ತಾಳಿಕೋಟಿ

ನೀರಿನ ಕೊರತೆಗೆ ಅಂತರ್ಜಲ ಕುಸಿತ ಕಾರಣ - ಹಿರೇಗೌಡರ

ನೀರಿನ ಕೊರತೆಗೆ ಅಂತರ್ಜಲ ಕುಸಿತ ಕಾರಣ - ಹಿರೇಗೌಡರ

ಲಕ್ಕುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕಾರಿಗಳ ಭೇಟಿ 

ತಾಳಿಕೋಟಿ 04: ಈ ಬಾರಿ ನಮ್ಮ ಜಿಲ್ಲೆಯಲ್ಲಿ ವಾಡಿಕೆಗಿಂತ ಅತಿ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಅಂತರ್ಜಲ ಕುಸಿದಿದೆ. ಇದರಿಂದ ತೀವ್ರ ನೀರಿನ ಅಭಾವವಾಗಿದೆ. ಗ್ರಾಮಸ್ಥರು ಸಹಕರಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಹಿರೇಗೌಡರ ಹೇಳಿದರು. 

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಜೊತೆಗೆ ಭಾವಿಯ ನೀರು ಕುಡಿಯಲು ಯೋಗ್ಯ ಇಲ್ಲ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ ಎಂದು ತಹಶೀಲ್ದಾರರಿಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ ಕೀರ್ತಿ ಚಾಲಕ ಅವರೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ ಎ.ಇ.ಇ. ಹಿರೇಗೌಡರ ಅವರು ಗ್ರಾಪಂ ಪಿಡಿಓ ಕಿರಣಗಿ ಅವರಿಂದ ಸಮಸ್ಯೆಯ ಸಮಗ್ರ ಮಾಹಿತಿ ಪಡೆದುಕೊಂಡರು. ಈಗಾಗಲೇ ಗ್ರಾಮಕ್ಕೆ ಭಾವಿಯಿಂದ ನೀರು ಪೂರೈಕೆಯಾಗುತ್ತಿದೆ. ಭಾವಿಯ ನೀರು ಕುಡಿಯಲು ಯೋಗ್ಯವಾಗಿದೆ ಆದರೂ ಮತ್ತೊಮ್ಮೆ ಪರೀಕ್ಷೆಗೆ ಕಳಿಸಲಾಗುವುದು ನೀರಿನ ತೀವ್ರ ತೊಂದರೆ ಇರುವುದರಿಂದ ಪ್ರತಿದಿನ ಪೂರೈಕೆ ಅಸಾಧ್ಯ, ಗ್ರಾಮಸ್ಥರು ಸಹಕರಿಸಬೇಕು ಎಂದರು. 

ತಹಶೀಲ್ದಾರ ಕೀರ್ತಿ ಚಾಲಕ ಅವರು ಮಾತನಾಡಿ ಇರುವ ವ್ಯವಸ್ಥೆಯನ್ನು ಇನ್ನಷ್ಟು ಸರಿಪಡಿಸಲಾಗುವುದು. ಭಾವಿಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಬೇಕು ಇದು ಗ್ರಾಮಸ್ಥರ ಜವಾಬ್ದಾರಿ ಕೂಡಾ ಆಗಿದೆ ಎಂದರು. 

ಈ ಸಮಯದಲ್ಲಿ ಗ್ರಾಪಂ ಪಿಡಿಓ ಕಿರಣಗಿ ಕಾರ್ಯದರ್ಶಿ ಚೌಧರಿ ಗ್ರಾಮದ ಪ್ರಮುಖರಾದ ಸಿದ್ದನಗೌಡ ಬಿರಾದಾರ, ಮಹ್ಮದ್‌ಸಾಬ ತಳ್ಳೊಳ್ಳಿ, ಚಂದಪ್ಪ ಕೊಳಕೂರ, ರಾಜು ಹಾರಿವಾಳ ಮತ್ತಿತರರು ಇದ್ದರು. 


ಸುದ್ದಿ ಓದಿ