ಲೇಖನಗಳು

ಮತದಾನ ಜಾಗೃತಿ

ಮತದಾನ ಜಾಗೃತಿ

ಇದೇ ದಿ. 03-09-2021 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಚುನಾವನೆ ಇದೆ, ಎಲ್ಲರೂ ಮತ ಚಲಾಯಿಸಲು ಉದಾಸೀನ ಬೇಡಿ, 

ನಮ್ಮ ಮತ ನಮ್ಮ ಹಕ್ಕು. ನಮಗೆ ನೀಡಲ್ಪಟ್ಟ ಹಕ್ಕನ್ನು ಚಲಾಯಿಸದೇ ಬಿಟ್ಟಲ್ಲಿ ನಾವು ದೊಡ್ಡ ಮೂರ್ಖರಾಗುತ್ತೇವೆ. ಮತದಾನವು ನಮಗೆ ಸಂವಿಧಾನದ ಹಕ್ಕನ್ನು ನೀಡುವುದ ರೊಂದಿಗೆ ಭಾದ್ಯತೆ ಕೂಡಾ ನೀಡುತ್ತದೆ. ನಾವು ದೇಶದ ನಿಜವಾದ ಪ್ರಜೆಗಳೇ ಆದರೆ ನಮ್ಮ ಹಕ್ಕು -ಬಾಧ್ಯತೆಗಳನ್ನು ಸರಿಯಾಗಿ ನಿರ್ವಹಿಸಬೇಕು. ಮತ ಚಲಾಯಿಸಲು ಉದಾಸೀನ ಮಾಡಿದರೆ ಅದು ನಮ್ಮ ದುರಂತದ ಸಂಗತಿ ಆಗುತ್ತದೆ. ಅಂತಾ ಹೇಳುತ್ತಾರೆ. ಡಾ. ಶ್ರೀಧರ ಹೊಸಮನಿ ಇಂಟರ್ ನ್ಯಾಶನಲ್ ಯೋಗ ಪಟು, ನಮ್ಮ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿಗಾಗಿ ಅಭಿವೃದ್ಧಿಗಾಗಿ ಮತದಾನ ಚಲಾಯಿಸೋಣ ಮತದಾನವು ಅಮೂಲ್ಯವಾದದ್ದು, ಆರಿಸಿದ ವ್ಯಕ್ತಿ ಸದನದಲ್ಲಿ ದನಿ ಎತ್ತಿ ಆಯಾಯ ಕ್ಷೇತ್ರದ ಜನ ಸಾಮಾನ್ಯರ ಸಮಸ್ಯೆಗಳಿಗೆ ಉತ್ತರ ದೊರಕಿಸಿ ಕೊಳ್ಳುವವರೆಗೆ ಹೋರಾಟ ನಡೆಸುವ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ರಾಷ್ಟ್ರ ರಾಜಕಾರಣಕ್ಕೆ ಆಯ್ಕೆ ಮಾಡುವುದು ಸೂಕ್ತ. 

ಇದು ನನ್ನ ಅನಿಸಿಕೆ ಆಯ್ಕೆ ಮಾಡಿ ಆರಿಸಿದ ವ್ಯಕ್ತಿ ನಮ್ಮ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡಗಳನ್ನು ಅಭಿವೃದ್ಧಿ ಮಾಡುವಂತಾಗಿರಬೇಕು. ಮತದಾನ ನಮ್ಮ 

ನನ್ನ ಹಕ್ಕಿನ ಹೆಗ್ಗುರುತು. ಪ್ರಜಾಪ್ರಭುತ್ವ ತತ್ವಗಳನ್ನು ಗೌರವಿಸುವ, ದೇಶ ರಕ್ಷಣೆಯ ಹೊಣೆಯನ್ನು ನಿಭಾಯಿಸುವ, ಭಾರತದ ಹಿರಿಮೆಯನ್ನು ಕಾಪಾಡುವ, ಜಾತಿ ಮತ - ಪಂಥಗಳ ಗಡಿಯನ್ನು ಮೀರಿ ವಿಶ್ವಮಾನವ ತತ್ವವನ್ನು ತುಂಬಿಕೊಂಡಿರುವ ಭ್ರಷ್ಟಾಚಾರ, ನಿರುದ್ಯೋಗದಂತಹ ಸಮಸ್ಯೆ ನಿವಾರಿಸಬಲ್ಲಂತಹ ಯೋಗ್ಯ ನಾಯಕರ ಆಯ್ಕೆಗೆ ನಾವು ಮತ ಚಲಾಯಿಸಬೇಕು. ನಾವು ಮತದಾನದಿಂದ ತೃಪ್ತಿಯಾಗಬೇಕೇ ಹೊರತು ಪಶ್ಚಾತ್ತಾಪ ಪಡುವಂತಾಗಬಾರದು. ಜನಪ್ರತಿನಿಧಿಗಳನ್ನು ಯೋಗ್ಯ ರೀತಿಯಲ್ಲಿ ಚುನಾಯಿಸಿ ಗೆಲ್ಲಿಸುವುದು ನಿಜವಾದ ಜಾಣತನ. ಮತದಾನ ಮತ್ತು ಚುನಾವಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಮತದಾನವು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ಭಾರತದ ಸಂವಿಧಾನ ನೀಡಿರುವ ಪ್ರಬಲ ಅಸ್ತ್ರ. 

ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಮತದಾನವು ಪ್ರತಿಯೋರ್ವರು ಹಕ್ಕು ಹಾಗೂ ಕರ್ತವ್ಯವಾಗಿದೆ. ಹೆಣ ಹೆಂಡ ಆಮಿಷಕ್ಕೆ ಬಲಿಯಾಗದೇ ಮತದಾನದ ಮಹತ್ವ ಅರಿತು ಸಮರ್ಥರಿಗೆ ಮತ ಚಲಾಯಿಸಿದಲ್ಲಿ ಭದ್ರ ಬುನಾದಿಯ ಸರಕಾರ ನಿಮರ್ಾಣ ಸಾಧ್ಯ. ನಮ್ಮ ನೈತಿಕ ಜವಾಬ್ದಾರಿಗಳನ್ನು ಪೂರೈಸಬೇಕು. ಅದಕ್ಕಾಗಿ ನಮ್ಮ ಮತ ಚಲಾವಣೆಯಾಗಬೇಕಿದೆ. 

ಇಂದಿನ ಜೀವನವು ಒತ್ತಡದಿಂದ ನಡೆಯುತ್ತಿದೆ. ಆ  ನಡುವೆಯು ನಾವು ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಪಾಲಿಸಬೇಕಾದ ಅನಿವಾರ್ಯತೆ ಇದೆ. ಇದನ್ನು ನಾವು ತಪ್ಪದೆ ಪಾಲಿಸಬೇಕು ಅಂತಾ ಹೇಳುತ್ತಾರೆ ಡಾ. ಶ್ರೀಧರ 

ಪ್ರಮುಖ ಅಸ್ತ್ರ ಎಂದರೆ ಅದು ಮತದಾನ. 18 ವರ್ಷ ತುಂಬಿದ ಪ್ರತಿಯೊಬ್ಬರು ಮತ ಚಲಾಯಿಸುವುದು ಅವರ ಹಕ್ಕು ಮತ್ತು ಕರ್ತವ್ಯ. ಪ್ರತಿಯೊಬ್ಬರೂ ಜೀವನೋಪಾಯಕ್ಕಾಗಿ ತಮ್ಮದೇ ವೃತ್ತಿಯಲ್ಲಿ ನಿರತರಾಗಿರುತ್ತಾರೆ. ಇದರಿಂದ ಸರಕಾರ ಅಥವಾ ಇತರೆ ಆಡಳಿತ ವ್ಯವಸ್ಥೆಯಲ್ಲಿ ನೇರ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿನಿಧಿ ಆಯ್ಕೆಯಿಂದ ಪರೋಕ್ಷವಾಗಿ ನಾವು ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಬಹುದು. ಇಲ್ಲಿ ಕೇವಲ ಒಬ್ಬ ಅಭ್ಯಥರ್ಿಗಾಗಿ ಮತ ಚಲಾಯಿಸುವ ಬದಲು, 

ನಮ್ಮ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಾರ್ಡಗಳನ್ನು ಅಭಿವೃದ್ಧಿ ಮಾಡಿ ದೇಶದ ಭವಿಷ್ಯದ ದೃಷ್ಟಿಯಿಂದ ಮತದಾನ ಮಾಡುವುದು ಮುಖ್ಯವಾಗಿರುತ್ತದೆ. ಎಲ್ಲರೂ ತಪ್ಪದೇ ಮತದಾನ ಮಾಡಿ ಅಂತಾ ಹೇಳುತ್ತಾರೆ. 

ಡಾ. ಶ್ರೀಧರ ಹೊಸಮನಿ 

 

ಸುದ್ದಿ ಓದಿ