ರೈತರ ಹೊಲಗಳಿಗೆ ಕೃಷಿ ಭೂಮಿಗೆ ನೀರು ತಲುಪಿಸಲಾಗುವುದು: ಗಣೇಶ್
ಲೋಕದರ್ಶನ ವರದಿ
ಕಂಪ್ಲಿ 26: ರೈತರ ಹೊಲಗಳಿಗೆ ಕಡೆ ಅಂಚಿನ ಭಾಗದಲ್ಲಿರುವ ಕೃಷಿ ಭೂಮಿಗೆ ನೀರು ತಲುಪಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಾಲೂಕಿನ ದೇವಲಾಪುರ ಬಳಿಯಲ್ಲಿ ಜವುಕು ಗ್ರಾಮಕ್ಕೆ ತೆರಳುವ 2.50ಕಿ.ಮೀ ರಸ್ತೆಯಲ್ಲಿ, ಪ್ರವಾಹ ಕಾಮಗಾರಿ ಯೋಜನಡಿ 58ಲಕ್ಷ ರೂ.ಗಳ ವೆಚ್ಚದ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಕೃಷಿಗೆ ಅಗತ್ಯ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುಲು ಮುಂದಾಗಿ ಎಂದರು ತೋರಬೇಕು ಎಂದರು.ಗ್ರಾಪಂ ಉಪಾಧ್ಯಕ್ಷೆ ಪೂಜಾರಿ ಈರಮ್ಮ, ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಮಾಜಿ ಅಧ್ಯಕ್ಷೆ ಕೆ.ಉಮಾದೇವಿ, ಎಸ್‌ಡಿಎಂಸಿ ಅಧ್ಯಕ್ಷರಾದ ಷಣ್ಮುಖಪ್ಪ, ದುಖಾನಿ ರುದ್ರಯ್ಯ, ಗ್ರಾಪಂ ಮಾಜಿ ಅಧ್ಯಕ್ಷರಾದ ಗೌಡ್ರು ಉಮೇಶಗೌಡ್ರು, ಗೌಡ್ರು ಬುಡಗನಗೌಡ್ರು, ಗೌಡ್ರು ಸುರೇಶಗೌಡ್ರು, ಪ್ರಮುಖರಾದ ಮರೇಗೌಡ್ರು, ಗೌಡ್ರು ಅಂಜಿನಪ್ಪ, ಗುರುಲಿಂಗಯ್ಯ, ಗೌಡ್ರು ಸಿದ್ದಯ್ಯ, ಸಿಆರ್‌ಪಿ ಸುರೇಶ್ ಪೂಜಾರ್, ಸೇರಿ ಇತರರಿದ್ದರು.