ಮುದ್ದೆಬಿಹಾಲ್

ವಾರ್ಡ ನಂ 01 ರಿಂದ 23 ಬಯಲು ಶೌಚ ಮುಕ್ತ ಘೋಷಣೆ

ವಾರ್ಡ ನಂ 01 ರಿಂದ 23 ಬಯಲು ಶೌಚ ಮುಕ್ತ ಘೋಷಣೆ

ಮುದ್ದೇಬಿಹಾಳ 17: ಪಟ್ಟಣದ ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ವಾರ್ಡ ನಂ 01 ರಿಂದ 23 ವಾರ್ಡನ್ನು ಬಯಲು ಶೌಚ ಮುಕ್ತ  ಎಂದು ಘೋಷಿಸಿಕೊಳ್ಳಲಾಗಿದೆ. ಅದರಂತೆ ಸಾರ್ವಜನಿಕ ಸ್ಥಳದಲ್ಲಿ ಮಲ/ಮೂತ್ರ ಮಾಡಬಾರದು. ಹಾಗೂ ಸಾರ್ವಜನಿಕರ ಸ್ಥಳದಲ್ಲಿ ಉಗುಳಬಾರದು, ಸಾರ್ವಜನಿಕರ ಸ್ಥಳದಲ್ಲಿ ಕಸ ಹಾಕುವುದು, ವಾಣಿಜ್ಯ ಮಳಿಗೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ನ್ನು ಬಳಕೆ ಮಾಡಬಾರದು /ಮಾರಾಟ ಮಾಡಬಾರದು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ​‍್ಸ‌ನ ಆಕ್ಟ್‌ನಂತೆ ಪುರಸಭೆ ವ್ಯಾಪ್ತಿಯಲ್ಲಿ ಬರಿಗೈಯಿಂದ ಮಲ ಮೂತ್ರಗಳನ್ನು ಸ್ವಚ್ಛತೆಯನ್ನು ಮಾಡಿಸುವಂತಿಲ್ಲ ಬದಲಿಗೆ ನಿಮ್ಮ ನಿಮ್ಮ ಮನೆಯ ಶೌಚ ಗುಂಡಿಗಳನ್ನು ಡಿ-ಸ್ಲಡ್ಜಿಂಗ್ ಮೆಷಿನ್‌ನಿಂದ ಸ್ವಚ್ಛಗೊಳಿಸಲು ಪುರಸಭೆಯ ದೂರವಾಣಿ 08356-220876 ನ್ನು ಸಂಪರ್ಕಿಸಬಹುದು.  

ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ “ಕರ್ನಾಟಕ ಮುನಿಸಿಪಾಲೀಟೀಸ್ ಕರಡು ಮಾದರಿ ಘನತ್ಯಾಜ್ಯ ನಿರ್ವಹಣಾ ಉಪನಿಯಮಗಳು(ಉಪಕಾಯಿದೆ)” ರ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವುದು, ಬಯಲು ಮಲ/ಮೂತ್ರ ವಿರ್ಸಜನೆ ಮಾಡುವುದು. ಹಾಗೂ ಸಾರ್ವಜನಿಕರ ಸ್ಥಳದಲ್ಲಿ ಉಗುಳುವುದು, ಸಾರ್ವಜನಿಕರ ಸ್ಥಳದಲ್ಲಿ ಕಸ ಹಾಕುವುದಕ್ಕೆ ದಂಡ ರೂ.200/- ಮತ್ತು ನಿಷೇಧಿತ ಪ್ಲಾಸ್ಟಿಕ್ ಬಳಕೆ/ಮಾರಾಟ ಮಾಡುವುದಕ್ಕೆ ದಂಡ ರೂ 100 ರಿಂದ 5000. ಹಾಕಲಾಗುವುದು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ನಗರಸಭೆಗೆ 07 ದಿನಗಳೊಳಗೆ ಆರೋಗ್ಯ ಶಾಖೆಯನ್ನು ಸಂಪರ್ಕಿಸಬಹುದು. 


ಸುದ್ದಿ ಓದಿ