ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಜಾಥಾ
ತಾಳಿಕೋಟಿ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ವಿಜಾಪುರ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅವರ ಸಹಯೋಗದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ರ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.
ಪಟ್ಟಣದ ಎಸ್.ಕೆ. ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಹಶೀಲ್ದಾರ ಶ್ರೀಧರ ಗೋಟೂರ ಅವರು 18 ವರ್ಷ ಮೇಲ್ಪಟ್ಟ ಕುಟುಂಬದ ಹೆಸರು ಪರಿಶೀಲಿಸಿ ತಿದ್ದುಪಡಿ ಮಾಡಲು ಅವಕಾಶ ಇದೆ. ಈ ಮಾಸದ 12ನೇ ತಾರೀಖು 17 ವರ್ಷ ಪೂರೈಸಿದ ಎಲ್ಲರೂ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಿ. ನಿಮ್ಮ ಆಧಾರ ಕಾರ್ಡನ ಜನ್ಮ ದಾಖಲೆ ಪ್ರಮಾಣ ಪತ್ರ, ಅಂಕಪಟ್ಟಿ ಅಥವಾ ಟಿಸಿ ಒಂದು ಭಾವಚಿತ್ರ ಕೊಟ್ಟು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಿ, ಮತಗಟ್ಟೆ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ನಿಮ್ಮ ಆ ದಾಖಲೆಪತ್ರಗಳನ್ನು ಅವರಿಗೆ ಕೊಡಿ. ತಿದ್ದುಪಡಿ ಮಾಡಲು ನಮೂನೆ 8 ರಲ್ಲಿ ಅರ್ಜಿ ಸಲ್ಲಿಸಿ ಎಂದು ಯುವ ವಿದ್ಯಾಥರ್ಿಗಳಿಗೆ ತಿಳಿಸಿದರು.
ನಂತರ ಜಾಥಾ ಅಭಿಯಾನದಲ್ಲಿ ವಿದ್ಯಾರ್ಥಿಗಳು ಮತದಾರ ಪಟ್ಟಿ ಕುರಿತಾದ ವಿವಿಧ ಮಾಹಿತಿ ಒಳಗೊಂಡ ನಾಮಫಲಕಗಳನ್ನು ಹಿಡಿದುಕೊಂಡು ಘೋಷಣೆ ಹೇಳುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ತಾ.ಪಂ. ಇ.ಓ. ಬಿ.ಆರ್. ಬಿರಾದಾರ, ಎಸ್.ಕೆ. ಪಿಯು ಕಾಲೇಜ ಪ್ರಾಚಾರ್ಯ ಕಿಶೋರಕುಮಾರ, ಸಿ.ಆರ್.ಪಿ. ರಾಜಸಿಂಗ್ ವಿಜಾಪುರ, ಐ.ಇ.ಸಿ. ಸಂಯೋಜಕ ಮಲಕಪ್ಪ, ಬಿ.ಎಂ. ಉಪನ್ಯಾಸಕರು, ವಿದ್ಯಾಥರ್ಿಗಳು ತಾಲೂಕಾಡಳಿತ ಸಿಬ್ಬಂದಿಗಳು ಹಾಗೂ ಸಾರ್ವಜನಿಕರೂ ಭಾಗವಹಿಸಿದ್ದರು