ಯಾವ ಕಾಯಿಲೆಗೆ ಯಾವ ಡಾಕ್ಟರ್
ಯಾವ ಕಾಯಿಲೆಗೆ ಯಾವಡಾಕ್ಟರನ ಆಯ್ಕೆ ಮಾಡಬೇಕು ಇದೊಂದು ಸಾಮಾನ್ಯ ಪ್ರಶ್ನೆ ನಮ್ಮನ್ನು ಕಾಡುವಂತಹದು. ಕೆಲವೊಬ್ಬರು ಸರಿಯಾದ ಡಾಕ್ಟರ ಹುಡುಕುವಷ್ಟೋತ್ತಿಗೆ ಕಾಯಿಲೆ ತಿವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಜೊತೆಗೆ ಹಣ ಸಮಯ ವ್ಯೆರ್ಥ ಮಾಡಿಕೊಂಡು ಪ್ರಾಣ ಕಳೆದುಕೊಂಡ ಹಲವಾರು ಉದಾಹರಣೆಗಳಿವೆ.
ನಡೆದ ಒಂದು ಘಟನೆ; ಒಬ್ಬ ವ್ಯೆಕ್ತಿಗೆ ಆಗಾಗ ಸುಸ್ತು, ತಲೆ ನೋವು, ವಾಂತಿ ಹೀಗೆ ಕೆಲವು ದಿನಗಳಿಂದ ಆಗುತ್ತಿತ್ತು. ಅದಕ್ಕೆ ಹತ್ತಿರದ ವೈದ್ಯರಿಗೆ ತೋರಿಸಿಕೊಳ್ಳುತ್ತಿದ್ದ, ಹಾಗೆ ಆರಾಮವಾದಂತೆ ಮತ್ತೆ ತನ್ನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದ. ಪದೆ-ಪದೆ ಹೀಗಾಗುವುದನ್ನು ನೋಡಿದ ಡಾಕ್ಟರ ರಕ್ತ ಪರೀಕ್ಷೆ, ಥಡಿಚಿಥಿ ಮಾಡಿಸಿದರೂ ಎಲ್ಲವೂ ನಾರ್ಮಲ್ ಇತ್ತು ಒಂದು ವಾರದ ಮಾತ್ರೆ ಕೊಟ್ಟು ಕಳಿಸುತ್ತಿದ್ದರು, ಹೀಗೆ ಎರಡು ವರ್ಷ ಕಳೆಯುತ್ತಿದಂತೆ ಕಾಯಿಲೆಯ ಸ್ವರೂಪ ಹೆಚ್ಚಾಯಿತ್ತು. ಅಲ್ಲಿರುವ ವೈದ್ಯರು, ತಜ್ಞ ವೈದ್ಯರು ಬಳಿ ಹೆಚ್ಚಿನ ಚಿಕಿತ್ಸೆಗೆ ಕಳಿಸಿಕೊಟ್ಟರು. ಎಲ್ಲ ರೀತಿಯ ಪರೀಕ್ಷೆ ಮಾಡಿ ನೋಡಿದರು ಎಲ್ಲವೂ ನಾರ್ಮಲ್ ಇತ್ತು. ಏನು ಸಮಸ್ಯೆ ಎಂದು ಗೊತ್ತಾಗಿರಲಿಲ್ಲ, ಕೊನೆಗೆ ಒಖಋ ಛಿಚಿಟಿ ಮಾಡಿ ನೋಡಿದ ತಜ್ಞ ವೈದ್ಯರು ದೊಡ್ಡ ಕರಳಿನಲ್ಲಿ ಕ್ಯಾನ್ಸರ್ ಇರುವುದನ್ನು ದೃಡಪಡಿಸಿದರು, ಕೆಲವು ದಿನಗಳ ಚಿಕಿತ್ಸೆ ಕೊಟ್ಟರು. ಅದೃಷ್ಟವಶಾಥ್ ಆ ವ್ಯೆಕ್ತಿ ಬದುಕಿ ಉಳಿದ.
ಕೆಲವರು ಕಾಯಿಲೆ ಬಂದಾಗ ತನಗೆ ಗೊತ್ತಿರುವ ಸ್ನೇಹಿತರಿಂದ ಅಥವಾ ಸಂಬಂಧಿಕ ಡಾಕ್ಟರಿಂದ ಕೇಳಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಯಾರು ಗೊತ್ತಿಲ್ಲದವರು ಏನು ಮಾಡಬೇಕು?
ಹೀಗೆ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ನೇಹಿತರು ಹೀಗೆ ಮಾತನಾಡಿಕೊಳ್ಳುತ್ತಿದ್ದರು. ಸರ್ಕಾರ ಊಜಚಿಟಣ ಮತ್ತು ಜಜಣಛಿಚಿಣಠ ಜಿಡಿಜಜ ಮಾಡಿ ಬಿಟ್ಟರೆ ಜನರಿಗೆ ದುಡ್ಡು ಸಂಪಾದನೇಯ ಮೋಹವೇ ಇರುವುದಿಲ್ಲ ಎಂದು! ಒಂದು ಲೆಕ್ಕಕ್ಕೇ ಇದು ನಿಜ ಏಕೆಂದರೆ, ನಾವು ದುಡಿವುದೇ ಮಕ್ಕಳ ಶಿಕ್ಷಣ ಮತ್ತು ನಮ್ಮ ಆರೋಗ್ಯದ ಸಲುವಾಗಿ ಅಲ್ಲವೇ? ಅದು ಬಿಟ್ಟರೇ ಸಣ್ಣ ಪುಟ್ಟ ನಮ್ಮ ದಿನ ನಿತ್ಯದ ಅವಶ್ಯಕತೆಗಳನ್ನು ಪೊರೈಸಿಕೊಳ್ಳಲು ಮಾತ್ರ. ಒಂದು ಸಲ ಯೋಚಿಸಿ ನೋಡಿದರೆ ನಾವು ಎಷ್ಟು ಜನ ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತೇವೆ? ಬಹಳಷ್ಟು ಜನ ಕಳಿಸುವುದಿಲ್ಲ. ಕಾರಣ ಅಲ್ಲಿನ ಶಿಕ್ಷಣ ವ್ಯವಸ್ಥೆ ಮೇಲಿನ ಅನಮಾನವೋ ಅಥವಾ ಸರ್ಕಾರಿ ಶಾಲೆ ಎಂಬ ಅಸಡ್ಡೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ನಮಗೆ ನಮ್ಮ ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿಯಬೇಕೆಂಬ ಮೋಹ. ಆದರೆ, ಸರ್ಕಾರಿ ಶಿಕ್ಷಣದ ಬಗ್ಗೆ ಯೋಚಿಸುವುದಾದರೆ, ಅಲ್ಲಿ ನೇಮಕಾತಿಗೊಂಡ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಆಯ್ಕಯಾದವರು, ಮತ್ತು ಹಲವಾರು ವರ್ಷಗಳಕಾಲ ಸೇವೆ ಸಲ್ಲಿಸಿದ, ಸೇವಾನುಭವವನ್ನು ಹೊಂದಿರುತ್ತಾರೆ.
ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ; ನಾವು ಬಹಳ ಜನ ಸರ್ಕಾರಿ ಆಸ್ಪತ್ರೆಗೆ ಹೋಗುವುದಿಲ್ಲ ಏಕೆಂದರೆ, ಆಸ್ಪತ್ರೆ ಕ್ಲಿನ್ ಇರಲ್ಲ, ಜೌಷಧಿಯ ಗಣಮಟ್ಟ ಸರಿ ಇರಲ್ಲ ಎಂಬ ಉಹಾ-ಪೂಹಾ ಹೇಳಿಕೆಗಳಿಗೆ ಕಿವಿಗೊಟ್ಟು, ಸರ್ಕಾರಿ ಆಸ್ಪತ್ರೆಗೆ ಹೋಗಲು ನಿರಾಕರಿಸುತ್ತೇವೆ. ಸರ್ಕಾರ ಖರಿದಿಸುವ ಜೌಷಧಿಗಳು ಘಊಓ ಮತ್ತು ಉಒಕ ಛಿಜಡಿಣಜಿಜಜ ಕಂಪನಿಗಳಾಗಿರುತ್ತವೆ. ಈ ಸಂಸ್ಥೆಗಳು ಜೌಷಧಿಯ ಗುಣಮಟ್ಟವನ್ನು ಪರೀಕ್ಷಿಸಿ, ಉತ್ತಮ ಜೌಷಧಿಯ ಗುಣಮಟ್ಟದ ಬಗ್ಗೆ ಪ್ರಮಾಣ ಪತ್ರ ನಿಡಿದ ನಂತರವೇ ಮಾರ್ಕೆಟ್ಗೆ ಬರುತ್ತವೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಜೌಷಧಿಯ ಪ್ಯಾಕಿಂಗ್ ಸಾಧಾರಣಮಟ್ಟದಾಗಿರಹುದು, ಪ್ಯಾಕಿಂಗೆ ವ್ಯರ್ಥ ಮಾಡುವ ಹಣದಿಂದ ಮತ್ತಷ್ಟು ಒಳ್ಳೇಯ ಗಣಮಟ್ಟದ ಜೌಷಧಿ ಖರಿದಿಸುವ ಸರ್ಕಾರದ ಯೋಜನೆ ಆಗಿರುತ್ತದೆ.
ಇನ್ನು ಕರೋನಾ ಅಲೆಗಳಲ್ಲಿ ನಾವು ತಗೆದುಕೊಂಡಿದ್ದು ಸರ್ಕಾರ ಕೊಟ್ಟ ಲಸಿಕೆ ಮತ್ತು ಜೌಷಧಿಯನ್ನು ನಂಬುವದಾದರೆ, ನೀವು ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಮತ್ತು ಜೌಷಧಿಗಳನ್ನು ನಂಬಹುದಲ್ಲವೇ? ವೈದ್ಯರು ಮತ್ತು ಸಿಬ್ಬಂದಿಗಳು ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕೆಗಳನ್ನು ಎದುರಿಸಿಯೇ ಆಯ್ಕೆ ಆಗಿರುತ್ತಾರೆ. ಮತ್ತು ಹಲವಾರು ವರ್ಷದ ಕಾರ್ಯದ ನೈಪುಣ್ಯತೆಯನ್ನು ಹೊಂದಿರುತ್ತಾರೆ. ನಮ್ಮ ಮನಃಸ್ಥಿಯನ್ನು ಬದಲಾಸಿಕೊಳ್ಳಬೇಕಿದೆ ಅಷ್ಟೆ.
ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದರೂ ಬಿ.ಪಿ, ಸುಗರ್ ಇದ್ದರೆ, ನೀವು ಹೊರಗಡೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ, ಜೌಷಧಿಗಳನ್ನು ಖರಿದಿಸುತ್ತಿದ್ದರೆ, ಈ ಘಟನೆಯನ್ನು ಒಮ್ಮೆ ಓದಿ. ಒಬ್ಬ ವ್ಯಕ್ತಿಗೆ ಬಿ.ಪಿ, ಸುಗರ್ ಎರಡು ಕಾಯಿಲೆಗಳಿದ್ದವೂ ಖಾಸಗಿ ವೈದ್ಯರಿಗೆ ತೊರಿಸಿಕೊಳ್ಳುತ್ತಿದ್ದ. ತಿಂಗಳಿಗೆ 300 ರೂಪಾಯಿ ಡಾಕ್ಟರ ಫೀಸ್ಸ್ ಮತ್ತು ಮಾತ್ರೆ ಸೇರಿ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದ. ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಅರಿತ ಆ ವ್ಯಕ್ತಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೇವಲ ಹತ್ತು ರೂಪಾಯಿ ಕೊಟ್ಟು ಚೀಟಿ ಮಾಡಿಸಿದ. ಡಾಕ್ಟರ್ ಫೀಸ್ಸ್ ಜೊತೆಗೆ ಉಚಿತವಾಗಿ ಜೌಷಧಿಗಳನ್ನು ತಗೆದುಕೊಂಡಿದ್ದರಿಂದ ವರ್ಷಕ್ಕೆ ಸುಮಾರು ಹನ್ನೇರಡು ಸಾವಿರ ರೂಪಾಗಳನ್ನು ಉಳಿಸಿದೆ ಎಂದು ಹೇಳಿ ಸಂತಸ ವ್ಯಕ್ತಪಡಿಸಿದರು. ಮತ್ತೆ ಸರ್ಕಾರಿ ಜೌಷಧಿ ಪರಿಣಾಮಕಾರಿಯೇ ಎಂದು ಕೇಳಿದರೆ. ನಾನು ಸರ್ಕಾರಿ ಜೌಷಧಿಗಳನ್ನು ತಗೆದುಕೊಂಡ ದಿನದಿಂದ ನನ್ನ ಆರೋಗ್ಯ ಉತ್ತಮವಾಗಿದೆ, ಯಾವುದೇ ತೊಂದರೆ ಕಂಡು ಬಂದಿಲ್ಲ ಎಂದು ಹೇಳುವುದರ ಜೊತೆಗೆ ಹಲವು ಜನರಿಗೆ ನಾನು ಸರ್ಕಾರಿ ಆಸ್ಪತ್ರೆಗೆ ಹೋಗಲು ಸಲಹೆ ನೀಡಿದ್ದೇನೆ ಎಂದು ಹೇಳುತ್ತಾರೆ.
ಇನ್ನು ಮಾನಸಿಕ ಕಾಯಿಲೆಗಳಿಗೆ ಹಲವು ವರ್ಷಗಳು ಮಾತ್ರೆ ತಗೆದುಕೊಳ್ಳಲು ವೈದ್ಯರು ಸೂಚಿಸಿರುವುದರಿಂದ ನಾನು ಸಕಾರಿ ಆಸ್ಪತ್ರೆಯಿಂದಲೆ ಮಾತ್ರೆ ತಗೆದುಕೊಳ್ಳುತ್ತಿದ್ದೇನೆ. ಹಾಗಾಗಿ, ನಾನು ತಿಂಗಳಿಗೆ ಸಾವಿರ ರೂಪಾಯಿ ಉಳಿಸುತ್ತೇನೆ. ಅದೇ ಹಣ ನನ್ನ ಮಗಳ ಸ್ಕೂಲ್ ಫೀಸ್ಸ್ ಕಟ್ಟಲು ಅನುಕುಲವಾಗಿದೆ ಎಂದು ಐದು ವರ್ಷದಿಂದ ಮಾನಸಿಕ ಕಾಯಿಲೆಗೆ ಮಾತ್ರೆ ತಗೆದುಕೊಳ್ಳವ ವ್ಯಕ್ಕಿ ತನ್ನ ಭಾವನೆಗಳನ್ನು ಹೀಗೆ ಹಂಚಿಕೊಳ್ಳುತ್ತಾರೆ.
- ಶರಣಪ್ಪ ಮಾಳಗಿಮನಿ
ಡಿಮ್ಹಾನ್ಸ್, ಧಾರವಾಡ
- * * * -