ಆರ್ಬಿವೈಎಂ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
ಬಳ್ಳಾರಿ 11: ನಗರದ ಕಾಠನ್ಮೆಂಟ್ ನಲ್ಲಿರುವ ವಿವಿ ಸಂಘದ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ, ರಾವ್ ಬಹದ್ದೂರ್ ವೈ ಮಹಾಬಲೇಶ್ವರ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು, ಬೆಳಗ್ಗೆ ಪ್ರಸಕ್ತ ಸಾಲಿನ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು (ನವಸಂಗಮ) ನಡೆಯಿತು. ತರುವಾಯ ವಿವಿ ಸಂಘದ ಕಾರ್ಯದರ್ಶಿ ಗುರುಸಿದ್ಧ ಸ್ವಾಮಿ ಮಾತನಾಡುತ್ತಾ ಇಂದಿನ ಕಾಲ ಬದಲಾವಣೆಯ ಕಾಲ, ಪೈಪೋಟಿ ತತ್ವದ ಕಾಲ, ತಾಂತ್ರಿಕ ಜ್ಞಾನದ ಜೊತೆಗೆ ಕೌಶಲ್ಯಗಳನ್ನು ನವೀಕರಿಸಿಕೊಳ್ಳಬೇಕು ಎಂದರು. ಚೈನಾ, ಜಪಾನ್ ವಿದ್ಯಾರ್ಥಿಗಳಲ್ಲಿ ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸಗಳ ಬಗ್ಗೆ ಹೋಗಲಾಡಿಸಲು ಈ ರೀತಿಯ ವಿದ್ಯಾರ್ಥಿ ನವಸಂಗಮ ಕಾರ್ಯಕ್ರಮ ಅಳವಡಿಸಲು ಪ್ರಾರಂಭಿಸಲಾಗಿದೆ ಎಂದರಪಿ ಇಂದಿನ ಯುಗದಲ್ಲಿ ಪ್ರತಿಭೆಗೆ ಅವಕಾಶ ಹೆಚ್ಚುತ್ತಿರುವುದರಿಂದ, ಸಹಜವಾಗಿಯೇ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಿಮಗೆ ಮಹಾವಿದ್ಯಾಲಯದ ಕಡೆಯಿಂದ ಎಲ್ಲಾ ಸೌಕರ್ಯಗಳು ಸಿಗುತ್ತವೆ ಎಂದರು.
ಈ ಕಾರ್ಯಕ್ರಮದಲ್ಲಿ ಮಹಾ ವಿದ್ಯಾಲಯದ ಅಧ್ಯಕ್ಷ ಅಲ್ಲಂ ಚನ್ನಪ್ಪ, ಸಹ ಕಾರ್ಯದರ್ಶಿ, ಜೆ ಶಾಂತವೀರನ್ ಗೌಡ, ಕೋಶಾಧಿಕಾರಿ ಗೋನಾಳ್, ರಾಜಶೇಖರ್ ಗೌಡ, ಆರ್ವೈಎಂಇಸಿ ಆಡಳಿತ ಮಂಡಳಿ ಸದಸ್ಯರು ಮಲ್ಲಿಕಾರ್ಜುನ್ ರೆಡ್ಡಿ, ರೂಪನಗುಡಿ ಬಸವರಾಜ, ಜಾನೆ ಕುಂಟೆ ಪಂಪನಗೌಡ, ಕೊರ್ಲಗುಂದಿ ಬಸವನಗೌಡ, ಹಲಕುಂದಿ ಸತೀಶ್ ಕುಮಾರ್ ನೂತನ ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಕೋರಿ ಶುಭ ಹಾರೈಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹನುಮಂತರೆಡ್ಡಿ, ಉಪ ಪ್ರಾಚಾರ್ಯ ಸವಿತಾ, ಉಪನ್ಯಾಸಕರು, ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.