ಮುಂಡರಗಿ

ನೀರು, ಗಾಳಿ, ಇವೆಲ್ಲವನ್ನೂ ಪಡೆದುಕೊಂಡಾಗ ಸುಂದರ ಜೀವನ ಸಾಧ್ಯ: ಬಸವರಾಜಪ್ಪ ಶರಣರು

ನೀರು, ಗಾಳಿ, ಇವೆಲ್ಲವನ್ನೂ ಪಡೆದುಕೊಂಡಾಗ ಸುಂದರ ಜೀವನ ಸಾಧ್ಯ: ಬಸವರಾಜಪ್ಪ ಶರಣರು

ಮುಂಡರಗಿ,25: ಪ್ರತಿಯೊಂದು ಜೀವಿಯೂ ಷಟಸ್ಥಲ ಸಿದ್ದಾಂತದಲ್ಲಿ ಬರುವ ಅನ್ನ, ನೀರು, ಗಾಳಿ, ಅಗ್ನಿ, ಭೂಮಿ ಹಾಗೂ ಆಕಾಶ ಇವೆಲ್ಲವನ್ನೂ ಪಡೆದುಕೊಂಡಾಗ ಮಾತ್ರ ಸುಂದರ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಶಿರಗುಪ್ಪಿಯ ಬಸವರಾಜಪ್ಪ ಶರಣರು ಹೇಳಿದರು. 

ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಜರುಗಿದ ಅನುಭಾವ ದರ್ಶನ ಮಾಲಿಕೆ ಪ್ರವಚನದಲ್ಲಿ ಷಟಸ್ಥಲ ಸಿದ್ದಾಂತದ ಕುರಿತು ಅವರು ಪ್ರವಚನ ಮಾಡಿದರು. 

ಈ ಷಟಸ್ಥಲ ಸಿದ್ದಾಂತವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕಾಗುತ್ತದೆ. ಅಂದಾಗ ನಿಮ್ಮ ಬದಕು ಹಸನಾಗುತ್ತದೆ. ಪ್ರಸಾದ, ಮಂತ್ರ, ಪಾದೋದಕ, ವಿಭೂತಿ ಇವೆಲ್ಲವೂ ಪ್ರಕೃತಿಯ ಗುಣಧರ್ಮಗಳು. ಹೀಗಾಗಿ ಎಲ್ಲರೂ ಗುರುವಿನ ಪಾಧಕ್ಕೆ ಶರಣಾಗಬೇಕಾಗುತ್ತದೆ. ಅಂದಾಗ ಅವನು ಪರಿಪೂರ್ಣವಾದ ಭಕ್ತನಾಗಲು ಸಾಧ್ಯ. ಪ್ರಕೃತಿ ಹಾಗೂ ಪರಮಾತ್ಮನ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 

ಈ ವೇಳೆ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಆಶಿರ್ವಚನ ನೀಡಿ, ಪ್ರತಿಯೊಬ್ಬ ಮನುಷ್ಯ ಆರೋಗ್ಯವಂತನಾಗಲು ಷಟಸ್ಥಲವನ್ನು ಪಾಲಿಸಬೇಕು. ಪ್ರಕೃತಿ, ಮಣ್ಣು, ಗಾಳಿ, ನೀರು ಇವೆಲ್ಲವೂ ನಮ್ಮ ಬದುಕಿಗೆ ಆಹಾರ. ಇಂದಿನ ಮನುಷ್ಯನಲ್ಲಿ ನಾನು ಎಂಬುವುದು ತುಳುಕಾಡುತ್ತಿದೆ. ಇದರಿಂದ ಏನು ಪ್ರಯೋಜನವಿಲ್ಲ. ಮನುಷ್ಯನಿಕಗೆ ಈ ನೀರು, ಗಾಳಿ, ಬೆಳಕು, ಅಗ್ನಿ, ಭೂಮಿಯ ಕಿಮ್ಮತ್ತು ಗೊತ್ತಿಲ್ಲ. ಇಂತಹ ಪ್ರಕೃತಿಯ ಗುಣಧರ್ಮ ಮನುಷ್ಯನಿಗೆ ಅತ್ಯವಶ್ಯವಿದೆ. ಮನುಷ್ಯ ಕೇವಲ ದೈಹಿಕ ಸಂಬಂಧಕ್ಕೆ ಬದುಕಿದ್ದಾನೆ ಹೊರತು ಆತ್ಮಕ್ಕೆ ಬದುಕಿಲ್ಲ ಹೀಗಾಗಿ ಪ್ರತಿಯೊಬ್ಬರೂ ಪ್ರಕೃತಿಯನ್ನು ಕಾಪಾಡಿಕೊಂಡು ನಿಮ್ಮ ಜೀವನವನ್ನು ಸುಂದರವಾಗಿಟ್ಟುಕೊಳ್ಳಿ ಎಂದು ಹೇಳಿದರು. 


ಸುದ್ದಿ ಓದಿ