ವಾರ್ಡ ನಂ 22 ಮೂಲಭೂತ ಸೌಲಭ್ಯಗಳಿಂದ ವಂಚಿತ: ನಾಗರಿಕರ ಆಕ್ರೋಶ
ಬೈಲಹೊಂಗಲ 18: ಪುರಸಭೆ ವ್ಯಾಪ್ತಿಯ ವಾರ್ಡ ನಂ 22 ರಲ್ಲಿ ನಾಗರಿಕರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಪುರಸಭೆ ವಿರುದ್ಧ ನಾಗರಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಾರ್ಡ ನಂ 22 ರ ಮಡಿವಾಳೇಶ್ವರ ಕಾಲೋನಿಯ 2 ದಶಕಗಳಿಂದ ಸರಿಯಾಗಿ ರಸ್ತೆ, ಬೀದಿ ದೀಪ ಚರಂಡಿ ವ್ಯವಸ್ತೆ ಕಂಡಿಲ್ಲ. ಈ ಕುರಿತು ನಾಗರಿಕರು ರೋಶಿ ಹೋಗಿದ್ದು, ಪುರಸಭೆಗೆ ದುಂಬಾಲು ಬಿದ್ದರು ಯಾವುದೇ ಪ್ರಯೋಜನವಾಗಿಲ್ಲವೆಂದು ನಾಗಪ್ಪ ಕೊಪ್ಪದ, ಬಸವರಾಜ ಇಟಗಿ, ಸೋಮವ್ವ ವಕ್ಕುಂದ ದೂರಿದರು.
ಮಳೆಗಾಲದಲ್ಲಿ ರಸ್ತೆ ತುಂಬೆಲ್ಲ ನೀರು ಜಲ್ಲಿಕಲ್ಲುಗಳು, ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಮಕ್ಕಳು ಮನೆ ಮುಂಬಾಗದಲ್ಲಿ ಆಟವಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗರಿಕರು ದೂರು ಸಲ್ಲಿಸಿದಾಗ ಮಾತ್ರ ಓಣಿಗೆ ಬಂದು ಪರೀಶೀಲನೆ ಮಾಡಿ ಮಾತಿನಲ್ಲಿಯೇ ಅಭಿವೃದ್ದಿ ಭರವಸೆ ನೀಡುತ್ತಾರೆ ವಿನಹ: ಅಭಿವೃದ್ಧಿ ಮಾತನ್ನು ಕೇಳಬೇಡಿ ಎಂಬಂತಾಗಿದೆ.
ಸಂಜೆಯಾಗುತ್ತಲೇ ಬೀದಿ ದೀಪವಿಲ್ಲದೆ ಕತ್ತಲಮಯವಾಗುತ್ತದೆ. ಹಿರಿಯ ನಾಗರಿಕರಿಗೆ , ಬೈಕ್ ಸವಾರರಿಗೆ ತುಂಬಾ ತೊಂದರೆಯಾಗುತ್ತದೆ. ಬೈಕ ಸವಾರರು ಸ್ಕೀಡ್ ಆಗಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸಂಭವಿಸಿ ಸಾವಿರಾರು ರೂ.ಆಸ್ಪತ್ರೆಗೆ ಸುರಿಯುವಂತಾಗಿದೆ. ಪ್ರಭಾವಿ ಸದಸ್ಯರ ವಾರ್ಡಿನಲ್ಲಿ ಮಾತ್ರ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿವೆ ಎಂದು ವಾರ್ಡಿನ ನಾಗರಿಕರಲ್ಲಿ ಮಾತುಗಳು ಕೇಳಿ ಬರುತ್ತಿವೆ. ಪುರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಾಗರಿಕರಿಗೆ ಸಮರ್ಪಕವಾದ ರಸ್ತೆ , ಚರಂಡಿ, ಬೀದೀದೀಪ ಅಳವಡಿಸುತ್ತಾರೆ ಎಂದು ಕಾದು ನೋಡುವಂತಾಗಿದೆ.
ಕಳೆದ ಎರಡು ದಶಕಗಳಿಂದ ಮಡಿವಾಳೇಶ್ವರ ಕಾಲೋನಿಯ ಕೆಲವು ಮನೆಯ ಹತ್ತಿರ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದು ಕೂಡಲೇ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.
--ಸುರೇಶ ಬರಗಲಿ,
ಮಂಜು ಇಟಗಿ, ವಾರ್ಡಿನ ನಾಗರಿಕರು.