ಬಳ್ಳಾರಿ

ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವಾಗತ

ಪ್ರಾಥಮಿಕ ಶಾಲಾ ಮಕ್ಕಳಿಗೆ ಸ್ವಾಗತ


ಬಳ್ಳಾರಿ 25: ಕಳೆದ ಎರಡು ವರ್ಷಗಳಿಂದ ಇಡೀ ದೇಶವನ್ನೇ ತಲ್ಲಣಿಸಿ ಇದೀಗ ಶಾಂತಗೊಳಿಸಿರುವ ಮಹಾಮಾರಿ ಕೊರೋನಾದಿಂದ ಇದೀಗ ಶಾಲೆಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರದಿಂದ ಹಸಿರು ನಿಶಾನೆ ತೋರಿರುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಬಳ್ಳಾರಿಯ ಗುಗ್ಗರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ಇಂದು ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಿದರು. ನಂತರ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ದೇಶಕ್ಕೆ ಆವರಿಸಿದ ಮಹಾಮಾರಿಯಿಂದ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಅನೇಕರು ಮೃತಪಟ್ಟಿದ್ದು, ಇಂದಿನಿಂದ ಶಾಲಾ ಮಕ್ಕಳ ಸಂಪೂರ್ಣ ಜವಾಬ್ದಾರಿ ವಹಿಸಿ ಪ್ರತಿನಿತ್ಯ ಸ್ಯಾನಿಟೈಜ್, ಮಾಡಿ ದೈಹಿಕ ಅಂತರವನ್ನು ಕಾಪಾಡಬೇಕೆಂದು. ಅಲ್ಲದೇ ಶಿಕ್ಷಕರು ಪ್ತತಿನಿತ್ಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸೂಕ್ಷ್ಮವಾಗಿ ಗಮನಿಸಿ ಅವರ ಸುರಕ್ಷತೆಯನ್ನು ಕಾಪಾಡಬೇಕೆಂದರು. ಈ ಸಂದರ್ಭದಲ್ಲಿ ಬರಾಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರರೆಡ್ಡಿ, ಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೋತ್ಕರ್, ಬಿ.ಇ.ಓ. ವೆಂಕಟೇಶ ರಾಮಚಂದ್ರ​‍್ಪ, ಮುಖ್ಯೋಪಾಧ್ಯಾಯರಾದ ಫಿರೋಜ್ ಖಾನ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಮುರಳಿಮೋಹನ್, ಮಾಜಿ ಅಧ್ಯಕ್ಷ ಪುರುಷೋತ್ತಮ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಮಾಂಜಿನಿ, ಮಾಧ್ಯಮ ಸಂಚಾಲಕ ರಾಜೀವ್, ಸ್ಥಳೀಯರಾದ ರಮೇಶ್, ಹೊನ್ನೂರುಸ್ವಾಮಿ, ಬಜ್ಜಯ್ಯ, ರಾಘವೇಂದ್ರರೆಡ್ಡಿ, ಎಲ್‌ಐಸಿ ಶಿವಶಂಕರ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ