ವಿದ್ಯಾರ್ಥಿಗಳಿಗೆ ಮತದಾನದ ಜಾಗೃತಿಯಿಂದ ಪ್ರಜಾಪ್ರಭುತ್ವ ಗಟ್ಟಿ: ಪ್ಯಾಟಿ
ಲೋಕದರ್ಶನ ವರದಿ
ಬೈಲಹೊಂಗಲ 10: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಜಾಗೃತಿಯನ್ನು ಉಂಟು ಮಾಡುವುದರಿಂದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಹೇಳಿದರು.
ಅವರು ಕೇಂದ್ರ ಚುನಾವಣಾ ಆಯೋಗದ ನಿರ್ದೇಶ ನದಂತೆ 2022ನೇ ಸಾಲಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆ ಗಳನ್ನು ಉದ್ಘಾಟಿಸಿ ಮಾತನಾಡಿ, ಮತದಾನದ ಪ್ರಕ್ರಿಯೆಗಳು. ಮತದಾನವನ್ನು ಹೇಗೆ ಮಾಡಬೇಕು? ಅದರ ಕುರಿತಾಗಿ ಜ್ಞಾನವನ್ನು ಹೊಂದುತ್ತಾರೆ. ತಮ್ಮ ಮನೆಯಲ್ಲಿರುವ ಸದಸ್ಯರಿಗೂ ಮತದಾನದ ಜ್ಞಾನವನ್ನು ಮೂಡಿಸುತ್ತಾರೆ. ಇಂದಿನ ಪ್ರೌಢ ಹಂತದ ವಿದ್ಯಾರ್ಥಿ ಗಳೇ ಇನ್ನೂ ಎರಡು-ಮೂರು ವರ್ಷಗಳಲ್ಲಿ ಮತದಾನದ ಹಕ್ಕನ್ನು ಹೊಂದುತ್ತಾರೆ. ಆದ್ದರಿಂದ ಸ್ಪರ್ಧೆ ಗಳನ್ನು ಏರ್ಪಡಿಸಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.
ಯುವ ಮತದಾರರು ಮತದಾನದ ಹಕ್ಕು ಬಂದಾಗ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಅವರು ಯೋಗ್ಶ ವ್ಶಕ್ತಿಯನ್ನು ಚುನಾಯಿಸುವರು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಬಿ ಎನ್.ಕಸಾಳೆ ಮಾತನಾಡಿ, ಸದೃಢ ಪ್ರಜಾಪ್ರಭುತ್ವಕ್ಕಾಗಿ ಮತದಾನ ಜಾಗೃತಿ ಅಂಗವಾಗಿ ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿದ್ದು ಅದರಲ್ಲಿ ಅವರು ಜಿಲ್ಲಾ ಹಂತ ಹಾಗೂ ರಾಜ್ಶ ಹಂತದಲ್ಲಿ ಕೂಡ ಪ್ರಶಸ್ತಿಗಳನ್ನು ತರಲೆಂದರು.
ಶಾಲಾ ಹಂತದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವ ಮಕ್ಕಳು ಪ್ರಬಂಧ ರಸಪ್ರಶ್ನೆ ಹಾಗೂ ಬಿತ್ತಿಚಿತ್ರ ತಯಾರಿಸುವ ಸ್ಪರ್ಧೆ ಯಲ್ಲಿ ಭಾಗವಹಿಸಿದ್ದರು.
ರಸಪ್ರಶ್ನೆಯಲ್ಲಿ ಸರಕಾರಿ ಪ್ರೌಢಶಾಲೆ ಚಿಕ್ಕ ಬಾಗೇವಾಡಿ, ಇಂಗ್ಲಿಷ್ ಪ್ರಬಂಧದಲ್ಲಿ ಸರಕಾರಿ ಪ್ರೌಢಶಾಲೆ ಕೆಂಗಾನೂರ., ಕನ್ನಡ ಪ್ರಬಂಧ ಮುರಾರ್ಜಿ ದೇಸಾಯಿ ಬೈಲಹೊಂಗಲ., ಬಿತ್ತಿಚಿತ್ರ ತಯಾರಿಕೆಯಲ್ಲಿ ವಿದ್ಯಾ ಮಂದಿರ ಪ್ರೌಢಶಾಲೆ ನೇಸರಗಿ ಬಹುಮಾನವನ್ನು ಪಡೆದುಕೊಂಡರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ಪುಸ್ತಕಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
ಶಿವಪ್ಪ ಚಳಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ ಆರ್ ಸಿ ಅಜ್ಜಪ್ಪ ಅಂಗಡಿ ನಿರೂಪಿಸಿದರು, ಶಿವಾನಂದ ಕುರಿ ವಂದಿಸಿದರು