ಬಳ್ಳಾರಿ

ಎಸ್‌.ಜಿ.ಟಿ ನೂತನ ಪಿ.ಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಎಸ್‌.ಜಿ.ಟಿ ನೂತನ ಪಿ.ಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಬಳ್ಳಾರಿ 06: ವಿದ್ಯಾರ್ಥಿಗಳಿಗೆ ಮುಂದೆ ಗುರಿ ಹಿಂದೆ ಗುರು ಇದ್ದಾಗ ಗುರಿ ಮುಟ್ಟುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಎನ್ ಬಸವರಾಜ ಹೇಳಿದರು. 

ಅವರು ನೂತನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ನಿಯೋ ಪ್ರಜ್ಞಾ 2023 ಕಾರ್ಯಕ್ರಮದಲ್ಲಿ ಮಾತನಾಡುತ್ತ ಭಾರತೀಯರಾದ ನಾವುಗಳು ನಮ್ಮ ಇತಿಹಾಸ ಸಂಸ್ಕೃತಿ ಶಿಕ್ಷಣಗಳ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಮ್ಮ ಭಾರತೀಯರು ಈ ಮುಂಚೆಯೇ ಗಗನಯಾನ ಮತ್ತು ಬ್ರಹ್ಮಾಂಡದ ಗ್ರಹ ನಕ್ಷತ್ರಗಳ ಅದ್ಯಯನ ಮಾಡಿ ಅವುಗಳ ನಿಖರ ವಿಶ್ಲೇಷಣೆ ಮಾಡಿದ್ದಾರೆ. ವಿದ್ಯಾರ್ಥಿಗಳು ಪ್ರಥಮವಾಗಿ ತಮ್ಮ ತಂದೆ ತಾಯಿಗಳ ತ್ಯಾಗ ಗುರುಗಳ ಮಾರ್ಗದರ್ಶನಗಳಿಗೆ ಋಣಿಗಳಾಗಿದ್ದು ಅವರ ಋಣ ತೀರಿಸಲು ಆದ್ಯತೆ ನೀಡಬೇಕು ಎಂದರು. ನಾನು ಪಾಠ ಮಾಡುವ ಸಮಯದಲ್ಲಿ ಯಾವ ಕೆಲಸಗಳಿಗೆ ಹೋಗುತ್ತೀರಿ ಎಂದು ಕೇಳಿದಾಗ ಕೆಲವರು ಪೋಲೀಸ್, ಕೆಲವರು ಇತರೆ ಕೆಲಸಗಳನ್ನು ಹೇಳಿದ ವಿದ್ಯಾರ್ಥಿಗಳು ನಾನು ಕಂಡಂತೆ ಅದೇ ಕೆಲಸಗಳನ್ನು ಮಾಡುತ್ತಿರುವುದು ಕಂಡಿದೆ ಎಂದರು.    

ಅಧ್ಯಕ್ಷೀಯ ನುಡಿಗಳನ್ನಾಡಿದ ಸಂಸ್ಥೆಯ ಮುಖ್ಯಸ್ಥರಾದ ಎಸ್‌.ಎನ್‌.ರುದ್ರ​‍್ಪನವರು ಮೂರು ‘ಡಿ’ಗಳು ಅಂದರೆ ಡಿಟರ್ಮಿನೇಷನ್, ಡಿವೋಷನ್ ಮತ್ತು ಡಿಸಿಪ್ಲೀನ್ ಎಲ್ಲರಿಗು ಬಹಳ ಮುಖ್ಯವಾದುವು. ವಿದ್ಯಯಷ್ಟೇ  ವಿನೇಯತೆ ಮತ್ತು   ನಡವಳಿಕೆಯು ಕೂಡ ಅಂತ್ಯಂತ ಮುಖ್ಯವಾಗಿವೆ ಎಂದರು.  ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಜಿ.ತಿಪ್ಪೇರುದ್ರರವರು ಮಾತನಾಡಿ ಈ ಕಾಲೇಜಿನ ಬಹಳಷ್ಟು ವಿದ್ಯಾರ್ಥಿಗಳು ಒಳ್ಳೆಯ ರಾ​‍್ಯಂಕುಗಳನ್ನು ಮತ್ತು ಮೆಡಿಕಲ್ ಸೀಟ್ ಪಡೆಯುವಲ್ಲಿ ದಾಖಲೆ ಮಾಡಿದ್ದಾರೆ ಎಂದರು. 

ಎಸ್‌.ಜಿ.ಟಿ ಕಾಲೇಜಿನ ಉಪನ್ಯಾಸಕರಾದ ಕಾವ್ಯ ಪಿ ರವರು ಬಸವರಾಜ್ ರವರ ಪರಿಚಯವನನು ಮಾಡುತ್ತಾ ಇವರು ಬಹುಮುಖ ಪ್ರತಿಭೆಯ ಶಿಕ್ಷಕರು, ಗಾಯಕರು, ಲೇಖಕರು ಅಲ್ಲದೆ ತೆಲುಗಿನಿಂದ ವೇಮನ ಪದ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಹದಿನೈದು ರಾಗಗಳಲ್ಲಿ ಸ್ವತಃ ಹಾಡಿ ದಾಖಲೆ ಮಾಡಿದ್ದಾರೆ. ಕನ್ನಡ ಸಾಹಿತ್ತಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ರಾಮಕೃಷ್ಣ ವಿವೇಕಾನಂದ ಕೇಂದ್ರ, ಎನ್‌.ಜಿ.ಓ ಗಳು, ಪಠ್ಯಪುಸ್ತಕಗಳ ರಚನಾ ಸಮಿತಿ ಇಂತಹ ಹಲವಾರು ಸಂಸ್ಥೆಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟಗಳಲ್ಲಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ರವೀಂದ್ರ ಕಲಾಕ್ಷೇತ್ರದಲ್ಲಿ  ಹಾಡಿದ ಇವರ ಪದ್ಯಗಳು ಬಹಳ ಹೆಸರು ಮಾಡಿವೆ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಅಂತಹ ಮೇರು ವ್ಯಕ್ತಿ ಮುಖ್ಯ ಅತಿಥಿಗಳಾಗಿರುವುದು ನಮ್ಮ ಭಾಗ್ಯ ಎಂದರು.  

ತಿಪ್ಪೇರುದ್ರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ನಾಗರಾಜ್‌ರವರು ವಂದನಾರೆ​‍್ಣ ಮಾಡಿದರು. 

ಪ್ರಾರ್ಥನೆಯನ್ನು ಪನ್ನಗ, ಸ್ವಾಗತವನ್ನು ಮೆಹರ್ ತಸ್ಲೀಮ್, ನಿರೂಪಣೆಯನ್ನು ಆರತಿ ಮತ್ತು ಮೌನಿಕ ವಹಿಸಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೇಮರೆಡ್ಡಿ, ಸಿ.ಗಣೇಶ್, ಶ್ರೀದೇವಿ, ಹರಿಣಿ ಮತ್ತು ಇತರೆ ವಿದ್ಯಾರ್ಥಿಗಳು ಪ್ರೇಕ್ಷಕರ ಮನಸೂರೆಗೊಂಡರು. 2023 ಮಿಸ್ಟರ್ ಮತ್ತು ಮಿಸ್ಸಸ್ ಪ್ರಶಸ್ತಿಗಳನ್ನು ಪವನ್ ಮತ್ತು ವಿಜಯಶ್ರೀ ಪಡೆದರು. 

ಕಾರ್ಯಕ್ರಮದಲ್ಲಿ ಎಸ್‌.ಜಿ.ಟಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ್ ಓ ಸಾರಂಗಮಠ, ಪಿ.ಯು ಎಸ್‌.ಜಿ.ಟಿ ಶಾಲೆಯ ನಿರ್ದೇಶಕರಾದ ಜಿ.ಮಂಜುಳ.  ಎಸ್‌.ಜಿ.ಟಿ ಕಾಲೇಜಿನ ವಿವಿದ ವಿಭಾಗಗಳ ಮುಖ್ಯಸ್ಥರುಗಳಾದ ರೂಪ ಆರ್, ಶ್ರೀದೇವಿ, ಇಷಾದ್ ಅಲಿ, ಹಿಂದಿನ ಪ್ರಾಂಶುಪಾಲರಾಗಿದ್ದ ಡಾ. ಹಯಾತ್ ಅಲಿ, ಎನ್‌.ಆರ್‌.ಸಿಯ ರಮಣ ಚೌದರಿ, ಉಪ ಪ್ರಾಚಾರ್ಯರಾದ ಕವಿತ, ಕೃಷ್ಣಪ್ಪ, ಉಪನ್ಯಾಸಕರುಗಳಾದ ಶಾರದ, ಶಶಿಧರ್, ಚಂದನ, ಚಾಂದ್ ಬಾಷಾ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ