ತಿರುಪತಿ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲಿಗೆ ಸ್ವಾಗತ
ಬಳ್ಳಾರಿ 18: ರೈಲು ಸಂಖ್ಯೆ 07657 ಹಾಗೂ 07658 ಈ ರೈಲು ಗುಂತಕಲ್ ರೇಣುಗುಂಟ ಮಧ್ಯ ಸ್ಪೆಷಲ್ ಪ್ಯಾಸೆಂಜರ್ ರೈಲಾಗಿ ಸಂಚಿರಿಸುತ್ತಿದ್ದ ಈ ರೈಲನ್ನು 17 ನಿಂದ ಎಕ್ಸಪ್ರೆಸ್ ರೈಲ್ ಆಗಿ ಪರಿವರ್ತಿಸಿ ತಿರುಪತಿ ಹುಬ್ಬಳ್ಳಿ ಮಧ್ಯೆ ತನ್ನ ಪ್ರಥಮ ಸಂಚಾರವನ್ನು ಆರಂಭಿಸಿದ್ದು, ಬಳ್ಳಾರಿಗೆ ಆಗಮಿಸಿ ಈ ರೈಲನ್ನು ಕನರ್ಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಎಲ್ಲಾ ಸದಸ್ಯರು ಜಯಕಾರಗಳೊಂದಿಗೆ ಸ್ವಾಗತಿಸಿದರು. ಒಂದು ಗಂಟೆ ತಡವಾಗಿ ಬಂದ ರೈಲಿಗೆ ಬಳ್ಳಾರಿ ಲೋಕಸಭಾ ಸದಸ್ಯರಾದ ವೈ.ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕರಾದ ಗಾಲಿ ಸೋಮಶೇಖರ್ರೆಡ್ಡಿ ಹಾಗೂ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷರಾದ ಕೆ.ಎಮ್.ಮಹೇಶ್ವರಸ್ವಾಮಿ, ಪೂಜೆ ಸಲ್ಲಿಸಿ ರೈಲನ್ನು ಬಿಳ್ಕೊಟ್ಟರು.
ಈ ಹಿಂದೆ ಹುಬ್ಬಳ್ಳಿ ತಿರುಪತಿ ಹುಬ್ಬಳ್ಳಿ ಮಧ್ಯೆ ಇಂಟರ್ ಸಿಟಿ ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು ಈ ರೈಲನ್ನು ಪುನರಾರಂಭ ಮಾಡುವಂತೆ ಕನರ್ಾಟಕ ರಾಜ್ಯ ರೈಲ್ವೆ ಕ್ರಿಯಾಸಮಿತಿಯ ನಿಯೋಗ ಬಳ್ಳಾರಿ ಲೋಕಸಭಾ ಸದಸ್ಯರಾದ ವೈ. ದೇವೇಂದ್ರಪ್ಪ ಅವರ ನೇತೃತ್ವದಲ್ಲಿ ಹುಬ್ಬಳ್ಳಿಗೆ ತೆರಳಿ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯ ಮಾಡಲಾಗಿತ್ತು ಇದರ ಪ್ರತಿಫಲವಾಗಿ ಈ ರೈಲನ್ನು ಇಂದಿನಿಂದ ಜನತೆ ಪ್ರಯಾಣಿಸಲು ರೈಲ್ವೆ ಇಲಾಖೆ ಅನುಕೂಲ ಮಾಡಿಕೊಟ್ಟಿದೆ.
ಆದರೆ ಈ ಹಿಂದೆ ಪ್ಯಾಸೆಂಜರ್ ರೈಲಾಗಿ ಸಂಚಿರಿಸುತ್ತಿದ್ದ ಈ ರೈಲನ್ನು ರೈಲ್ವೆ ಇಲಾಖೆ ಎಕ್ಸ್ಪ್ರೆಸ್ಸ್ ರೈಲನ್ನಾಗಿ ಪರಿವತರ್ಿಸಿ ಜನತೆಗೆ ಆಥರ್ಿಕ ಭಾರ ಹೊರಿಸುತ್ತಿದೆ. ಕೂಡಲೇ ರೈಲ್ವೆ ಇಲಾಖೆ ಯಾಥವತ್ತಾಗಿ ಪ್ಯಾಸೆಂಜರ್ ರೈಲಾಗಿ ಓಡಿಸಬೇಕೆಂದು ಕ್ರಿಯಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಲೋಕಸಭಾ ಸದಸ್ಯರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವೀರಶೇಖರ್ರೆಡ್ಡಿ, ಜಿ.ರಾಮಚಂದ್ರಯ್ಯ, ವಿಮ್ಸ್ನ ಆಡಳಿತ ಮಂಡಳಿ ಸದಸ್ಯ ಶಿವಾನಂದ, ಸುಮಾರೆಡ್ಡಿ, ಪದ್ಮಾ, ರಾಮೇಶ್ವರಿ, ಜನತಾ ಬಜಾರ್ ಅಧ್ಯಕ್ಷರಾದ ನೀಲಕಂಠಪ್ಪ, ಕ್ರಿಯಾಸಮಿತಿ ಪದಾಧಿಕಾರಿಗಳಾದ ಹತ್ತಿಕಾಳು ವಿರುಪಾಕ್ಷಪ್ಪ, ಎನ್.ಸಿ.ವೀರಭದ್ರಪ್ಪ, ಜೀರು ಗುರುಮೂತರ್ಿ, ಬಳ್ಳಾರಿ ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಕೋಳೂರು ಚಂದ್ರಶೇಖರ್ಗೌಡ, ಎಲ್.ಐ.ಸಿ. ಸಂಘದ ಕೆ.ಎಮ್.ಕೊಟ್ರೇಶ್, ರೈತ ಸಂಘದ ಜಾಲಿಹಾಳ್ ಶ್ರೀಧರಗೌಡ, ಎಣ್ಣೆ ಯರ್ರಿಸ್ವಾಮಿ, ಸೂರ್ಯಪ್ರಕಾಶ್, ಕಪ್ಪಗಲ್ಲು ಕೆ.ಎಮ್.ಸಿದ್ದಲಿಂಗಯ್ಯ, ಚನ್ನಮಲ್ಲಯ್ಯ, ಆರ್.ಹೆಚ್.ಎಂ.ಚನ್ನಬಸವಸ್ವಾಮಿ, ಎನ್.ಹೆಚ್.ಶರಭಯ್ಯ, ಮುಂತಾದವರು ಉಪಸ್ಥಿತರಿದ್ದರು.