ಗಾನಯೋಗಿ ಸಂಘದಿಂದ ನೀರಿನ ಟ್ಯಾಂಕ್ ಸ್ವಚ್ಛತಾ ಕಾರ್ಯಕ್ರಮ
ವಿಜಯಪುರ 30: ಗಾನಯೋಗಿ ಸಂಘದ ವತಿಯಿಂದ ವಿಜಯಪುರ ನಗರದಲ್ಲಿ ಹಳೆಯ ನೀರಿನ ಟ್ಯಾಂಕ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನೀರಿನ ಟ್ಯಾಂಕ್ ಹಾಗೂ ಸುತ್ತಲೂ ಕಸ, ಕಡ್ಡಿ, ಬಿತ್ತಿಪತ್ರ ಗಳಿಂದ ಅಸಯ್ಯ ಎನಿಸುವ ಹಾಗಿತ್ತು. ಇದನ್ನು ಗಮನಿಸಿದ ಗಾನಯೋಗಿ ಸಂಘವು ಮೂರು ನೀರಿನ ಟ್ಯಾಂಕನ್ನು ಸ್ವಚ್ಛಗೊಳಿಸಿ ಅದಕ್ಕೆ ಸುಂದರವಾಗಿ ಬಣ್ಣವನ್ನು ಹಚ್ಚಿ ಬುದ್ಧ, ಬಸವ, ಅಂಬೇಡ್ಕರ್, ನೇತಾಜಿ ಸುಭಾಷ್ ಚಂದ್ರ ಬೋಸ್, ವಿನಾಯಕದಾಮೋದರ್ ಸಾವರ್ಕರ್ ಅವರ ಚಿತ್ರಗಳನ್ನು ಬಿಡಿಸಿ ನೀರನ್ನು ಮಿತವಾಗಿ ಬಳಸಿ ಎಂಬ ನಾಣ್ಣುಡಿಯನ್ನು ಬರೆಯಲಾಯಿತು.
ಈ ಸಂದರ್ಭದಲ್ಲಿ ರಾಜಕುಮಾರ ಹೊಸಟ್ಟಿ, ವಿಠ್ಠಲ ಗುರುವಿನ, ಕಿರಣ ಶಿವಣ್ಣವರ,ವೀರೇಶ ಸೊನ್ನಲಗಿ, ರವಿ ರತ್ನಾಕರ, ಸಚಿನ ವಾಲಿಕಾರ, ಶ್ರೀಶೈಲ ಕುಮಸಗಿ, ಶ್ರೀಶೈಲ ಜುಮನಾಳ, ರೇವಣಸಿದ್ಧ ಹಿರೇಮಠ, ಮಹೇಶ ಕುಂಬಾರ, ಕಿರಣ ಕುಂಬಾರ, ಪ್ರಮೋದ ಚವಾಣ, ಸಂತೋಷ ಚವಾಣ, ವಿಕಾಸ ಕಂಬಾಗಿ, ಆನಂದ ಹೊನವಾಡ, ಅಕ್ಷಯ್, ಬಾಬು, ರಾಹುಲ್ ಎಂ ಮುಂತಾದವರಿದ್ದರು.