ವಾರಾಂತ್ಯ ಚಟುವಟಿಕೆ ಸಮಾರೋಪ ಸಮಾರಂಭ
ಲೋಕದರ್ಶನ ವರದಿ
ಮುಂಡಗೋಡ:ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರವಾರ, ತಾಲೂಕಾ ಬಾಲಭವನ ಮುಂಡಗೋಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ವಾರಾಂತ್ಯ ಚಟುವಟಿಕೆಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಮತ್ತು ಭಾನುವಾರ 5ರಿಂದ16 ವರ್ಷದ ಮಕ್ಕಳಿಗಾಗಿ ಕಾರ್ಯಕ್ರಮ ಆಯೋಜಿಸಿದ್ದು ಚಿತ್ರಕಲೆ, ಸಂಗೀತ, ಯೋಗ, ಡ್ಯಾನ್ಸ್, ಭರತನಾಟ್ಯಗಳನ್ನು ಒಳಗೊಂಡ ಕ್ರಿಯಾಶೀಲ ಚಟುವಟಿಕೆಗಳನ್ನು ಕಲಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ವೇಳೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಬಂಗೇರ, ಬಿಆರ್ಪಿ ಎಮ್.ವಿ.ಬಡಿಗೇರ, ಸಂಪನ್ಮೂಲ ವ್ಯಕ್ತಿಗಳಾದ ಆರ್.ಎಸ್.ಕಲಾಲ, ಕೆ.ಕೆ.ಕರುವಿನಕೊಪ್ಪ, ಭರತನಾಟ್ಯ ಪ್ರವೀಣೆ ಪ್ರತಿಮಾ ಹೆಗಡೆ, ಸಿಆರ್ಪಿ ರುದ್ರಮುನಿ, ಫಾತಿಮಾ ಕಿತ್ತೂರ, ಮಂಜುಳಾ ಮರಡಿ, ಗೀತಾ ಮಠಪತಿ ಉಪಸ್ಥಿತರಿದ್ದರು. ಮೇಲ್ವಿಚಾರಕಿ ರೂಪಾ ಅಂಗಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.