ಸಾಮರಸ್ಯದ ಸಮಾಜ ನಿಮರ್ಾಣಕ್ಕೊಂದಿಷ್ಟು ಶೈಕ್ಷಣಿಕ ಮಾರ್ಗ
ಸಂಪದ್ಭರಿತ ಸಂಪನ್ಮೂಲವಾಗ ಬಯಸುವ ಪ್ರತಿಯೊಬ್ಬ ಮನುಷ್ಯನೂ ಪ್ರಜ್ಞಾವಂತನಾಗಿರಬೇಕು. ಸಾಮಾಜಿಕ ಕಳಕಳಿ ಇರಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾಜದ ಸ್ವಾಸ್ತ್ಯವನ್ನು ಕಾಪಾಡುವ ಕಾಳಜಿ ಇರಬೇಕು ಹಾಗೂ ಇತರರಿಗೆ ಪ್ರೇರಕನಾಗುವ ಪ್ರೇರಣಾ ಗುಣಗಳನ್ನು ಹೊಂದಿರಬೇಕು. ಹಾಗೆ ಮಾಡಲು ಅಕ್ಷರದ ಮಹತ್ವವನ್ನು ಅರಿತಿರಬೇಕು. ವಿದ್ಯೆ ವಿವೇಕವನ್ನು, ಪ್ರಾಪಂಚಿಕ ತಿಳುವಳಿಕೆಯನ್ನು ವ್ಯಕ್ತಿ ಮತ್ತು ಸಮುದಾಯದ ಕಳಕಳಿಯನ್ನು ರೂಡಿಸುತ್ತದೆ. ಜ್ಞಾನಒಂದೇ ಸವಾರ್ಂಗೀಣ ಅಭಿವೃದ್ದಿಯ ಸಾಧನವಾಗಿರುವುದರಿಂದ ಪ್ರತಿ ಪ್ರಜೆಯು ವಿದ್ಯಾವಂತನಾಗಲು ಮುಂದೆ ಬರಬೇಕು. ಆದರೆ ಇಂದಿನ ಆಧುನಿಕ ತತ್ರಜ್ಞಾನ ದಕಾಲದಲ್ಲಿ ಈ ಮಾತು ಎಷ್ಟು ಸರಿ ಎಂದು ಅವಲೋಕಿಸುವ ಅವಶ್ಯಕತೆ ಇದೆ. ಹಿಂದಿಗಿಂತಲೂ ಇಂದು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟರೂ ಪರಿಣಾಮಕಾರಿಯಾದ, ಸಮಾಜಮುಖಿಯಾದ, ವ್ಯಕ್ತಿ ಬೆಳವಣಿಗೆ ಹಾಗೂ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಎದ್ದುಕಾಣುತ್ತಿದೆ.
ಜ್ಞಾನ ವ್ಯಕ್ತಿಯ ಮತ್ತು ದೇಶದ ಕೈಗನ್ನಡಿ ಇದ್ದಂತೆ. ಜ್ಞಾನ ಹೆಚ್ಚಾದಷ್ಟು ವ್ಯಕ್ತಿಯಲ್ಲಿ ಸರಳತೆ, ಸನ್ನಡತೆ ಹಾಗೂ ಉದಾರತೆಯ ಗುಣಗಳು ವೃದ್ದಿಸಿ, ಅಹಂಕಾರವನ್ನು ದೂರಮಾಡಿ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಸಮಾಜಮುಖಿ ಪ್ರಗತಿಪರ ಕಾರ್ಯಗಳನ್ನು ಕೈಗೊಳ್ಳಲು ಪ್ರೇರೇಪಿಸುತ್ತದೆ. ಸಮಾಜಕ್ಕೆ ಬೇಕಿರುವುದು ಇದೆತಾನೆ?
ಹಿಂದೆ ಗುರುಕುಲ ಪದ್ದತಿ ಶಿಕ್ಷಣ ಕ್ರಮವಿತ್ತು. ಅಲ್ಲಿ ಜ್ಞಾನ ಸಂಪಾದನೆಯೇ ಮುಖ್ಯ ಗುರಿಯಾಗಿತ್ತು. ಶಿಷ್ಯ ವೃಂದವೂ ಉತ್ತಮ ಗುರುವನ್ನು ಅರಸಿ ಜ್ಞಾನ ಪಡೆಯುತ್ತಿತ್ತು. ನಯ-ವಿನಯದ ಮೂಲಕ ಗುರುಗಳ ಪ್ರಸಂಶೆಗೂ ಪಾತ್ರರಾಗುತ್ತಿದ್ದರು. ಕಠಿಣ ಪರಿಶ್ರಮದಿಂದ ಅನೇಕ ವಿದ್ಯೆಗಳ ಪರಿಣಿತರಾಗುತ್ತಿದ್ದರು. ಆ ಜ್ಞಾನವನ್ನು ಇತರರಿಗೂ ಹಂಚುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಅಂದಿನ ಗುರು ಪರಂಪರೆಯೂ ಹತ್ತಾರು ಜ್ಞಾನಗಳ ಭಂಡಾರದಂತಿದ್ದಿತ್ತು. ವಿರೂಪದ ಶಿಲೆಯೊಂದನ್ನು ಸೌಂದರ್ಯಯುಕ್ತ ಶಿಲ್ಪವನ್ನಾಗಿ ರೂಪಿಸುವ ಗುರು ವರ್ಗ, ಶಿಷ್ಯ ವರ್ಗ ಮತ್ತು ಸಮಾಜದಿಂದ ಗೌರವಾದಾರಗವನ್ನು ಪಡೆದಿತ್ತು.
ತಪ್ಪಿಗಾಗಿ ಕಠಿಣ ಶಿಕ್ಷೆಯನ್ನೂ ಅನುಭವಿಸುತ್ತಿತ್ತು ಶಿಷ್ಯ ವರ್ಗ. ಇದು ಸಮಾಜದಲ್ಲಿ ಸಂಸ್ಕಾರಯುತ ಪರಿಸರವನ್ನು ಸೃಷ್ಠಿಸಿತ್ತು. ಪರಸ್ಪರರ ಗೌರವ, ನಂಬಿಕೆ, ವಿಶ್ವಾಸ ಹಾಗೂ ಸಹಬಾಳ್ವೆಯ ಮಾನವೀಯ ಮೌಲ್ಯಗನ್ನು ಕಾಪಾಡಿಕೊಳ್ಳುತ್ತಿತ್ತು. ವಿದ್ಯಾಥರ್ಿಗಳು ಸದಾ ತಮ್ಮ ಜೀವನದ ಪರಮ
ಗುರಿಯ ಕಡೆಗೇನೇ ಹೆಚ್ಚು ಗಮನ ಹರಿಸುತ್ತಿದ್ದರು. ಮತ್ತು ಪಾಲಕರ ಪೋಷಕರ ಹಾಗೂ ವಿದ್ಯಾಥರ್ಿಗಳ ಸಂಬಂಧ ಅನ್ಯೋನ್ಯವಾಗಿತ್ತು. ಅದು ಕಲಿಕೆಯಲ್ಲಿ ಆಸಕ್ತಿಯನ್ನು ಜೀವನದಲ್ಲಿ ಶಿಸ್ತನ್ನು ಮತ್ತು ಸಾಧನೆಗೆ ಮಾರ್ಗವನ್ನು ತೋರುತಿತ್ತು. ಅದಕ್ಕೆ ಅಲ್ಲಮ ಪ್ರಭುವಿನ ಒಂದು ವಚನ-
ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ.
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ
ಆಗಲಿ ಮಹಾಪ್ರಸಾದವೆಂದೆನಯ್ಯಾ
ಗುಹೇಶ್ವರಾ ನಿಮ್ಮಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
ಆದರೆ ಉತ್ತಮ ಉದಾಹರಣೆಎಂಬಂತೆ ನಮ್ಮ ದೇಶದ ಅತ್ಯುನ್ಯತ ಹುದ್ದೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಭಾರತೀಯ ಶಿಕ್ಷಣ ಪದ್ದತಿತ್ತು ಶಿಕ್ಷಕ ವೃಂದಕ್ಕೆಆದರ್ಶ ಪ್ರಾಯರು.
ಶ್ರೀಯುತರು, ಭಾರತಕಂಡ ಶ್ರೇಷ್ಠಶಿಕ್ಷಕರು-ಪ್ರಾಧ್ಯಾಪಕರು- ರಾಯಭಾರಿಗಳು- ಉಪ ರಾಷ್ಟೃಪತಿಗಳು ಹಾಗೂ ರಾಷ್ಟ್ರಪತಿಗಳಾಗಿ ದೇಶದ ಗರವವನ್ನು ಜಗತ್ತಿನಾದ್ಯಾಂತ ಪಸರಿಸಿದವರು. ತತ್ವಶಾಸ್ತ್ರ ಎಂಬ ಸಂಕೀರ್ಣ ವಿಷಯದವನ್ನು ಸರಳ ಮತ್ತು ಸುಂದರವಾಗಿ ವಿದ್ಯಾಥರ್ಿಗಳ ಮನದಾಳಕ್ಕಿಳಿಸಿ ಸಂವೇದನಾಶೀಲ ವಿದ್ಯಾಥರ್ಿ ವೃಂದವನ್ನು ಸೃಷ್ಠಿಸಿದವನು. ಸೀತಮ್ಮ ಮತ್ತು ವೀರಸ್ವಿಮಿ ದಂಪತಿಗಳ ಮಗನಾಗಿ 1888 ಸೆಪ್ಟೆಂಬರ್ 05ರಂದು ಆಂದ್ರದ ಚಿತ್ತೂರು ಜಿಲ್ಲೆಯ ತಿರುತ್ತಣಿಯಲ್ಲಿ ಜನಿಸಿದರು.
ಎಳೆತನದಲ್ಲಿಯೇ ಪ್ರತಿಭಾವಂತರಾದ ಶ್ರೀಯುತರು ಪ್ರೌಢ, ಪದವಿ ಹಾಗು ಉನ್ನತ ವ್ಯಾಸಂಗದಲ್ಲಿಯೂ ಉನ್ನತ ಶ್ರೇಣಿಯಲ್ಲಿ ಪಾಸಾಗಿ ಶಿಕ್ಷಕರಾಗಿ ಶಕ್ಷಣಕ್ಕೆ ಪ್ರೆವೇಶ ಮಾಡಿದರು. ವಿದ್ಯಾಥರ್ಿಗಳ ಮೆಚ್ಚಿನ ಗುರುಗಳಾದರು. ಶಿಕ್ಷಣ ರಂಗ, ಸಾಮಾಜಿಕ ಸೇವೆ, ರಾಜಕಿಯ ಹಾಗೂ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಂಡು ಅನನ್ಯ ಸಾಧನೆ ಮಾಡಿದ್ದಾರೆ. ವೇದಾಂತ ಅಧ್ಯಯನ, ತೆಲುಗು, ಹಿಂದಿ, ಇಂಗ್ಲೀಷ್, ಹಾಗೂ ಸಂಸ್ಕೃತದ ಪಾಂಡಿತ್ಯ ಹೊಂದಿದ್ದ ರಾಧಾಕೃಷ್ಣನ್ ಅವರು ಹಿಂದೂಧರ್ಮ ಮತ್ತು ತತ್ವ ಶಾಸ್ತ್ರವನ್ನು ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಯೂರುವಂತೆ ಮಾಡಿದರು. ಈ ಮಧ್ಯದಲ್ಲಿ 1906 ರಲ್ಲಿ ಶಿವಕಾ ಮಮ್ಮ ಅವರನ್ನು ವಿವಾಹವಾದರು. ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ತತ್ವಶಾಸ್ತ್ರದ ಅಧ್ಯಾಪಕರಾದ ಇವರು ಮುಂದೆ ಸಹಾಯಕ ಪ್ರಾಧ್ಯಾಪಕರಾಗಿ 1918- 1921 ರ ವರೆಗೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬೋಧನೆ, 1921 ರಿಂದ 1936 ರವರೆಗೆ ಕೋಲ್ಕೊತ್ತಾ ವಿವಿಯಲ್ಲಿ, ಸೇವೆ ಮಾಡಿದರು.
ರಾಧಾಕೃಷ್ಣನ್ ಅವರು ತಮ್ಮ ವೃತ್ತಿ ಮತ್ತು ಪ್ರವೃತ್ತಿ ಜೀವನದಲ್ಲಿ ರವೀಂದ್ರನಾಥ ಠಾಗೋರ್ ಹಾಗೂ ಗಾಂಧೀಜಿಯವರ ತತ್ವ ಸಿದ್ಧಾಂತಗಳಿಂದ ಹೆಚ್ಚು ಪ್ರಭಾತರಾಗಿ ಜನಪರ ಕೆಲಸ ಮಡಿದರು. ಆ ಮೂಲಕ ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿದರು. ಉದಾಹರಣೆಗೆ;- 1931 ರಿಂದ 1936ರವರೆಗೆ ಆಂಧ್ರದ ವಿ ವಿಯ ಕುಲಪತಿಗಳಾದರು, 1937ರಲ್ಲಿ ಕೋಲ್ಕೋತ್ತ ವಿ ವಿ ಯತತ್ವ ಶಾಸ್ತ್ರದ ಪ್ರಾಧ್ಯಾಪಕರಾದರು. 1939 ರಿಂದ 1948 ರವರೆಗೆ ಬನಾರಸನ ಹಿಂದೂ ವಿ ವಿ ಯ ಕುಲಪತಿಯಾಗಿ ಸೇವೆ, 1953ರಿಂದ 1967ರ ವರೆಗೆ ದೆಹಲಿ ವಿವಿಯ ಕುಲಪತಿಗಳಾಗಿ ಸೇವೆ ಸಲ್ಲಿಸಿದರು.
ದೇಶದ ಅತ್ತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ, ಸಾಹಿತ್ಯ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನುಪಮ ಸಲ್ಲಿಸಿ ಎಪ್ರೀಲ್ 17ರ 1975ರಲ್ಲಿ ನಿಧನರಾದರು.
ಸಾರ್ಥಕ-ಶಿಕ್ಷಕ
ಗುರು ಗುರು ಗುರುದೇವನು ನೀನು
ಜಗದ ಬೆಳಕಿನ ತೈಲವು ನೀನು ||ಪ||
ನೀಡುವೆ ಅರಿಯದ ಜ್ಞಾನವನು
ತೆಗೆಯುವೆ ಶಿಲೆಯಲಿ ಶಿಲ್ಪವನು
ಕಾಣದ ದಾರಿಯ ತೋರುತ ನೀನು
ನೆಮ್ಮದಿ ಬದುಕಿಗೆ ಕಾರಣನು |1|
ಮಾಡುವೆ ಅನುದಿನ ಸೇವೆಯನು
ಬಯಸದೆಯಾವುದೆ ಫಲವನ್ನು
ಜ್ಞಾನದೇಗುಲದಿ ಸವೆಸುತಜೀವನ
ಪಡೆದಿಹೆ ದೇವರ ಸ್ಥಾನವನು |2|
ದೇಹಕೆದೇಶಕೆ ಶಕ್ತಿಯು ನೀನು
ಸೃಜನ ಶೀಲತೆಯ ಯುಕ್ತಿಯು ನೀನು
ಹೊಸ ಹೊಸ ಜ್ಞಾನವ ಪಡೆಯಲು ನೀನು
ಹಾಕಿದೆ ಅರಿವಿನ ಬೀಜವನು |3|
ಅಕ್ಷರ ಕಣಜದ ಅಧಿಪತಿ ನೀನು
ಮಾನವೀಯತೆಯ ನಿಜ ಮಗನು
ಸಹ ಜೀವನದ ಮೂಲವು ನೀನು
ಸ್ನೇಹದ ಬದುಕಿಗೆ ಬದುಕಾದವನು |4|
ಕಡಲಿನ ಆಳದ ನಿಧಿ ನೀನು
ಶ್ರದ್ದೆ ಭಕ್ತಿಗೆ ಒಲಿಯುವನು
ಅಂಧಕಾರಕೆ ಅಂಕುಶವಿಟ್ಟು
ಅಮಲಿನ ಮಧವನು ಕಳೆಯುವನು |5|
ಎಂಬ ಶಿಕ್ಷಕರ ವೃತ್ತಿ, ಶಿಷ್ಯವರ್ಗಹಾಗೂಪೋಷಕರ ಜವಾಬ್ದಾರಿಗಳು-
ಆಧುನಿಕ ಕಾಲದ ಇಂದಿನ ಶಿಕ್ಷಣ ಪದ್ದತಿಯ ಉದ್ದೇಶ ಏನೆಂಬುದನ್ನೇ ಅರಿಯದಾಗಿದೆ. ಸರಕಾರದ ನೀತಿ ನಿಯಮಗಳಿಂದಾಗಿ ಹಾಗೂ ಬದಲಾದ ಸಾಮಾಜಿಕ ನಡಾವಳಿಗಳ ಪ್ರಭಾವದಿಂದಾಗಿ ಗುರುಗಳು ವಿದ್ಯಾಥರ್ಿಗಳನ್ನು ಹುಡುಕಿಕೊಂಡು ಹೋಗಿ ಅವರಿದ್ದಲ್ಲಿಯೇ ಭಯ ಭಕ್ತಿಯಿಂದ ವಿದ್ಯೆಯನ್ನುದಾನ ಮಾಡುವ ವಿಷಮ ಪರಿಸ್ಥಿತಿ ಎದುರಾಗಿರುವುದು ವಿಪಯರ್ಾಸದ ಸಂಗತಿ.
ಊಟ, ವಸತಿ, ಬಟ್ಟೆ, ಶುಲ್ಕ, ಸೈಕಲ್, ಹಾಲು ಹಾಗೂ ಶೂ. ಇತ್ಯಾದಿ ಸೌಲಭ್ಯಗಳನ್ನು ನೀಡಿದರೂ ಶಾಲೆಗೆ ಬಾರದ. ಬಂದರೂ ಆಸಕ್ತಿಯಿಂದ ವಿದ್ಯೆ ಕಲಿಯದ ಮತ್ತು ಗುರುಗಳ ಕುರಿತು ಕಿಂಚಿತ್ತು ಗೌರವವಿರದ ವಿದ್ಯಾಥರ್ಿ ಸಮೂಹದಿಂದ ಶೈಕ್ಷಣಿಕ ಪ್ರಗತಿಯನ್ನು ಅಪೇಕ್ಷಿಸುವುದಾದರೂ ಹೇಗೆ? ಕೇವಲ ಉರು ಹೊಡೆದು ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳಲ್ಲಿ ಸಾಮಾನ್ಯ ಜ್ಞಾನ ಶೂನ್ಯ ಸಂಪಾದನೆಗೆ ಸಮವಾಗಿದೆ. ಅಂತಜರ್ಾಲದ ಮುಖ ಪುಟದಲ್ಲಿ ಮುಖವನ್ನಿಟ್ಟು ಕಾಲಹರಣ ಮಾಡುವ ಮಕ್ಕಳಿಗೆ ಜೀವನ ಶಿಕ್ಷಣದ ಅವಶ್ಯಕತೆ ಇದೆ. ಕೌಟುಂಬಿಕ ಸಂಬಂಧಗಳ ಅರಿವಿನ ಅಗತ್ಯವಿದೆ. ಅಂದಾಗಮಾತ್ರ ಸಮಾಜದಲ್ಲಿ ಉತ್ತಮ ನಡತೆಗಳ ಮೂಲಕ ಸೌಹಾರ್ದತಾ ಸಂಬಂಧಗಳನ್ನು ಸೃಷ್ಠಿಸಿ ಪ್ರಗತಿ ಪಥದತ್ತ ಮುನ್ನಡೆಯಲು ಸಾಧ್ಯವಾಗುತ್ತದೆ. ಅಡ್ಡದಾರಿ ಹಿಡಿಯುವ ಬದಲಾಗಿ ಸ್ವಾಸ್ತ್ಯ ಸಮಾಜದ ಮೂಲಾಂಶಗಳಾದ ಭಾಷೆ, ಸಂಸ್ಕೃತಿ ನೆಲ ಜಲ ಹಾಗೂನಾಡಿನ ಕುರಿತು ಸದ್ಭಾವನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ಹಾಗಾಗಿ ಮಕ್ಕಳಲ್ಲಿ ಓದುವ, ಸಾಧಿಸುವ, ಶ್ರಮ ಪಡುವಹಸಿವನ್ನು ಹುಟ್ಟಿಸಬೇಕು. ಹಸಿದವನು ಮಾತ್ರ ದುಡಿಯಬಲ್ಲ. ಶಾಂತಿಯುತ ಸಮಾಜಕ್ಕೆ ಅಡಿಯಾಗಬಲ್ಲ.
ಈ ಕಾರಣದಿಂದಾಗಿ ಸರಕಾರ, ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಸೃಜನಶೀಲ ಮಾನವ ಸಂಪನ್ಮೂಲವಾಗುವಂತೆ ತಿದ್ದಬೇಕು, ನೀತಿ ನಿಯಮಗಳನ್ನು ಜಾರಿ ಮಾಡಬೇಕು ಹಾಗೂ ಮಕ್ಕಳ ರಕ್ಷಣೆಗೆ, ಪೋಷಣೆಗೆ ಮುಂದಾಗಬೇಕು. ಆ ಮೂಲಕ ಸಾಂಪ್ರದಾಯಕ ಶಿಕ್ಷಣ ಪದ್ದತಿಯನ್ನು ಅನುಷ್ಠಾನ ಮಾಡಬೇಕಿದೆ. ಮಕ್ಕಳ ಸವಾರ್ಂಗೀಣ ಪ್ರಗತಿಯನ್ನು ರೂಪಿಸಬೇಕಿದೆ.
- ವೆಂಕಟೇಶ್ ಈಡಿಗರ
ರಾಣೆಬೆನ್ನೂರು
ಮೊ.900869831