ಶನಿವಾರ-ರವಿವಾರ ಹುನಗುಂದ ಸಂಪೂರ್ಣ ಸ್ಥಬ್ಧ
ಓಷಧಿ, ವೈದ್ಯಕೀಯ ಮತ್ತು ಅಗತ್ಯ ಸೇವೆ ಲಭ್ಯ : ವಾಣಿಜ್ಯ ವಹಿವಾಟು ಬಂದ್
ಹುನಗುಂದ 23: ಕೊರೊನಾ ಎರಡನೆಯ ಅಲೆಯು ದಿನದಿಂದ ದಿನಕ್ಕೆ ರೌದ್ರಾವತಾರವನ್ನು ತಾಳುತ್ತಿರುವ ಬೆನ್ನಲೆಯೇ ಸರ್ಕಾರ ಮತ್ತು ಜಿಲ್ಲಾಡಳಿತದ ಕಟ್ಟುನಿಟ್ಟಿನ ಮಾರ್ಗಸೂಚಿಯಂತೆ ವೀಕೆಂಡ್ ಲಾಕ್ಡೌನ್ಗೆ ಇಂದಿನಿಂದ ಸೋಮವಾರದವರಗೆ ಹುನಗುಂದ ಪಟ್ಟಣ ಸೇರಿದಂತೆ ಇಡೀ ತಾಲೂಕು ಸ್ತಬ್ಧವಾಗಲಿದೆ.
ಹೌದು ಅಗತ್ಯ ಸೇವೆಗಳಾದ ಓಷಧಿ, ಹಾಲು,ಹಣ್ಣು,ತರಕಾರಿ,ವೈಧ್ಯಕೀಯ,ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ, ವ್ಯಾಪಾರ, ವಹಿವಾಟುಗಳನ್ನು ಮೇ 4ರವರಗೆ ಸಂಪೂರ್ಣ ಬಂದ್ ಮಾಡಲಾಗಿದೆ. ಇನ್ನು ಬಾರ್ ಮತ್ತು ರಸ್ಟೋರೆಂಟ್ಗಳು ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರಗೆ ಬಂದ್ ಮಾಡಲಾಗಿದೆ. ವೀಕೆಂಡ್ ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದರೇ ಕಠಿಣ ಕಾನೂನು ಕ್ರಮಕ್ಕೆ ತಾಲೂಕಾಡಳಿತ ಸಜ್ಜಾಗಿದೆ.
ವೀಕೆಂಡ್ ಲಾಕ್ಡೌನ್ನ ಎರಡು ದಿನಗಳವರಗೆ ಓಷಧಿ ಮತ್ತು ವ್ಯಧ್ಯಕೀಯ ಸೇವೆ ನಿರಂತರವಾಗಿ ಲಭ್ಯ ಇರುತ್ತದೆ.ಇನ್ನು ನಿತ್ಯದ ಅಗತ್ಯ ವಸ್ತುಗಳಾದ ತರಕಾರಿ ಮತ್ತು ದಿನಸಿ ವಸ್ತುಗಳು, ಹಣ್ಣು, ಹಾಲು ಮತ್ತು ಹಾಲಿನ ಉತ್ಪನ್ನಗಳು ಶನಿವಾರ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರಗೆ ಮಾತ್ರ ಲಭ್ಯವಿರುತ್ತದೆ. ವೀಕೆಂಡ್ ಲಾಕ್ಡೌನ್ ವೇಳೆ ಅನಗತ್ಯವಾಗಿ ಹೊರಗಡೆ ತಿರಗಾಡುವರಿಗೆ ಪೊಲೀಸ್ ಇಲಾಖೆ ಹದ್ದಿನ ಕಣ್ಣನಿಟ್ಟು ಕಾಯುತ್ತಿದ್ದು ಸುಖಾಸುಮ್ನೆ ಓಡಾಡುವುದು ಕಂಡು ಬಂದರೇ ತಕ್ಷಣ ಅವರ ಮೇಲೆ ಪ್ರಕರಣ ಮತ್ತು ದಂಡವನ್ನು ವಿಧಿಸಲಾಗುವುದು. ಹಾಲು ಮತ್ತು ತರಕಾರಿ ಮಾರಾಟಗಾರರು ಕೊವೀಡ್ ನಿಯಮಾನುಸಾರವಾಗಿ ಮಾಸ್ಕ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶನಿವಾರ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಬೇಕರಿ ವಸ್ತುಗಳ ಮಾರಾಟಕ್ಕೂ ವೀಕೆಂಡ್ ಲಾಕ್ಡೌನ ಎರಡು ದಿನ ಅವಕಾಶವಿಲ್ಲ. ಒಟ್ಟಾರೆಯಾಗಿ ವೀಕೆಂಡ್ ಲಾಕ್ಡೌನ್ ಜನರ ಅಗತ್ಯ ವಸ್ತುಗಳನ್ನು ಬಿಟ್ಟರೇ ಎರಡು ದಿನಗಳವರಗೆ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಲಿವೆ.
ಕೊರೊನಾ ಎರಡನೆಯ ಅಲೆಯು ಹೆಚ್ಚಳದಿಂದ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಅನ್ವಯ ವೀಕೆಂಡ್ ಲಾಕ್ಡೌನ್ ಮಾಡಲಾಗುತ್ತಿದ್ದು.ಈ ಎರಡು ದಿನಗಳಲ್ಲಿ ವೈದ್ಯಕೀಯ ಸೇವೆ,ಓಷಧಿ,ಹಾಲು ಮತ್ತು ಹಾಲಿನ ಉತ್ಪನಗಳಿಗೆ ಅವಕಾಶವಿದ್ದು ಉಳಿದಂತೆ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಅಯ್ಯನಗೌಡ ಪಾಟೀಲ ಸಿಪಿಐ.
ಏನಿದೆ.ಏನಿಲ್ಲ-
* ಓಷಧಿ, ವೈಧ್ಯಕೀಯ, ಸಂಚಾರ, ಅಗತ್ಯ ತುರ್ತು ಸೇವೆ ಲಭ್ಯ.
* 4 ಗಂಟೆಯವರಗೆ ಹಾಲು, ಹಣ್ಣು ಮತ್ತು ಹಣ್ಣಿನ ಉತ್ಪನ್ನ, ದಿನಸಿ ವಸ್ತು ಮಾರಾಟಕ್ಕೆ ಅವಕಾಶ
*ಶನಿವಾರ ಬೆಳಗ್ಗೆ 10 ಗಂಟೆಯ ನಂತರ ದಿನಸಿ ವಸ್ತುಗಳು, ಅಗತ್ಯ ವಸ್ತುಗಳು ಸೇರಿದಂತೆ
ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್.
*ಲಸಿಕೆ ಪಡೆಯಲು ಮುಕ್ತ ಅವಕಾಶ.