ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮದುವೆ ಬಗ್ಗೆ ಜ್ಯೋತಿಷಿ ಹೇಳುವುದೇನು? ಯಾರು ಆ ಹುಡುಗಿ
ಹೈದರಾಬಾದ್: ಮಾರ್ಚ್ 08: ಬಾಹುಬಲಿ ಖ್ಯಾತಿಯ, ರಾಧೆ ಶ್ಯಾಮ್ ನಟ ಪ್ರಭಾಸ್ ಈಗಾಗಲೇ ಸಾಲು ಸಾಲು ಚಿತ್ರಗಳ ಶೂಟಿಂಗ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಇವರ ರಾಧೆ ಶ್ಯಾಮ ಸಿನಿಮಾ ತೆರೆಗೆ ಸಿದ್ಧವಾಗಿದೆ, ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್ ಇನ್ನು ಮದುವೆಯ ಬಗ್ಗೆ ಯಾವುದೇ ಮಾತನಾಡಿಲ್ಲ.
ಆದರೆ ಕೆಲವು ವದಮತಿಗಳ ಪ್ರಕಾರ ಬಹುಕಾಲದ ಗೆಳತಿ ಅನುಷ್ಕಾ ಶೆಟ್ಟಿ ಜೊತೆ ವಿವಾಹವಾಗಲಿದ್ದಾರೆ ಎಂಬ ವದಂತಿ ಇದೆ. ಇದಲ್ಲದೇ ಸಾಕಷ್ಟು ಅಭಿಮಾನಿಗಳ ಇಂಗಿತವೂ ಇದೇ ಆಗಿದೆ. ಇನ್ನು ಮುಂದುವರೆದು ಅಮೆರಿಕಾದ ಉದ್ಯಮಿಯ ಮಗಳನ್ನು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಇವೆ. ಒಟ್ಟಿನಲ್ಲಿ ಅವರಿಗೆ 42 ವರ್ಷವಾದರೂ ಭಾರತದ ಬ್ಯಾಚುಲರ್ ಗಳಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಇದೀಗ ಆಚಾರ್ಯ ವಿನೋದ್ ಕುಮಾರ್ ಎಂಬ ಜ್ಯೋತಿಷಿ ಪ್ರಭಾಸ್ ಮದುವೆ ಯಾವಾಗ ಎಂದು ಭವಿಷ್ಯ ನುಡಿದಿದ್ದಾರೆ. ಬಾಹುಬಲಿ ನಟ ಒಂದು ವರ್ಷದೊಳಗೆ ಮದುವೆಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ವಿನೋದ್ ಕುಮಾರ್ ಅವರು 2022 ಪ್ರಭಾಸ್ ಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ. ಬಾಹುಬಲಿ ನಟ ಅಕ್ಟೋಬರ್ 2022 ಮತ್ತು ಅಕ್ಟೋಬರ್ 2023 ರ ನಡುವೆ ಮದುವೆಯಾಗಲಿದ್ದಾರೆ ಎಂದು ಅವರು ಹೇಳಿದರು.
ಇನ್ಸ್ಟಾಗ್ರಾಮ್ ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುತ್ತಾ, ಜ್ಯೋತಿಷಿ “@ನಟ ಪ್ರಭಾಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ” ಎಂದು ಬರೆದಿದ್ದಾರೆ.