ಮನೆ ಮನೆಗೆ ತೆರಳಿ ಮತಯಾಚನೆ
ಬಳ್ಳಾರಿ 23: ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಅಂಗವಾಗಿ ಇದೇ 27ರಂದು ನಡೆಯಲಿರುವ 36ನೇ ವಾರ್ಡಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಪಿ.ಕಲ್ಪನಾ ಅವರ ಪರವಾಗಿ ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಅವರ ಧರ್ಮಪತ್ನಿ ಬಿ.ವಿ.ಶ್ರೀಲತಾ ಅವರು ರಾಜರಾಜೇಶ್ವರಿ ನಗರ, ಹವಂಭಾವಿ, ರಾಮನಗರ, ಶಿಲ್ಪಿನಗರ ಪ್ರದೇಶಗಳಲ್ಲಿ ವಿಸ್ತೃತವಾಗಿ ಸಂಚರಿಸಿ ಮನೆ ಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಿ.ಕಲ್ಪನಾ ಅವರನ್ನು ಆಯ್ಕೆ ಮಾಡಿದರೆ 36ನೇ ವಾರ್ಡಿನ ಜನತೆಗೆ ಅಗತ್ಯವಾದ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು. ಅಲ್ಲದೇ ಮಹಾನಗರ ಪಾಲಿಕೆಯ ವತಿಯಿಂದ ಸಿಗಬೇಕಾದ ಎಲ್ಲಾ ಯೋಜನೆಗಳನ್ನು ಒದಗಿಸಲು ಶ್ರಮ ವಹಿಸುವುದಾಗಿ ಭರವಸೆ ನೀಡಿದರು. ಬಿ.ವಿ.ಶ್ರೀನಿವಾಸರೆಡ್ಡಿ ಅವರು ಮತಯಾಚಿಸಲು ತೆರಳಿದ ಬಹುತೇಕ ಪ್ರದೇಶಗಳಲ್ಲಿ ಅವರನ್ನು ಹೂಮಾಲೆ ಹಾಕಿ ಬರಮಾಡಿಕೊಳ್ಳುವುದು ತುಂಬಾ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಅವರೊಂದಿಗೆ ವಾರ್ಡಿನ ಬಿಜೆಪಿ ಮುಖಂಡರು, ಹಿರಿಯರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.