ಮುಂದಗೋಡ

ಬಸವರಾಜ ಹೊರಟ್ಟಿ ಪರ ಮತ ಯಾಚನೆ

ಬಸವರಾಜ ಹೊರಟ್ಟಿ ಪರ ಮತ ಯಾಚನೆ

ಮುಂಡಗೋಡ: ಜೂನ್13ರಂದು ನಡೆಯಲಿರುವ ಕರ್ನಾಟಕ ವಿಧಾನಪರಿಷತ್ ಚುನಾವಣೆ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರ ಪರ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದವರು ಬುಧವಾರ ಪಟ್ಟಣದಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸಿದರು.  

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಎಸ್‌.ಡಿ.ಮುಡೆಣ್ಣವರ 1980ರಿಂದ ಸತತವಾಗಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶ ಪಡೆದು ಹೊರಟ್ಟಿ ಅವರು 7ಬಾರಿ ಅಜೇಯರಾಗಿರುವುದು ಶಿಕ್ಷಕರ ಪರವಾಗಿ ಮಾಡಿದ ತ್ಯಾಗದ ಫಲವಾಗಿದೆ. ಈ ಬಾರಿಯೂ ತಮ್ಮ ಪ್ರಥಮ ಪ್ರಾಶಸ್ತ್ಯದ ಮತದಿಂದಲೇ ಆಯ್ಕೆ ಮಾಡಿ ಹೊಸ ಇತಿಹಾಸ ನಿರ್ಮಿಸಿ ಗಿನ್ನಿಸ್ ದಾಖಲೆಯ ಸಾಧನೆಗೆ ಕಾರಣರಾಗಬೇಕು ಎಂದು ಮತದಾರರಲ್ಲಿ ಕೇಳಿಕೊಂಡರು.    

ಈ ಸಂದರ್ಭದಲ್ಲಿ ಸೈಯದ್ ಮೆಹಬೂಬ, ತುಳಜಪ್ಪ ಹುಮನಾಬಾದ, ರಮೇಶ ಪವಾರ, ಶರಣಪ್ಪ ಜಡದೆಲಿ, ರವಿ ಅಕ್ಕಿವಳ್ಳಿ, ಮಂಜುನಾಥ ನಾಯ್ಕ, ಸಂತೋಷ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ