಯನ್ನು ಮಾಡುವ ಸ್ಥಿತಿಯನ್ನೇ ಮರೆತು ತಕ್ಷಣವೇ ಮನಸ್ಸಿಗೆ ಬಂದಂತೆ ನಿಧರ್ಾರ ತೆಗೆದುಕೊಂಡು ಮನಬಂದಂತೆ ವತರ್ಿಸುತ್ತದೆ.

ನಮ್ಮೆಲ್ಲರ ಮನಸ್ಸುಗಳು ಒಬ್ಬರಂತೆ ಮತ್ತೊಬ್ಬರಿಗೆ ಇರುವುದಿಲ್ಲ ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಇದನ್ನ ಕಲ್ಪನೆಗಳಿಂದ ಮನಸು ಕೂಡಿರುತ್ತದೆ ಒಬ್ಬರಿಗೆ ಸಂಗೀತ ಹಾಡು ನಾಟ್ಯ ಇಂಥ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ ಇನ್ನು ಕೆಲವರಿಗೆ ಕ್ರೀಡೆ ಮನೋರಂಜನೆ ಓದುವ ಹವ್ಯಾಸ ಹೀಗೆ ನಾನಾ ರೀತಿಯ ಹಲವಾರು ವಿಷಯಗಳನ್ನು ತಮ್ಮ ತಮ್ಮ ಮನಸ್ಸಿಗೆ ಹಿತವೆನಿಸುವಂತೆ ಅನುಭವಿಸುತ್ತಾರೆ ಇತರರ ಮನಸ್ಸನ್ನು ತಿಳಿದುಕೊಳ್ಳುವುದು ಕಷ್ಟಕರ ಹಾಗೂ ವಿಭಿನ್ನ ಅಭಿವೃದ್ಧಿಯ ಮನಸ್ಸುಳ್ಳವರನ್ನ ಅರ್ಥಮಾಡಿಕೊಳ್ಳುವುದು ಕಷ್ಟಕರ. ಈ ಮನಸುಗಳೇ ಇಷ್ಟು ಏನೇನೋ ಬಯಸುತ್ತೆ ಮತ್ತೇನೇನೋ ಪಡೆಯುತ್ತದೆ ಅತಿಯಾದ ಆಸೆ ಆಕಾಂಕ್ಷೆಗಳಿಂದ ಮನಸ್ಸು ತುಂಬಾನೇ ನೋವು ಅನುಭವಿಸುತ್ತ ಇನ್ನೊಬ್ಬರ ಮೇಲಿನ ವ್ಯಾಮೋಹ ಅತಿಯಾದ ನಂಬಿಕೆಗಳು ಮನಸ್ಸಿಗೆ ನಿರಾಸೆಯನ್ನುಂಟು ಮಾಡುತ್ತದೆ ನಮ್ಮ ಮನಸ್ಸನ್ನು ನಾವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಈ ಹುಚ್ಚು ಮನಸ್ಸು ಆಲೋಚನೆ ಮೂಲಕ ನಮ್ಮ ಜೀವನವನ್ನು ಕೆಲವೊಮ್ಮೆ ನಾಶ ಮಾಡುವ ಸ್ಥಿತಿಗೆ ತಂದು ಬಿಡುತ್ತದೆ ಯಾವುದೇ ವಿಷಯದಲ್ಲಾಗಲಿ ಅಲ್ಲಿ ನಮ್ಮ ಮನಸ್ಸನ್ನು ಬಲಿಕೊಡಬಾರದು ಬದಲಾಗಿ ಆ ವಿಷಯದ ಬಗ್ಗೆ ಆಲೋಚನೆಗಳ ಮೂಲಕ ಯೋಜನೆಯನ್ನು ರೂಪಿಸಿಕೊಂಡು ಮನಸ್ಸಿಗೆ ಹಿತವೆನಿಸುವಂತೆ ಕಾರ್ಯಗಳನ್ನು ಕೈಗೊಳ್ಳಬೇಕು.

- ಲಿಂಗರಾಜ್ ಎಂ 

ಮೊ. 8546947009 

ಬಳ್ಳಾರಿ 

ಸುದ್ದಿ ಓದಿ