ಶಿಗ್ಗಾವ್

ಸೋಂಕಿತರಿಗೆ ಬದುಕಲು ನಾವು ಪ್ರೇರೇಪಣೆ ನೀಡಬೇಕು: ವಗ್ಗಣ್ಣನವರ

ಸೋಂಕಿತರಿಗೆ ಬದುಕಲು ನಾವು ಪ್ರೇರೇಪಣೆ ನೀಡಬೇಕು: ವಗ್ಗಣ್ಣನವರ

ಶಿಗ್ಗಾವಿ 02:  ಏಡ್ಸ್‌ ಸೋಂಕಿತರಿಗೆ ಬೇಕಾಗಿರುವುದು  ಸಮಾಜದಲ್ಲಿ ಬದುಕಿ ಹಾಗೂ ಬದುಕಲು ನಾವು ಪ್ರೇರೇಪಣೆ ನೀಡಬೇಕು ಎಂದು ಜೆ.ಎಂ.ಎಫ್‌.ಸಿ  ದಿವಾಣಿ ನ್ಯಾಯದೀಶ  ಸುರೇಶ ವಗ್ಗಣ್ಣನವರ  ಕಿವಿ ಮಾತು ಹೇಳಿದರು. 

 ಎಸ್‌.ಬಿ.ಬಿ. ಮಹಾವಿದ್ಯಾಲಯದಲ್ಲಿ ನಡೆದ ವಿಶ್ವಏಡ್ಸ್‌ ದಿನ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಇತರೇ ರೋಗಗಳಿಗಿಲ್ಲದ ಕಳಂಕ ಮತ್ತು ತಾರತಮ್ಯ ಏಡ್ಸ ಸೋಂಕಿತರಿಗಿದೆ ಆದ್ದರಿಂದ ಏಡ್ಸ್‌  ಸೋಂಕಿತರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು ಅಲ್ಲದೇ ಸೋಂಕಿತರಿಗೋಸ್ಕರ ಅನೇಕ ಕಾನೂನುಗಳಿವೆ ಮತ್ತು ಎ.ಆರ್‌.ಟಿಕೇಂದ್ರದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರವಿದೆಎಂದರು. 

ತಹಶೀಲ್ದಾರ ಸಂತೋಷ ಹಿರೇಮಠ ಮಾತನಾಡಿ  ಸೋಂಕಿತರಿಗೋಸ್ಕರ ಭಾರತ ಮತ್ತು ಕರ್ನಾಟಕ ಸರ್ಕಾರಚಿಕಿತ್ಸೆ ಹಾಗೂ ಉಚಿತವಾಗಿ ಮಾತ್ರೆಗಳನ್ನು ನೀಡುವುದರ ಜೊತೆಗೆ ಅಪ್ತಸಮಾಲೋಚನೆ ಮುಖಾಂತರ ಅವರ ಜೀವನಾಂಶವನ್ನು ಮುಂದೂಡಿ ಸೋಂಕಿತರು ಸಹಿತ ಜನಸಾಮಾನ್ಯರಂತೆ ಬದುಕಬಹುದು ಎಂದರು. 

 ತಾಲೂಕ ಆರೋಗ್ಯಾಧಿಕಾರಿ ಸತೀಶಎ.ಆರ್ ಮಾತನಾಡಿ  ಏಡ್ಸ್‌ ಸೋಂಕಿತರು ಸಹಿತ ನಮ್ಮ ನಿಮ್ಮಂತೆ  ಜೀವನ ಸಾಗಿಸಬಹುದು ಆದರೆ ಪ್ರಸ್ತುತ ದಿನಗಳಲ್ಲಿ ಹೆಚ್‌.ಐ.ವ್ಹಿ ಸೋಂಕಿಗೆ ಹೆಚ್ಚು ಯುವಕರು ತುತ್ತಾಗುತ್ತಿದ್ದಾರೆ  ಇದು ವಿಪರ್ಯಾಸ ಆದ್ದರಿಂದ ಯುವಕರು ಮದುವೆಆಗುವವರೆಗೂ ಬ್ರಹ್ಮಚರ್ಯ ಪಾಲನೆ ಮಾಡಿಆದರ್ಶ ವಿಧ್ಯಾರ್ಥಿಗಳಾಗ ಬೇಕು ಎಂದರು. 

  ಆಪ್ತಸಮಾಲೋಚಕಿರೇಣುಕಾ ಹೊಸಮನಿ ತಾಲೂಕಿನ ಹೆಚ್‌.ಐ.ವ್ಹಿಏಡ್ಸ್‌ ಅಂಕಿಅಂಶಗಳ ಮುಖಾಂತರಜಾಗೃತಿ ಮೂಡಿಸಿದರು. ಸಂಜೀವಿನಿ ಸಂಸ್ಥೆಯ ಹನುಮಂತ ಮಾತನಾಡಿ ಸಮುದಾಯದ ಭಾಗವಹಿಸುವಿಕೆ ಹೆಚ್‌.ಐ.ವ್ಹಿಏಡ್ಸ್‌ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆಎಂದರು.  ವಿಶ್ವಏಡ್ಸ್‌ ದಿನ ಜಾತಾಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿಡಾ. ಹನುಮಂತಪ್ಪ.ಪಿ.ಹೆಚ್ ಚಾಲನೆ ನೀಡಿದರು. 


ಸುದ್ದಿ ಓದಿ