ಹಗರಿಬೊಮ್ಮನಹಳ್ಳಿ

ಜುಲೈ-ಅಗಸ್ಟ್‌ನಲ್ಲಿ ಮಾಲವಿ ಜಲಾಶಯಕ್ಕೆ ನೀರು ನಿಶ್ಚಿತ

ಜುಲೈ-ಅಗಸ್ಟ್‌ನಲ್ಲಿ ಮಾಲವಿ ಜಲಾಶಯಕ್ಕೆ ನೀರು ನಿಶ್ಚಿತ

ಹಗರಿಬೊಮ್ಮನಹಳ್ಳಿ.ಜೂ.18 : ಕ್ಷೇತ್ರದ ಬಹು ದಿನದ ಕನಸಾದ ಮಾಲವಿ ಜಲಾಶಯಕ್ಕೆ ಮುಂದಿನ ಜುಲೈ ಅಗಸ್ಟ್‌ನಲ್ಲಿ ನೀರು ನಿಶ್ಚಿತ ಎಂದು ಶಾಸಕ ಎಸ್‌.ಭೀಮಾನಾಯ್ಕ್‌ ಹೇಳಿದರು. 

ಪಟ್ಟಣದ ಜಾಲಿ ನಗರದಲ್ಲಿ ಶುಕ್ರವಾರ ಶಾಸಕ ಎಸ್‌.ಭೀಮಾನಾಯ್ಕ್‌ 1.5 ಕೋಟಿ ವೆಚ್ಚದ ಶಾದಿ ಮಹಲ್ ಕಟ್ಟಡಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ ಕ್ಷೇತ್ರದ ಸುಧೀರ್ಘ ವರ್ಷಗಳ ಬಹು ಬೇಡಿಕೆಯಾದ ಮಾಲವಿ ಜಲಾಶಯಕ್ಕೆ ನೀರು ತರುವ ಯೋಜನೆಗೆ ಕೆಲವೇ ದಿನಗಳಲ್ಲಿ ಕನಸು ನನಸಾಗಲಿದೆ ಎಂದರು, ಸಿದ್ದರಾಮಯ್ಯನವರ ಅವಧಿಯಲ್ಲಿ ನೀಡಿದ ಅನುದಾನ ಬಳಕೆಗೆ ಶಾದಿ ಮಹಲ್‌ನ ಸ್ಥಳ ಸೇರಿದಂತೆ ಟ್ರಸ್ಟ್‌ ಅಗಿರಬೇಕು,ಆಡಿಟ್ ಅಗಿರಬೇಕು ಎಂಬ ಹಲವಾರು ನಿಯಮಗಳು ಅಡ್ಡಿಯಾಗಿದ್ದವು ಹಾಗಾಗಿ 1ಕೋಟಿ ಅನುದಾನ ಬಳಸಲು ಅಗಲಿಲ್ಲ, ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್ ಅಹಮದ್ ಸಚಿವರಾಗಿದ್ದಾಗ ಹಗರಿಬೊಮ್ಮಮಹಳ್ಳಿ, ಮರಿಯಮ್ಮನಹಳ್ಳಿ. ಕೊಟ್ಟೂರು ಪಟ್ಟಣಗಳಲ್ಲಿ ಶಾದಿ ಮಹಲ್‌ಗೆ ಹಸಿರು ನಿಶಾನೆ ದೊರೆತರು ಕಮಿಟಿಯಿಂದ ಹಣ ಬಿಡುಗಡೆಗೆ ಸ್ಥಳವನ್ನು 5 ವರ್ಷದ ಹಿಂದೆ ಕಮಿಟಿಯ ವ್ಯಾಪ್ತಿಗೆ ಒಳಪಟ್ಟಿದ್ದರೆ ಮಾತ್ರ ಹಣ ಬಿಡುಗಡೆ ಮಾಡುವ ನಿಯಮವಿದೆ ಎಂಬ ಕಾನೂನಿಗೆ ಶಾದಿ ಮಹಲ್‌ಗಳ ಕಟ್ಟಡಕ್ಕೆ ಅನುದಾನ ಸಿಗಲಿಲ್ಲವಾದರೂ ಸ್ಥಳೀಯ ಶಾಸಕರ ಅನುದಾನದಲ್ಲಿ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುವಂತೆ ಮೊದಲ ಕಂತಿನಲ್ಲಿ 75ಲಕ್ಷದಂತೆ ಎರೆಡು ಕಂತುಗಳಲ್ಲಿ ಶಾದಿ ಮಹಲ್ ನಿರ್ಮಾಣವಾಗಲಿದೆ ಎಂದರು. 

ಶಾಸಕರ ಅನುದಾನದಲ್ಲಿ 75 ಲಕ್ಷ ನೀಡುಡತ್ತಿರುವುದು ಇದು ಇತಿಹಾಸವಾಗಿದೆ,120 ದಿನಗಳಲ್ಲಿ 75ಲಕ್ಷದ ಕಾಮಗಾರಿಯನ್ನು ಪೂರ್ಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ, ಅಲ್ಪ ಸಂಖ್ಯಾತರ ಕಲ್ಯಾಣ ನಿಧಿಯಿಂದ ಮುಂದಿನ ದಿನಗಳಲ್ಲಿ ಅನೇಕ ಅನುದಾನಗಳನ್ನು ತರುವ ಭರವಸೆಯನ್ನು ನೀಡಿದರು. ರಾಮನಗರದ ಮೋಮಿನ್ ಅಕ್ಕಾನೀಯ ಮಸ್ಜೀದ್‌ಗೆ 25ಲಕ್ಷ ಅನುದಾನವನ್ನು ನೀಡಲಾಗಿದೆ ಇದರ ಜೊತೆ ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲಾ ಸಮುದಾಯಗಳ ಅಭಿವೃಧ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆಯನ್ನು ನೀಡಿದರು. 

ಈ ಸಂಧರ್ಭದಲ್ಲಿ ಹಾಲ್ದಾಳ್ ವಿಜಯಕುಮಾರ್, ಹುಳ್ಳಿ ಮಂಜುನಾಥ್, ನೆಲ್ಲು ಇಸ್ಮಾಯಿಲ್, ಸ್ಟೋರ್ ಇಸ್ಮಾಯಿಲ್,ನೂರ್ ಸಾಹೇಬ್, ಇರ್ಫಾನ್,ಅಕ್ಕಿ ತೋಟೇಶ್,ಚಿಂತ್ರಪಳ್ಳಿ ದೇವೇಂದ್ರ‍ಪ್ಪಾ, ಡಿಶ್ ಮಂಜುನಾಥ್, ಕನ್ನಿಹಳ್ಳಿ ಚಂದ್ರಶೇಖರ್, ಪವಾಡಿ ಹನುಮಂತಪ್ಪ, ಹೆಗ್ಡಾಳ್ ರಾಮಣ್ಣ,ಸಿ.ದೇವರಾಜ್, ಶೇಖ್ ಅಹಮದ್,ಜಂದಿಸಾಬ್,ಬಾಬು  ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ