ತಾಳಿಕೋಟಿ

ಮಾರ್ಚ್ ಅಂತ್ಯಕ್ಕೆ ರೈತರ ಹೊಲಗಳಿಗೆ ನೀರು ಹರಿಯಲಿದೆ

ಮಾರ್ಚ್  ಅಂತ್ಯಕ್ಕೆ ರೈತರ ಹೊಲಗಳಿಗೆ ನೀರು ಹರಿಯಲಿದೆ

ತಾಳಿಕೋಟಿ25:  ಮತಕ್ಷೇತ್ರದ ಸಮಗ್ರ ನೀರಾವರಿ ನನ್ನ ಕನಸಾಗಿದ್ದು ಪ್ರತಿಯೊಬ್ಬ ರೈತನಿಗೂ ಅನುಕೂಲವಾಗಬೇಕೆಂದು ಹಲವಾರು ನೀರಾವರಿ ಯೋಜನೆ ಹಾಕಿಕೊಂಡಿದ್ದೇನೆ. ಇದರ ಭಾಗವಾಗಿ ರೂ. 870 ಕೋಟಿ ಮೊತ್ತದ ಈ ಭಾಗದ ರೈತರ ಮಹತ್ವಾಕಾಂಕ್ಷಿಯ ಪೀರಾಪೂರ-ಬೂದಿಹಾಳ ನೀರಾವರಿ ಯೋಜನೆಯು ಮುಕ್ತಾಯ ಹಂತದಲ್ಲಿದ್ದು ಮಾರ್ಚ್ ಅಂತ್ಯಕ್ಕೆ ರೈತರ ಜಮೀನುಗಳಿಗೆ ನೀರು ಹರಿಯಲಿದೆ ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.

ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಮಸ್ಕನಾಳ, ಮೈಲೇಶ್ವರ ಹಾಗೂ ಗುಂಡಕನಾಳ ಗ್ರಾಮಗಳಲ್ಲಿ ಸುಮಾರು ರೂ. 2 ಕೋಟಿ ಮೊತ್ತದ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 

ನಮ್ಮ ರೈತರ ಹಿತ ಕಾಯುವ ಉದ್ದೇಶದಿಂದ ವಿಜಯಪುರ ಮುಖ್ಯ ಕಾಲುವೆಗೆ ಉಪಕಾಲುವೆ ನಿಮರ್ಾಣಕ್ಕೆ ರೂ. 800 ಕೋಟಿ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದ್ದು ಶೀಘ್ರದಲ್ಲಿಯೇ ಅದಕ್ಕೂ ಚಾಲನೆ ನೀಡುತ್ತೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ಮುಖಂಡ ಸಂಗನಗೌಡ ಹೆಗರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಸಕ ಸೋಮನಗೌಡರು ನುಡಿದಂತೆ ನಡೆಯುವ ವ್ಯಕ್ತಿ. ಈ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದಂಥಹ ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ, ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆಂದು ಕೇಳಿಕೊಂಡರು.

ಈ ವೇಳೆ ಮುಖಂಡರಾದ ಪ್ರಶಾಂತ ಹಾವರಗಿ, ಸೋಮನಗೌಡ ಹಾದಿಮನಿ, ಗುರುಗೌಡ ಗುರಡ್ಡಿ, ಸಾಹೇಬಗೌಡ ರಾರಡ್ಡಿ, ರಾಯಪ್ಪಗೌಡ ನೀರಲಗಿ, ಮುತ್ತುಗೌಡ ಮಾಳಿ, ಸಾಹೇಬಣ್ಣ ಆಲ್ಯಾಳ, ಸುಭಾಸ ಗುಂಡಕನಾಳ ಇದ್ದರು.

ಸುದ್ದಿ ಓದಿ