ನಮ್ಮ ಬಗ್ಗೆ ನಮಗೆ ಗೊತ್ತಿರುವಷ್ಟು, ಬೇರೆಯವರಿಗೆ ಗೊತ್ತಿರುವುದಿಲ್ಲ; ರಕ್ಷಿತಾ ರಾಜು
ಲೋಕದರ್ಶನ ವರದಿ
ನಮ್ಮ ಬಗ್ಗೆ ನಮಗೆ ಗೊತ್ತಿರುವಷ್ಟು, ಬೇರೆಯವರಿಗೆ ಗೊತ್ತಿರುವುದಿಲ್ಲ; ರಕ್ಷಿತಾ ರಾಜು
ವಿಜಯಪುರ 04: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಿಶೇಷ ಚೇತನ ಮಕ್ಕಳ ಕುರಿತಾದ "ವಿಶೇಷ ಉಪನ್ಯಾಸ ಕಾರ್ಯಕ್ರಮ"ದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಮಾತನಾಡಿ, ಯಾವಾಗಲೂ ನಾವು ನಮ್ಮಲ್ಲಿರುವ ಋಣಾತ್ಮಕ ಅಂಶಗಳ ಕಡೆಗೆ ಗಮನ ಕೊಡದೆ, ಅದರಿಂದ ಹೊರಬಂದು, ನಮ್ಮಲ್ಲಿರುವ ಸೃಜನಾತ್ಮಕ ಅಂಶಗಳನ್ನು ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಉಪಯೋಗಿಸಬೇಕು. ನಮ್ಮ ಹಣೆಬರಹವನ್ನು ನಂಬಿ ಬದುಕುವುದಕ್ಕಿಂತ ನಮ್ಮ ಮನೋಬಲ ನಂಬಬೇಕು.ಜಗತ್ತಿನ ಎಲ್ಲ ಜ್ಞಾನವು ಈಗ ಅಂಗೈಯಲ್ಲಿ ಸಿಗುವ ಹಾಗೆ ನಮ್ಮ ಹೆಸರು ಸಹಿತ ಜಗತ್ತೂ ನೆನಪಿಡಬೇಕು ಎಂದರು.
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಆವರಣದ ಆಡಳಿತಾಧಿಕಾರಿಗಳಾದ ಪ್ರೊ.ಆಯ್.ಎಸ್.ಕಾಳಪ್ಪನವರ ಮಾತನಾಡಿ, ಪೆಟ್ಟು ತಿನ್ನುವ ಕಲ್ಲು ಮಾತ್ರ ಪಟ್ಟ ಏರುತ್ತದೆ ಎನ್ನುವ ಹಾಗೆ ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ,ದೈಹಿಕ ಸಮಸ್ಯೆ ಯನ್ನು ನಮ್ಮ ಮನೋಸ್ಥೈರ್ಯದ ಮೂಲಕ ಸಾಧಿಸಬೇಕು.ಸಾಧನೆ ಅನ್ನೋದು ಸಾಧಕರ ಸ್ವತ್ತು ಎಂದು ಅಪರೂಪ ಸಾಧನೆಗೈದ ರಕ್ಷಿತಾ ರಾಜು ಅವರ ಹಾಗೆ ನೀವೆಲ್ಲ ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಎಸ್.ಸಿ.ಬಿರಾದಾರ ಅವರು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ಅವರನ್ನು ಸನ್ಮಾನಿಸಿದರು.ರಕ್ಷಿತಾ ರಾಜು ಅವರ ಗುರುಗಳಾದ ರಾಹುಲ್ ಸರ್,ಸರ್ವ ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.