ಮುದ್ದೆಬಿಹಾಲ್

ಹೂಗಾರ ನಿಗಮ ಸ್ಥಾಪನೆ ಮಾಡಿರುವದು ಸ್ವಾಗತಾರ್ಹ: ಹೂಗಾರ

ಹೂಗಾರ ನಿಗಮ ಸ್ಥಾಪನೆ ಮಾಡಿರುವದು ಸ್ವಾಗತಾರ್ಹ: ಹೂಗಾರ

ಮುದ್ದೇಬಿಹಾಳ :    ಬಹುದಿನಗಳ ಬೇಡಿಕೆಯಾಗಿದ್ದ ಹೂಗಾರ,ಜೀರ , ಇನ್ನೂಳಿದ ಇತರೆ ಪಂಗಡದ ನಿಗಮವನ್ನು ಸರಕಾರ ಸ್ಥಾಪನೆ ಮಾಡಿರುವದು ಸ್ವಾಗತಾರ್ಹ, ಹಾಗೂ ಸಮಾಜಕ್ಕೆ ಸಂತಸ ತಂದಿದೆ,  ಎಂದು ಹೂಗಾರ ಸಮಾಜದ ಜಿಲ್ಲಾದ್ಯಕ್ಷ  ಬಿ ಎಸ್ ಹೂಗಾರ ಸರಕಾರಕ್ಕೆ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ   ಅವರು  ಗದಗ, ಬೆಂಗಳೂರು ಹಾಗೂ ನಮ್ಮ ಭಾಗದಲ್ಲಿ ಹಲವು ವರ್ಷಗಳಿಂದ  ಈ ಹಿಂದೆ ಇರುವ ಸರಕಾರಗಳಿಗೆ ಮನವಿ ಸಲ್ಲಿಸುತ್ತಾ ನಿಗಮ ಮಂಡಳಿಗಳನ್ನು ಮಾಡಲು ಒತ್ತಾಯ ಮಾಡಿದ್ದೇವು, ಅದರ ಪಲವಾಗಿ ಇಂದು ನಮಗೆ ಹೂಗಾರ ನಿಗಮ ಸಿಕ್ಕಿರುವದು ನಮ್ಮ ಸಮುದಾಯಕ್ಕೆ ಸಿಕ್ಕಂತ ಬಹು ದೊಡ್ಡ ಕೋಡುಗೆ, ಮತ್ತು ಗ್ರಾಮೀಣ ಭಾಗದಲ್ಲಿ ಒಂದು ಅಥವಾ ಎರಡು ಕುಂಟುಂಬಗಳಿರುವ ನಮ್ಮ ಸಮಾಜದ ಜನರು ಬಡತನದಲ್ಲಿ ಬದುಕು ನಡೆಸುತ್ತಿದ್ದಾರೆ ನಿಗಮ ಸ್ಥಾಪನೆಯಾಗಿರುವದರಿಂದ ನಮ್ಮ ಸಮಾಜದ ಬಡತನ ನಿಗಬಹುದು ಎಂದರು. 

ತಾಲೂಕಾ ಅಧ್ಯಕ್ಷ ಸುರೇಶ ಹೂಗಾರ ಮಾತನಾಡಿ  ರಾಜ್ಯ ಸರಕಾರದಿಂದ ನಮ್ಮ ಸಮುದಾಯದ ನಿಗಮ ಮಾಡಿರುವದು ನಮಗೆ ವ್ಯಾಪಕ ಸಂತೋಷವನ್ನುಂಟು ಮಾಡಿದೆ. ತಲೆ ತಲಾಂತರದ ನಮ್ಮ ಕೂಗು ಇಂದಿನ ಸರಕಾರಕ್ಕೆ ಕೇಳಿದರಿಂದ ಇಂದು ನಮಗೆ ಸರಕಾರದಿಂದ ಒಂದು ದೋಡ್ಡ ಸಹಾಯವಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ಬದುಕು ನಡೆಸುವ ನಮ್ಮ  ಸಮಾಜಕ್ಕೆ ಈ ನಿಗಮ ಆಸರೆಯಾಗುತ್ತದೆ.  ಈ ನಿಗಮದಿಂದ ನಮ್ಮ ಸಮುದಾಯ ಮುಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಸದೃಡವಾಗಲು ಅನುಕೂಲವಾಗುತ್ತದೆ ಎಂದರು. 

 ಸಮಾಜದವರೇಲ್ಲರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮೆಯಾಗಿ ಪಟಾಕಿ, ಸಿಡಿಸಿ ಸಿಹಿಹಂಚಿ ಸಂಭ್ರಮ ಪಟ್ಟರು, ಕಾಶಿನಾಥ ಹೂಗಾರ, ಸಂತೋಷ ಹೂಗಾರ,ಮಾಂತೇಶ ವಡವಡಗಿ, ಶಿವು ಹೂಗಾರ,ಬಸಲಿಂಗಪ್ಪ ಹೂಗಾರ, ಶರಣಬಸವ ಹೂಗಾರ, ಹಣಮಂತ್ರಾಯ ಹೂಗಾರ, ದೇವರಾಜ ಹೂಗಾರ, ಸಂಗಮೇಶ ಹೂಗಾರ, ಮುತ್ತು ಹೂಗಾರ, ಅಜೀತ್ ಹೂಗಾರ, ಅರವಿಂದ ಹೂಗಾರ, ಪ್ರಕಾಶ ಹೂಗಾರ, ಹಾಗೂ ಇನ್ನೀತರೆ ಸಮಾಜ ಬಾಂಧವರು ಇದ್ದರು. 

ಪೋಟೋ ಇದೇ :-  ಹೂಗಾರ ನಿಗಮ  ಸ್ಥಾಪನೆ  ಮಾಡಿದ ಸರಕಾರಕ್ಕೆ ಪಟ್ಟಣದ  ಹೂಗಾರ ಸಮಾಜ ಬಾಂಧವರು  ಅಭಿನಂದನೆ ಸಲ್ಲಿಸಿ ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ ಸಭ್ರಮಿಸಿದರು. 


ಸುದ್ದಿ ಓದಿ